ಮಳೆ ತಂದ ಅವಾಂತರ: ಗುಂಡಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್, ಗ್ರಾಮಸ್ಥರ ಹರಸಾಹಸ

ಮಳೆ ತಂದ ಅವಾಂತರ: ಗುಂಡಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್, ಗ್ರಾಮಸ್ಥರ ಹರಸಾಹಸ

ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಇದರಿಂದ ಅನೇಕ ಅನಾಹುತಗಳು ಎದುರಾಗುತ್ತಿವೆ. ಚಳ್ಳಕೆರೆ ತಾಲೂಕಿನ ಚಿಗತನಹಳ್ಳಿಯಲ್ಲಿ ನೀರಿನ ರಭಸಕ್ಕೆ ದಿಕ್ಕುತಪ್ಪಿ ಚಲಿಸಿದ ಟ್ರ್ಯಾಕ್ಟರ್, ಗುಂಡಿಯಲ್ಲಿ ಸಿಲುಕಿಕೊಂಡಿದ ಘಟನೆ ನಡೆದಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಯೂ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ತುಂಬಿ‌ ಹರಿಯುವ ಹಳ್ಳದಲ್ಲಿ ಟ್ರ್ಯಾಕ್ಟರ್ ಸಿಲುಕಿದೆ. ತುಂಬಿ‌ ಹರಿಯುತ್ತಿರುವ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಚಾಲಕ ಅವಾಂತರಕ್ಕೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಅದೃಷ್ಟವಶಾತ್ ಟ್ರ್ಯಾಕ್ಟರ್‌ನಲ್ಲಿದ್ದ‌ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರ್ ಹೊರ ತೆಗೆಯಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

Click on your DTH Provider to Add TV9 Kannada