ಅತ್ತೆ-ಸೊಸೆ ಈ ನಿಮಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಯಾವುದೇ ಜಗಳ ಇರೋದಿಲ್ಲ

ಎಲ್ಲಾ ಸಂಬಂಧಗಳಲ್ಲಿ ಅತ್ಯಂತ ಜಟಿಲವಾದದ್ದು ಅತ್ತೆ-ಸೊಸೆ ಸಂಬಂಧ. ಬಹುತೇಕ ಹೆಚ್ಚಿನ ಮನೆಗಳಲ್ಲಿ ಅತ್ತೆ ಸೊಸೆ ನಡುಗೆ ಸಣ್ಣಪುಟ್ಟ ಮನಸ್ತಾಪ, ಜಗಳಗಳು ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಮನೆಯ ಶಾಂತಿ ನೆಮ್ಮದಿಯೇ ಹಾಳಾಗಿಬಿಡುತ್ತದೆ. ಹಾಗಾಗಿ ಅತ್ತೆ ಮತ್ತು ಸೊಸೆ ಈ ಕೆಲವು ನಿಮಯಗಳನ್ನು ಪಾಲಿಸುವುದರಿಂದ ಯಾವುದೇ ಜಗಳಗಳು ನಡೆಯದಂತೆ ಹೊಂದಿಕೊಂಡು ಹೋಗಬಹುದು.

ಅತ್ತೆ-ಸೊಸೆ ಈ ನಿಮಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಯಾವುದೇ ಜಗಳ ಇರೋದಿಲ್ಲ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 17, 2026 | 5:48 PM

ಅತ್ತೆ ((mother-in-law) ಸೊಸೆ ನಡುವೆ ಜಗಳ ನಡೆಯದ ಮನೆ ಬಹುಶಃ ಇರಲಿಕ್ಕಿಲ್ಲ. ಪ್ರತಿ ಮನೆಯಲ್ಲೂ ಈ ಇಬ್ಬರ ನಡುವೆ ಸಣ್ಣಪುಟ್ಟ ಜಗಳ, ಮಸ್ತಾಪಗಳು ನಡೆಯುತ್ತಲೇ ಇರುತ್ತದೆ. ಈ ಅತ್ತೆ ಸೊಸೆಯ ಜಗಳದ ಕಾರಣದಿಂದಾಗಿ ಮನೆಯ ನೆಮ್ಮದಿ ಹಾಳಾಗುತ್ತದೆ. ಅದೇ ಇವರಿಬ್ಬರ ನಡುವಿನ ಸಂಬಂಧ ಚೆನ್ನಾಗಿದ್ದರೆ ಮನೆಯಲ್ಲಿ ಸಂತೋಷ, ಪ್ರೀತಿ ಮತ್ತು ಆನಂದ ತುಂಬಿರುತ್ತದೆ. ಜೊತೆಗೆ ಅತ್ತೆ ಸೊಸೆ ಹೊಂದಾಣಿಕೆಯಿಂದ ಬಾಳಿದರೆ ಮನೆಯ 90 % ಸಮಸ್ಯೆಗಳನ್ನು ತಪ್ಪಿಸಬಹುದು.  ಸ್ವಲ್ಪ ತಿಳುವಳಿಕೆ, ತಾಳ್ಮೆ ಮತ್ತು ಗೌರವದಿಂದ, ಈ ಜಟಿಲವಾದ ಸಂಬಂಧವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಅತ್ತೆ ಮತ್ತು ಸೊಸೆ ಇಬ್ಬರೂ ಈ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕು.

ಅತ್ತೆ ಸೊಸೆ ಹೀಗಿದ್ದರೆ ಮನೆಯಲ್ಲಿ ಜಗಳಗಳು ನಡೆಯೋದಿಲ್ಲ:

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು:

ಮೊದಲನೆಯದಾಗಿ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅತ್ತೆ ತನ್ನ ಸೊಸೆಯನ್ನು ಬೇರೆಯವಳಂತೆ ನೋಡಬಾರದು, ಬದಲಾಗಿ ಕುಟುಂಬದ ಸದಸ್ಯೆಯಾಗಿ ನೋಡಬೇಕು. ಸೊಸೆ ತನ್ನ ಅತ್ತೆಯನ್ನುಒಬ್ಬ ಶತ್ರುವಂಬಂತೆ ಕಾಣದೆ, ತಾಯಿಯಂತೆ ನೋಡಬೇಕು. ಈ ದೃಷ್ಟಿಕೋನ ಬದಲಾದರೆ, ಅನೇಕ ಅತ್ತೆ ಸೊಸೆಯ ಮಧ್ಯೆ ಅಷ್ಟಾಗಿ ಬಿನ್ನಾಭಿಪ್ರಾಯಗಳು ತಲೆದೋರುವುದಿಲ್ಲ.

ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಪರಿಹಾರ ಮಾಡಿಕೊಳ್ಳಬೇಕು:

ಅತ್ತೆ ಮತ್ತು ಸೊಸೆಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ, ಇಬ್ಬರೂ ಕೂ ತಕ್ಷಣ ಅದರ ಬಗ್ಗೆ ಮಾತನಾಡಿ ಪರಿಹರಿಸಿಕೊಳ್ಳಬೇಕು. ಸಮಸ್ಯೆಗಳನ್ನು ಅಥವಾ ಮನಸ್ತಾಪಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸುವುದು  ದೊಡ್ಡ ಘರ್ಷಣೆಗಳಿಗೆ ಕಾರಣವಾಗಬಹುದು. ಹಾಗಾಗಿ ತಕ್ಷಣವೇ ಮಾತನಾಡಿ ಸಮಸ್ಯೆಯನ್ನು ಪರಿಹರಿಸಬೇಕು ಜೊತೆಗೆ ಮಾತನಾಡುವಾಗ ಪದ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು.

ಪರಸ್ಪರ ಗೌರವ ಇರಬೇಕು:

ಪರಸ್ಪರ ಗೌರವವಿಲ್ಲದಿದ್ದರೆ ಯಾವುದೇ ಸಂಬಂಧವುಬಹು ಕಾಲ ಉಳಿಯುವುದಿಲ್ಲ. ಸೊಸೆ ತನ್ನ ಅತ್ತೆಗೆ ಗೌರವ ನೀಡಬೇಕು. ಜೊತೆಗೆ ಮನೆಯ ಸಂಪ್ರದಾಯ, ಆಚಾರ ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸಬೇಕು. ಅದೇ ರೀತಿ ಅತ್ತೆ ಕೂಡ ಸೊಸೆಯನ್ನು ಆಕೆಯೂ ಮನೆಯ ಸದಸ್ಯೆ ಎಂಬಂತೆ ಗೌರವದಿಂದ ನಡೆಸಿಕೊಳ್ಳಬೇಕು. ಈ ರೀತಿ ಇದ್ದಾಗ ಅತ್ತೆ-ಸೊಸೆಯ ನಡುವೆ ಜಗಳಗಳು ನಡೆಯುವುದಿಲ್ಲ.

ಇದನ್ನೂ ಓದಿ: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ವಿಷಯಗಳನ್ನು ನೆನಪಿಡಿ

ತಾಳ್ಮೆ ಇರಬೇಕು:

ನೀವು ಸ್ವಲ್ಪ ತಾಳ್ಮೆಯಿಂದಿರಬೇಕು ಮತ್ತು ಸಣ್ಣ ವಿಷಯಗಳಿಗೆ ಕೋಪಗೊಳ್ಳಬಾರದು. ತಪ್ಪುಗಳು ಸಂಭವಿಸಿದಾಗ ಕ್ಷಮಿಸಲು ಕಲಿಯಬೇಕು. ಹೀಗೆ ಮಾಡುವುದರಿಂದ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಮನೆಕೆಲಸಗಳು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಸಹ ಮುಖ್ಯವಾಗಿದೆ. ಅತ್ತೆಯಾದವಳು ಎಲ್ಲಾ ಕೆಲಸವನ್ನು ಸೊಸೆಯ ಮೇಲೆ ಹಾಕುವುದು ಅಥವಾ ಸೊಸೆಯಾದವಳು ಅತ್ತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಮನೆ ಕೆಲಸಗಳನ್ನೆಲ್ಲಾ ಜೊತೆಯಾಗಿ ನಿರ್ವಹಿಸಬೇಕು. ಹೀಗೆ ಇಬ್ಬರು ಮಾತನಾಡುತ್ತಾ ಕೆಲಸಗಳನ್ನು ಮಾಡಿದಾಗ ಸಂಬಂಧವೂ ಬಲಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us