ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಿರುಕುಳ, ಪತಿಯ ವಿರುದ್ಧ FIR
ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ ಪತ್ನಿ, ಪತಿಯ ವಿರುದ್ಧ ಕೇಸ್ ದಾಖಲಿಸಿದ್ದು, ಪತಿ ಲತೀರ್ ರೆಹಮಾನ್ ವಿರುದ್ಧ FIR ದಾಖಲಾಗಿದೆ. ಪತಿ ಕಿರುಕುಳ ತಾಳಲಾರದೆ ಸಂತ್ರಸ್ಥೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ವಿರುದ್ದ ಎಫ್ಐಆರ್ ದಾಖಲಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ದೂರುದಾರ ಸಂತ್ರಸ್ಥೆ. 2019 ರ ಜೂನ್ನಲ್ಲಿ ಲತೀರ್ ರೆಹಮಾನ್ ಜತೆ ವಿವಾಹವಾಗಿದ್ದರು. ವಿವಾಹ ಬಳಿಕ ವರದಕ್ಷಿಣೆಗಾಗಿ ಲತೀರ್ ಕಿರುಕುಳ ನೀಡ್ತಿದ್ದ. ಹೆಚ್ಚಿನ ವರದಕ್ಷಿಣೆಗಾಗಿ […]

ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಿರುಕುಳ ನೀಡಿದ ಆರೋಪ ಹಿನ್ನೆಲೆಯಲ್ಲಿ ಪತ್ನಿ, ಪತಿಯ ವಿರುದ್ಧ ಕೇಸ್ ದಾಖಲಿಸಿದ್ದು, ಪತಿ ಲತೀರ್ ರೆಹಮಾನ್ ವಿರುದ್ಧ FIR ದಾಖಲಾಗಿದೆ. ಪತಿ ಕಿರುಕುಳ ತಾಳಲಾರದೆ ಸಂತ್ರಸ್ಥೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ವಿರುದ್ದ ಎಫ್ಐಆರ್ ದಾಖಲಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ದೂರುದಾರ ಸಂತ್ರಸ್ಥೆ. 2019 ರ ಜೂನ್ನಲ್ಲಿ ಲತೀರ್ ರೆಹಮಾನ್ ಜತೆ ವಿವಾಹವಾಗಿದ್ದರು. ವಿವಾಹ ಬಳಿಕ ವರದಕ್ಷಿಣೆಗಾಗಿ ಲತೀರ್ ಕಿರುಕುಳ ನೀಡ್ತಿದ್ದ. ಹೆಚ್ಚಿನ ವರದಕ್ಷಿಣೆಗಾಗಿ ಪತಿ ಮನೆಯವರು ಸಂತ್ರಸ್ಥೆಯಿಂದ ಚಿನ್ನಾಭರಣ ಕಸಿದು ಹೊರದಬ್ಬಿದ ಆರೋಪ ಕೂಡ ಇದೆ. ಸದ್ಯ ಈ ಕಿರುಕುಳ ತಾಳಲಾಗದೆ ಆರೋಪಿ ವಿರುದ್ದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.




