‘BBMP ನಿಗದಿ ಪಡಿಸಿರುವ ದರದಲ್ಲಿ ಚಿಕಿತ್ಸೆ ಬೇಕಂದ್ರೆ ಬೇರೆ ಆಸ್ಪತ್ರೆಗೆ ಹೋಗಿ’

ಬೆಂಗಳೂರು: ಹೈ ಬಿಪಿಯಿಂದ ಬಳಲುತ್ತಿದ್ದ 69 ವರ್ಷದ ರೋಗಿಯೊಬ್ಬರ ಪರದಾಟ ಇದೀಗ ಬೆಳಕಿಗೆ ಬಂದಿದೆ. ಜುಲೈ 24 ರಂದು ವೃದ್ಧರು ಚಿಕಿತ್ಸೆಗೆಂದು ಸ್ಪರ್ಶ್​​ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ನಿನ್ನೆ ಬಂದ ಕೊವಿಡ್​ ರಿಪೋರ್ಟ್​ನಲ್ಲಿ ಪಾಸಿಟಿವ್ ಎಂದು ತಿಳಿದುಬಂತು. ಈ ನಡುವೆ, ಆಸ್ಪತ್ರೆಯು ರೋಗಿಯನ್ನ ಡಿಸ್ಚಾರ್ಜ್​ ಮಾಡಲು ಮೂರುವರೆ ಲಕ್ಷ ಪಾವತಿಸಲು ಸೂಚನೆ ನೀಡಿದೆ. ಈಗಾಗಲೇ, ವೃದ್ಧನ ಮಕ್ಕಳು 2 ಲಕ್ಷ ಬಿಲ್​ ಪಾವತಿ ಮಾಡಿದ್ದಾರೆ. ಆದರೆ, ಉಳಿದ ಮೊತ್ತವನ್ನ ಪಾವತಿಸಲು ಆಸ್ಪತ್ರೆ ಸಿಬ್ಬಂದಿ ಒತ್ತಾಯ […]

‘BBMP ನಿಗದಿ ಪಡಿಸಿರುವ ದರದಲ್ಲಿ ಚಿಕಿತ್ಸೆ ಬೇಕಂದ್ರೆ ಬೇರೆ ಆಸ್ಪತ್ರೆಗೆ ಹೋಗಿ’
Follow us
KUSHAL V
|

Updated on:Jul 31, 2020 | 7:34 AM

ಬೆಂಗಳೂರು: ಹೈ ಬಿಪಿಯಿಂದ ಬಳಲುತ್ತಿದ್ದ 69 ವರ್ಷದ ರೋಗಿಯೊಬ್ಬರ ಪರದಾಟ ಇದೀಗ ಬೆಳಕಿಗೆ ಬಂದಿದೆ. ಜುಲೈ 24 ರಂದು ವೃದ್ಧರು ಚಿಕಿತ್ಸೆಗೆಂದು ಸ್ಪರ್ಶ್​​ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ನಿನ್ನೆ ಬಂದ ಕೊವಿಡ್​ ರಿಪೋರ್ಟ್​ನಲ್ಲಿ ಪಾಸಿಟಿವ್ ಎಂದು ತಿಳಿದುಬಂತು.

ಈ ನಡುವೆ, ಆಸ್ಪತ್ರೆಯು ರೋಗಿಯನ್ನ ಡಿಸ್ಚಾರ್ಜ್​ ಮಾಡಲು ಮೂರುವರೆ ಲಕ್ಷ ಪಾವತಿಸಲು ಸೂಚನೆ ನೀಡಿದೆ. ಈಗಾಗಲೇ, ವೃದ್ಧನ ಮಕ್ಕಳು 2 ಲಕ್ಷ ಬಿಲ್​ ಪಾವತಿ ಮಾಡಿದ್ದಾರೆ. ಆದರೆ, ಉಳಿದ ಮೊತ್ತವನ್ನ ಪಾವತಿಸಲು ಆಸ್ಪತ್ರೆ ಸಿಬ್ಬಂದಿ ಒತ್ತಾಯ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಮ್ಮಲ್ಲಿ ಹಣ ಇಲ್ಲ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ಸ್ಪರ್ಶ್​ ಆಸ್ಪತ್ರೆಯ ಸಿಬ್ಬಂದಿ ಕೇಳುತ್ತಿಲ್ಲವಂತೆ.

ನಾವು ಕ್ವಾರಂಟೈನ್​ನಲ್ಲಿ ಇದ್ದೇವೆ. ಹೀಗಾಗಿ, ಹಣ ಹೊಂದಿಸಲು ಪರದಾಡುತ್ತಿದ್ದೇವೆ ಎಂದು ವೃದ್ಧನ ಕುಟುಂಬಸ್ಥರು  ಕೇಳಿಕೊಂಡರೂ ಆಸ್ಪತ್ರೆಯ ಸಿಬ್ಬಂದಿ ಒಪ್ಪುತ್ತಿಲ್ಲವಂತೆ.

ಜೊತೆಗೆ, BBMPಯವರು ಹೇಳಿದ್ರೂ ಸ್ಪರ್ಶ್​ ಸಿಬ್ಬಂದಿ ಬಿಲ್​ ಪಾವತಿಸಲು ಒತ್ತಾಯ ಹೇರುತ್ತಿದ್ದಾರಂತೆ. ನಮ್ಮ ಆಸ್ಪತ್ರೆ BBMPಯ ಕೊವಿಡ್​ ವಾರ್​ ರೂಮ್​ ವ್ಯಾಪ್ತಿಗೆ ಬರುವುದಿಲ್ಲ. BBMP ದರದಲ್ಲೇ ಚಿಕಿತ್ಸೆ ಬೇಕು ಅಂದ್ರೆ ಬೇರೆ ಆಸ್ಪತ್ರೆಗೆ ಹೋಗಿ ಎಂದು ಹೇಳಿ ಉಳಿದ ಮೊತ್ತಕ್ಕಾಗಿ ಬೇಡಿಕೆ ಇಡುತ್ತಿದ್ದಾರಂತೆ.

Published On - 7:31 am, Fri, 31 July 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ