
ಬೆಂಗಳೂರು: ನವೆಂಬರ್ 3ರಂದು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಎಂದು ಘೋಷಣೆಯಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ H.D.ಕುಮಾರಸ್ವಾಮಿ ಶಿರಾ ಕ್ಷೇತ್ರದ ಉಪಚುನಾವಣೆ ನಮ್ಮ ಪಕ್ಷಕ್ಕೆ ಅಗ್ನಿಪರೀಕ್ಷೆ ಇದ್ದಂತೆ ಎಂದು ಹೇಳಿದ್ರು.
ಬಿಜೆಪಿಯ ಹಣ, ಅಧಿಕಾರ ದುರುಪಯೋಗದ ನಡುವೆ ಶಿರಾ ಕ್ಷೇತ್ರದ ಉಪಚುನಾವಣೆಯನ್ನು ನಾವು ಎದುರಿಸಬೇಕು. 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಚುನಾವಣೆ ನಮಗೆ ಸವಾಲು. ಅವರ ಕುತಂತ್ರ ರಾಜಕಾರಣಕ್ಕೆ ರಣತಂತ್ರ ಹೆಣೆಯಬೇಕು. R.R.ನಗರ, ಶಿರಾ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದೇವೆ.
ಇವತ್ತು ಶಿರಾ ಕ್ಷೇತ್ರದಲ್ಲಿ ಸಭೆ ಕರೆದಿದ್ದೇನೆ. ಈಗಾಗಲೇ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಒಂದು ಸುತ್ತಿನ ಸಭೆ ಮಾಡಿದ್ದೇವೆ. ಈ ಚುನಾವಣೆಯನ್ನು ಗೆಲ್ಲಲೇ ಬೇಕು ಅನ್ನೋದು ನಮ್ಮ ಕಾರ್ಯಕರ್ತರ ಅಪೇಕ್ಷೆ ಎಂದು ಬೆಂಗಳೂರಿನಲ್ಲಿ H.D.ಕುಮಾರಸ್ವಾಮಿ ಹೇಳಿದ್ದಾರೆ.