ಕೊರೊನಾಗೆ ಹೆದರಿ ಬೆಂಗಳೂರಿನಿಂದ ಎಸ್ಕೇಪ್ ಆದ, ಊರಲ್ಲಿ ಪಾಸಿಟಿವ್ ಬಂತು

ಶಿವಮೊಗ್ಗ: ಕರುನಾಡಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನರ್ತನ ಮಾಡ್ತಿದೆ. ಸೋಂಕಿನ ನಂಜು ವೇಗವಾಗಿ ಅಪ್ಪಳಿಸ್ತಿದೆ. ಮಹಾಮಾರಿಗೆ ಜನರೆಲ್ಲಾ ಭಯಭೀತರಾಗಿದ್ದಾರೆ. ಈ ಮಧ್ಯೆ ಕೊರೊನಾಗೆ ಹೆದರಿ ಬೆಂಗಳೂರಿನಿಂದ ಶಿಕಾರಿಪುರ ತಾಲೂಕಿನ ಸ್ವಗ್ರಾಮಕ್ಕೆ ಯುವಕ ಓಡಿಹೋಗಿದ್ದಾನೆ. ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಯುವಕ ರೂಂ ಮಾಡಿಕೊಂಡಿದ್ದ. ರೂಮಿನಲ್ಲಿದ್ದ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ರೂಮ್​ನಲ್ಲಿದ್ದ ಇತರೆ ಮೂವರಿಗೂ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಆದ್ರೆ ವರದಿ ಬರುವ ಮೊದಲೇ ಬೆಂಗಳೂರು ಬಿಟ್ಟು ಮೂವರೂ ಎಸ್ಕೇಪ್ ಆಗಿದ್ದಾರೆ. ಆತಂಕಕಾರಿ ವಿಚಾರವೆಂದರೆ ಮೂವರೂ ಬೇರೆ […]

ಕೊರೊನಾಗೆ ಹೆದರಿ ಬೆಂಗಳೂರಿನಿಂದ ಎಸ್ಕೇಪ್ ಆದ, ಊರಲ್ಲಿ ಪಾಸಿಟಿವ್ ಬಂತು
Follow us
ಸಾಧು ಶ್ರೀನಾಥ್​
|

Updated on: Jul 01, 2020 | 2:06 PM

ಶಿವಮೊಗ್ಗ: ಕರುನಾಡಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನರ್ತನ ಮಾಡ್ತಿದೆ. ಸೋಂಕಿನ ನಂಜು ವೇಗವಾಗಿ ಅಪ್ಪಳಿಸ್ತಿದೆ. ಮಹಾಮಾರಿಗೆ ಜನರೆಲ್ಲಾ ಭಯಭೀತರಾಗಿದ್ದಾರೆ. ಈ ಮಧ್ಯೆ ಕೊರೊನಾಗೆ ಹೆದರಿ ಬೆಂಗಳೂರಿನಿಂದ ಶಿಕಾರಿಪುರ ತಾಲೂಕಿನ ಸ್ವಗ್ರಾಮಕ್ಕೆ ಯುವಕ ಓಡಿಹೋಗಿದ್ದಾನೆ.

ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಯುವಕ ರೂಂ ಮಾಡಿಕೊಂಡಿದ್ದ. ರೂಮಿನಲ್ಲಿದ್ದ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ರೂಮ್​ನಲ್ಲಿದ್ದ ಇತರೆ ಮೂವರಿಗೂ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಆದ್ರೆ ವರದಿ ಬರುವ ಮೊದಲೇ ಬೆಂಗಳೂರು ಬಿಟ್ಟು ಮೂವರೂ ಎಸ್ಕೇಪ್ ಆಗಿದ್ದಾರೆ.

ಆತಂಕಕಾರಿ ವಿಚಾರವೆಂದರೆ ಮೂವರೂ ಬೇರೆ ಬೇರೆ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಈ ಮೂವರಲ್ಲಿ ಶಿಕಾರಿಪುರ ತಾಲೂಕಿನ ಕುಸ್ಕೂರು ಯುವಕ ಕೂಡಾ ಒಬ್ಬನಾಗಿದ್ದಾನೆ. ಈತನಿಗೆ ನಿನ್ನೆ ರಾತ್ರಿ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಯುವಕನನ್ನು ಶಿವಮೊಗ್ಗ ಕೊವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಯುವಕನ ಎಡವಟ್ಟಿನಿಂದ ಗ್ರಾಮದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಸೋಂಕಿತನ ಮನೆ, ಅಕ್ಕಪಕ್ಕದ ಏರಿಯಾಗಳನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.