Sign In

By signing in or creating an account, you agree with Associated Broadcasting Company's Terms & Conditions and Privacy Policy.

Anand Mahindra: ಆನಂದ್ ಮಹೀಂದ್ರಾ ಹಂಚಿಕೊಂಡ ಭಾರತದ ಸುಂದರ ಹಳ್ಳಿಗಳಲ್ಲಿ ಕರ್ನಾಟಕದ ವರಂಗವೂ ಒಂದು

ಸೋಷಿಯಲ್ ಮೀಡಿಯಾದಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಯಾವಾಗಲೂ ಆಕ್ಟಿವ್ ಇರುತ್ತಾರೆ. ಜೊತೆಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗಾದರೆ ಈ ಭಾರಿ ಯಾವ ವಿಷಯದ ಬಗ್ಗೆ ಅವರು ಆಸಕ್ತಿ ತೋರಿದ್ದಾರೆ? ಇಲ್ಲಿದೆ ಮಾಹಿತಿ.

Anand Mahindra: ಆನಂದ್ ಮಹೀಂದ್ರಾ ಹಂಚಿಕೊಂಡ ಭಾರತದ ಸುಂದರ ಹಳ್ಳಿಗಳಲ್ಲಿ ಕರ್ನಾಟಕದ ವರಂಗವೂ ಒಂದು
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 12, 2023 | 10:08 AM

ಸೋಷಿಯಲ್ ಮೀಡಿಯಾದಲ್ಲಿ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಯಾವಾಗಲೂ ಆಕ್ಟಿವ್ ಇರುತ್ತಾರೆ. ಜೊತೆಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗಾದರೆ ಈ ಭಾರಿ ಯಾವ ವಿಷಯದ ಬಗ್ಗೆ ಅವರು ಆಸಕ್ತಿ ತೋರಿದ್ದಾರೆ? ಅವರು ಕಲರ್ಸ್ ಆಫ್ ಭಾರತ್ (Colours of Bharat) ಎಂಬ ಟ್ವಿಟರ್ ಪೇಜ್​​ ಪೋಸ್ಟ್ ಅನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮರು ಹಂಚಿಕೆ ಮಾಡಿಕೊಂಡಿದ್ದು, ಅವರು ಶೇರ್ ಮಾಡಿರುವ ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. ಆ ಸ್ಥಳದ ಸೌಂದರ್ಯದ ಬಗ್ಗೆ ಪೋಸ್ಟ್ ಮಾಡಿದ ಬಳಿಕ ಆ ನಿರ್ದಿಷ್ಟ ಸ್ಥಳಕ್ಕೆ ಭೇಟಿ ನೀಡಲು ನಿಮಗೂ ಪ್ರಚೋದನೆ ಆಗುವುದರಲ್ಲಿ ಸಂಶಯವೆನಿಲ್ಲ. ಏಕೆಂದರೆ ಭಾರತದ ವಿವಿಧ ಸುಂದರ ಹಳ್ಳಿಗಳ ಬಗ್ಗೆ ನೋಡಿದ ಆನಂದ್ ಮಹೀಂದ್ರಾ ಅವರೇ ಮಂತ್ರ ಮುಗ್ಧರಾಗಿದ್ದಾರೆ. ಜೊತೆಗೆ ಈ ಸ್ಥಳಗಳು ಈಗ ಅವರ ಪ್ರಯಾಣದ ಬಕೆಟ್ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ. “ನಮ್ಮ ಸುತ್ತಲಿನ ಈ ಸೌಂದರ್ಯವು ನನ್ನನ್ನು ಮೂಕನನ್ನಾಗಿಸಿದೆ. ಭಾರತದಲ್ಲಿ ಪ್ರಯಾಣಿಸಲು ನನ್ನ ಬಕೆಟ್ ಪಟ್ಟಿ ಈಗ ತುಂಬಿ ತುಳುಕುತ್ತಿದೆ … ” ಎಂದು ಆನಂದ್ ಮಹೀಂದ್ರಾ ಅವರು ತಮ್ಮ ಖಾತೆಯುಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಬರೆದುಕೊಂಡಿದ್ದಾರೆ. ಇದನ್ನು ಮೂಲತಃ ಕಲರ್ಸ್ ಆಫ್ ಭಾರತ್ ಎಂಬ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಭಾರತದ ವಿವಿಧ ಭಾಗಗಳಲ್ಲಿರುವ ಹಳ್ಳಿಗಳ ವಿಹಂಗಮ ನೋಟವನ್ನು ನಿಮಗೆ ನೀಡುತ್ತದೆ.

ಪಟ್ಟಿಯಲ್ಲಿರುವ ಹಳ್ಳಿಗಳಾವವು? ಇಲ್ಲಿದೆ ಮಾಹಿತಿ:

ಕಲ್ಪಾ (Kalpa), ಹಿಮಾಚಲ ಪ್ರದೇಶ. ಕೊಲ್ಲೆಂಗೋಡ್ (Kollengode) ಗ್ರಾಮ, ಪಾಲಕ್ಕಾಡ್, ಕೇರಳ. ಮಾವ್ಲಿನ್ನಾಂಗ್‌ (Mawlynnong), ಮೇಘಾಲಯ. ಮಾಥೂರ್ (Mathoor) ಗ್ರಾಮ, ಕನ್ಯಾಕುಮಾರಿ, ತಮಿಳುನಾಡು. ವರಂಗ (Varanga) ಗ್ರಾಮ, ಕರ್ನಾಟಕ. ಗೋರ್ಖೇ ಖೋಲಾ (Gorkhey Khola), ಡಾರ್ಜಿಲಿಂಗ್, ಪಶ್ಚಿಮ ಬಂಗಾಳ. ಜಿರಂಗ್ (Jirang) ಗ್ರಾಮ, ಒಡಿಶಾ. ಜಿರೋ ಗ್ರಾಮ (Ziro Village), ಅರುಣಾಚಲ ಪ್ರದೇಶ. ಮನ (Mana), ಉತ್ತರಾಖಂಡ (ಭಾರತದ ಕೊನೆಯ ಗ್ರಾಮ). ಖಿಮ್ಸರ್ ಗ್ರಾಮ (Khimsar), ರಾಜಸ್ಥಾನ.

ಇದನ್ನೂ ಓದಿ:Anand Mahindra: ನಾಟು ನಾಟು ಹಾಡಿಗೆ ಆನಂದ್ ಮಹಿಂದ್ರಾ ಸಖತ್ ಸ್ಟೆಪ್: ನೃತ್ಯ ಹೇಳಿಕೊಟ್ಟಿದ್ದು ಬೇರೆ ಯಾರು ಅಲ್ಲ…

ವರಂಗದ ಬಗ್ಗೆ ಗೊತ್ತಾ?

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ವರಂಗ ಎಂಬ ಪುಟ್ಟ ಗ್ರಾಮ ದೇಶ – ವಿದೇಶಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದೆ. ಈ ಗ್ರಾಮವು ಪ್ರಮುಖ ಜೈನ ಕೇಂದ್ರವಾಗಿದ್ದು, ಕೆರೆಯ ಮಧ್ಯದಲ್ಲಿ ಬಸದಿಯಿದ್ದು 12ನೇ ಶತಮಾನದ ದೇವಾಲಯವಾಗಿದೆ. ಸರೋವರದ ಮಧ್ಯದಲ್ಲಿ ನೆಲೆಗೊಂಡಿರುವುದೇ ಈ ಬಸದಿಯ ವಿಶೇಷವಾಗಿದೆ. ಇಲ್ಲಿ ನಿಮಗೆ ಬೋಟ್ ವ್ಯವಸ್ಥೆ ಇದ್ದು ಟಿಕೆಟ್ ಪಡೆದು ಪ್ರಯಾಣ ಮಾಡಬಹುದು. ಇದು ಹೆಬ್ರಿಯಿಂದ ಕಾರ್ಕಳದ ಕಡೆಗೆ ೫ ಕಿ.ಮೀ. ದೂರದಲ್ಲಿದ್ದು, ಬಸ್ ವ್ಯವಸ್ಥೆ ಇದೆ. ಇಲ್ಲಿಗೆ ಕಾರ್ಕಳ, ಹೆಬ್ರಿಯಿಂದ ಪ್ರಯಾಣ ಮಾಡಬಹುದಾಗಿದೆ. ನಿಮ್ಮದೇ ವಾಹನ ವ್ಯವಸ್ಥೆ ಇದ್ದರೆ ಮತ್ತು ಒಳ್ಳೆಯದು.

ಆನಂದ್​ ಮಹೀಂದ್ರಾ ಅವರ ಪೋಸ್ಟ್ 483kಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಅತೀ ಹೆಚ್ಚು ಕಾಮೆಂಟ್ಗಳನ್ನು ಗಳಿಸಿದೆ. ಭಾರತೀಯ ಹಳ್ಳಿಗಳು ನೀಡುವ ಸೌಂದರ್ಯದಿಂದ ಜನರು ಮಂತ್ರಮುಗ್ಧರಾಗಿದ್ದಾರೆ. ಈ ಪೋಸ್ಟ್​​ನಲ್ಲಿರುವ ಪ್ರತೀ ಫೋಟೋಗಳು ಬಹಳ ಸುಂದರವಾಗಿದ್ದು ಇದಕ್ಕೆ ಹಲವು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಒಬ್ಬ ಬಳಕೆದಾರು “ಅದ್ಭುತ” ಎಂದು ಟ್ವಿಟ್ ಮಾಡಿದ್ದಾರೆ. “ಇನ್ಕ್ರೆಡಿಬಲ್ ಇಂಡಿಯಾ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ಮಂತ್ರಮುಗ್ಧಗೊಳಿಸುತ್ತದೆ” ಎಂದು ಮತ್ತೊಬ್ಬರು ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. “ನಾನು ಅಲ್ಲಿಗೆ ಹೋಗಲು ಹಂಬಲಿಸುತ್ತಿದ್ದೇನೆ,” ಎಂದು ಮತ್ತೊಬ್ಬರು ಹೇಳಿದ್ದಾರೆ. “ತುಂಬಾ ಸುಂದರವಾಗಿದೆ” ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

Published On - 10:02 am, Mon, 12 June 23

ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ