ಬಾದಾಮಿ ಗಾಳಿ ಮಳೆ: ಹೊಲಗಳಲ್ಲಿ ಸಾಲು ಸಾಲು ನೆಲಕಚ್ಚಿದ ವಿದ್ಯುತ್ ಕಂಬಗಳು

|

Updated on: Jun 02, 2020 | 12:58 PM

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯ ಅವಾಂತರದಿಂದಾಗಿ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಗಾಳಿ ಹಿನ್ನೆಲೆಯಲ್ಲಿ 5 ಮನೆಗಳ ಮೇಲ್ಚಾವಣಿ ಹಾರಿಹೋಗಿದೆ. ಗಾಳಿ ಸಹಿತ ಮಳೆಗೆ ಬಾದಾಮಿ ಹೊರವಲಯದ ರೈತರ ಹೊಲದಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹೊಲದಲ್ಲಿ ಅಲ್ಲಲ್ಲಿ ಮೇಲ್ಚಾವಣಿ ತಗಡುಗಳು ಹಾರಿ ಬಿದ್ದಿವೆ. ಕೆಲ ಮನೆಗಳ ಗೋಡೆಗಳು ಬಿದ್ದಿವೆ. ಮರಗಳು ಧರೆಗುರುಳಿವೆ. ಅಪಾರ ಪ್ರಮಾಣದ ಕಬ್ಬಿನ ಬೆಳೆ ನಾಶವಾಗಿದೆ. ರಾಮಪ್ಪ, ಗ್ಯಾನಪ್ಪ, ಹನುಮಂತ, ಮಾಗುಂಡಪ್ಪ, ಬಸವರಾಜ ಎಂಬುವರ ಹೊಲದಲ್ಲಿನ ಶೆಡ್ ಮನೆಗಳು, ಪಂಪ್ […]

ಬಾದಾಮಿ ಗಾಳಿ ಮಳೆ: ಹೊಲಗಳಲ್ಲಿ ಸಾಲು ಸಾಲು ನೆಲಕಚ್ಚಿದ ವಿದ್ಯುತ್ ಕಂಬಗಳು
Follow us on

ಬಾಗಲಕೋಟೆ: ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಯ ಅವಾಂತರದಿಂದಾಗಿ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಗಾಳಿ ಹಿನ್ನೆಲೆಯಲ್ಲಿ 5 ಮನೆಗಳ ಮೇಲ್ಚಾವಣಿ ಹಾರಿಹೋಗಿದೆ.

ಗಾಳಿ ಸಹಿತ ಮಳೆಗೆ ಬಾದಾಮಿ ಹೊರವಲಯದ ರೈತರ ಹೊಲದಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹೊಲದಲ್ಲಿ ಅಲ್ಲಲ್ಲಿ ಮೇಲ್ಚಾವಣಿ ತಗಡುಗಳು ಹಾರಿ ಬಿದ್ದಿವೆ. ಕೆಲ ಮನೆಗಳ ಗೋಡೆಗಳು ಬಿದ್ದಿವೆ. ಮರಗಳು ಧರೆಗುರುಳಿವೆ. ಅಪಾರ ಪ್ರಮಾಣದ ಕಬ್ಬಿನ ಬೆಳೆ ನಾಶವಾಗಿದೆ. ರಾಮಪ್ಪ, ಗ್ಯಾನಪ್ಪ, ಹನುಮಂತ, ಮಾಗುಂಡಪ್ಪ, ಬಸವರಾಜ ಎಂಬುವರ ಹೊಲದಲ್ಲಿನ ಶೆಡ್ ಮನೆಗಳು, ಪಂಪ್ ಸೆಟ್​ಗಳು, ಜೊತೆಗೆ ಬೆಳೆಯೂ ಹಾನಿಯಾಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Published On - 12:36 pm, Tue, 2 June 20