Ganesha Chaturthi 2024 : ಮಾನವ ಮುಖದ ಗಣೇಶನ ವಿಗ್ರಹ ಹೊಂದಿರುವ ದೇವಾಲಯವಿದು
ಭಾರತದಾದಂತ್ಯ ಇರುವ ಗಣೇಶ ದೇವಾಲಯಗಳಲ್ಲಿ ಆನೆಯ ಸೊಂಡಿಲಿರುವ ಗಣಪತಿಯ ವಿಗ್ರಹವನ್ನು ನೋಡಿರಬಹುದು. ಆದರೆ ಇಲ್ಲಿರುವ ವಿನಾಯಕ ದೇವಸ್ಥಾನದಲ್ಲಿರುವ ವಿಗ್ರಹದಲ್ಲಿ ಆನೆಯ ಸೊಂಡಿಲಿಲ್ಲ. ಇಲ್ಲಿ ಗಣೇಶನನ್ನು ನರ ಮುಖ ವಿನಾಯಕನಾಗಿ ಪೂಜಿಸಲಾಗುತ್ತದೆ. ಹಾಗಾದ್ರೆ ಈ ವಿಶೇಷ ದೇವಾಲಯವಿರುವುದು ಎಲ್ಲಿ? ಇದರ ವಿಶೇಷತೆಯೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಗಣೇಶನ ಹಬ್ಬಕ್ಕೆ ಇನ್ನೇನು ಒಂದೆರಡು ದಿನಗಳಷ್ಟೇ ಬಾಕಿಯಿವೆ. ಈಗಾಗಲೇ ಎಲ್ಲರ ಮನೆಯಲ್ಲಿ ಸೆಪ್ಟೆಂಬರ್ 7 ರಂದು ಗಣೇಶನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಶೇಷವಾದ ದಿನದಂದು ಕೆಲವರು ವಿನಾಯಕ ದೇವಸ್ಥಾನಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಭಾರತದಲ್ಲಿರುವ ಈ ವಿಶೇಷ ಗಣಪತಿ ದೇವಾಲಯಕ್ಕೆ ತೆರಳಿದರೆ ವಿಭಿನ್ನವಾಗಿ ನೆಲೆಸಿರುವ ಗಣೇಶನ ದರ್ಶನವನ್ನು ಮಾಡಬಹುದು. ತಮಿಳುನಾಡಿನಲ್ಲಿ ಒಂದು ವಿಶಿಷ್ಟವಾದ ಗಣಪತಿಯ ದೇವಾಲಯವಿದೆ. ಇಲ್ಲಿ ಗಣೇಶನನ್ನು ಮಾನವನ ಮುಖದೊಂದಿಗೆ ಪೂಜಿಸಲಾಗುತ್ತದೆ.
ಈ ವಿಶಿಷ್ಟ ದೇವಾಲಯವು ತಮಿಳುನಾಡಿನ ತಿಲತರ್ಪಣ ಪುರಿ ಬಳಿಯ ಮುಕ್ತೀಶ್ವರರ್ ದೇವಾಲಯದಲ್ಲಿದೆ. ಇದನ್ನು ಆದಿ ವಿನಾಯಕ ದೇವಾಲಯ ಎಂದು ಕರೆಯಲಾಗುತ್ತದೆ. ಮಾನವನ ಮುಖದಿಂದಾಗಿ ಈ ಆದಿ ವಿನಾಯಕನ ದಿವ್ಯ ರೂಪವನ್ನು ‘ನರ ಮುಖ’ ವಿನಾಯಕ ಎಂದೂ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಗಣೇಶನ ದೈವಿಕ ರೂಪವಾಗಿದ್ದು, ಇಲ್ಲಿ ಅವನ ಈ ರೂಪವನ್ನೇ ಪೂಜಿಸಲಾಗುತ್ತದೆ. ಈ ದೇವಾಲಯದ ಐದು ಅಡಿ ಎತ್ತರದ ಭವ್ಯವಾದ ಪ್ರಧಾನ ದೇವರು ನಂದ್ರುದಾಯನ ವಿನಾಯಕನಾಗಿದ್ದಾನೆ.
ಈ ದೇವಾಲಯದ ಪೂರ್ವ ಪ್ರವೇಶದ್ವಾರದಲ್ಲಿ ನಾಗನಂಧಿಯನ್ನು ಹೊಂದಿದ್ದಾನೆ. ಅದಲ್ಲದೆ ಈ ನಾವೀ ಗಣೇಶನ ದೇವಾಲಯದಲ್ಲಿ ನಂದಿಯ ವಿಗ್ರಹವಿರುವುದು ಮತ್ತೊಂದು ವಿಶೇಷ. ಈ ವಿಶಿಷ್ಟ ದೇವಾಲಯವು ತಮಿಳುನಾಡಿನ ತಿಲತರ್ಪಣ ಪುರಿ ಬಳಿಯ ಮುಕ್ತೀಶ್ವರರ್ ನಲ್ಲಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಾಲಯ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?
ಮಾನವನ ಮುಖವು ಗಣೇಶನ ದೈವಿಕ ರೂಪವಾಗಿದ್ದು, ಇಲ್ಲಿ ಅವನ ಈ ರೂಪವನ್ನೇ ಪೂಜಿಸಲಾಗುತ್ತದೆ. ಇಲ್ಲಿರುವ ಗ್ರಾನೈಟ್ ಗಣೇಶನ ವಿಗ್ರಹವು ಅದ್ಭುತ ಹಾಗೂ ಆಕರ್ಷಕವಾಗಿದ್ದು, ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವಿಕ ರೂಪದಲ್ಲಿ ನೆಲೆಸಿರುವ ಗಣಪತಿಯ ದರ್ಶನ ಪಡೆಯುತ್ತಾರೆ.
ಗಣೇಶ ಚತುರ್ಥಿ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ