India vs Australia Test Series ಸ್ಮಿತ್ ಸೆಂಚುರಿ.. ಜಡೇಜಾಗೆ 4 ವಿಕೆಟ್: ಆಸ್ಟ್ರೇಲಿಯಾ ಆಲೌಟ್
ಟೀಂ ಇಂಡಿಯಾ ಪರ 4 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್ನ ಯಶಸ್ವಿ ಬೌಲರ್ ಎನಿಸಿಕೊಂಡರು. ಹಾಗೆಯೇ ನವ್ದೀಪ್ ಸೈನಿ ಹಾಗೂ ಬುಮ್ರಾ ತಲಾ ವಿಕೆಟ್ ತೆಗೆಯುವುದರ ಮುಖಾಂತರ ತಂಡಕ್ಕೆ ನೆರವಾದರು. ವೇಗಿ ಸಿರಾಜ್ ಕೂಡ 1 ವಿಕೆಟ್ ತೆಗೆದು ಮಿಂಚಿದರು.

ಸಿಡ್ನಿ: ಇಂಡಿಯಾ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ನ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಆಸಿಸ್ ಪಡೆಯನ್ನು 338 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್ಗಳು ಯಶಸ್ವಿಯಾಗಿದ್ದಾರೆ.
ಆಸಿಸ್ ಪರ ಸ್ಟೀವ್ ಸ್ಮಿತ್ 130 ರನ್ ಗಳಿಸಿ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲಿಗರಾದರು. ಸ್ಮಿತ್ ಜೊತೆಗೆ, ಲಾಬುಶೆನ್ 91 ರನ್ ಗಳಿಸಿದರೆ, ಚೊಚ್ಚಲ ಪಂದ್ಯವನ್ನಾಡಿದ ವಿಲ್ ಪುಕೋವ್ಸ್ಕಿ 62 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ ನೆರವಾದರು.
3ನೇ ಟೆಸ್ಟ್‌ನ ಮೊದಲನೇ ದಿನದಲ್ಲಿ 166 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದ ಆಸಿಸ್ ತಂಡ, 3ನೇ ದಿನದಾಟದಲ್ಲಿ ಉತ್ತಮ ಆರಂಭ ಪಡೆಯಿತು. ಸ್ಮಿತ್ ಜೊತೆಗೂಡಿದ ಲಾಬುಶೆನ್ ತಂಡಕ್ಕೆ ಬೇಕಾದ ಅಡಿಪಾಯ ಹಾಕಿಕೊಟ್ಟರು. ಆದರೆ 2ನೇ ಸೆಷನ್ ಆರಂಭಕ್ಕೂ ಮುನ್ನ ಕೇವಲ 5 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ತಂಡ, 2ನೇ ಸೆಷನ್ ಮುಗಿಯುವುದರೊಳಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 338 ರನ್ ಗಳಿಸಿತು.
ಆಸಿಸ್ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್ಗಳು ಯಶಸ್ವಿಯಾದರು. ಅದರಲ್ಲೂ ಟೀಂ ಇಂಡಿಯಾ ಪರ 4 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್ನ ಯಶಸ್ವಿ ಬೌಲರ್ ಎನಿಸಿಕೊಂಡರು. ಹಾಗೆಯೇ ನವ್ದೀಪ್ ಸೈನಿ ಹಾಗೂ ಬುಮ್ರಾ ತಲಾ 2 ವಿಕೆಟ್ ತೆಗೆಯುವುದರ ಮೂಲಕ ತಂಡಕ್ಕೆ ನೆರವಾದರು. ವೇಗಿ ಸಿರಾಜ್ ಕೂಡ 1 ವಿಕೆಟ್ ತೆಗೆದರು.
ಈಗಾಗಲೇ ತಮ್ಮ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 26 ರನ್ ಗಳಿಸಿದೆ. ರೋಹಿತ್ ಶರ್ಮ ಹಾಗೂ ಶು ಭ್ ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಪಂತ್ ವಿಶ್ವದಲ್ಲೇ ಅತಿಹೆಚ್ಚು ಕ್ಯಾಚ್ಗಳನ್ನು ಡ್ರಾಪ್ ಮಾಡಿರುವ ವಿಕೆಟ್ ಕೀಪರ್: ರಿಕ್ಕಿ ಪಾಂಟಿಂಗ್
