Ganesha Chaturti 2024 : ಈ ದೇವಸ್ಥಾನದಲ್ಲಿದೆ ಬಣ್ಣ ಬದಲಾಯಿಸುವ ವಿಸ್ಮಯಕಾರಿ ಗಣೇಶನ ಮೂರ್ತಿ

ಮೊದಲ ಪೂಜೆಗೆ ಅರ್ಹನಾಗಿರುವ ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ಬಾರಿ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಹಲವರು ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ತಮಿಳುನಾಡಿನಲ್ಲಿರುವ ಈ ವಿನಾಯಕ ದೇವಾಲಯವು ತನ್ನ ವಿಸ್ಮಯದಿಂದಲೇ ಪ್ರಸಿದ್ಧತೆಯನ್ನು ಗಳಿಸಿಕೊಂಡಿದ್ದು, ಈ ಕುರಿತಾದ ಕುತೂಹಲಕಾರಿ ಮಾಹಿತಿಯು ಇಲ್ಲಿದೆ.

Ganesha Chaturti 2024 : ಈ ದೇವಸ್ಥಾನದಲ್ಲಿದೆ ಬಣ್ಣ ಬದಲಾಯಿಸುವ ವಿಸ್ಮಯಕಾರಿ ಗಣೇಶನ ಮೂರ್ತಿ
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Sep 01, 2024 | 10:17 AM

ಭಾರತದಾದಂತ್ಯ ಹಲವಾರು ಇತಿಹಾಸ ಪ್ರಸಿದ್ಧ ಹಾಗೂ ವಿಸ್ಮಯಕಾರಿ ದೇವಾಲಯಗಳಿವೆ. ಆದರೆ ಕೆಲ ಗಣೇಶನ ದೇವಾಲಯಗಳು ಸಾಕಷ್ಟು ಪುರಾತನವಾಗಿದ್ದು, ಇಂದಿಗೂ ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಇಲ್ಲೊಂದು ಕಡೆ ವಿಶೇಷಯೆನಿಸುವ ವಿನಾಯಕನ ದೇವಾಲಯವಿದ್ದು ಇಲ್ಲಿ ವಿಸ್ಮಯಕಾರಿ ಗಣೇಶನ ಮೂರ್ತಿಯನ್ನು ಕಾಣಬಹುದಾಗಿದೆ. ಈ ವಿನಾಯಕನ ವಿಗ್ರಹವು ತನ್ನ ಬಣ್ಣ ಬದಲಾವಣೆಯಿಂದಲೇ ಅಚ್ಚರಿ ಮೂಡಿಸುತ್ತದೆ.

ತಮಿಳುನಾಡು ರಾಜ್ಯದ ಕೇಲಾರಪುರಂ ಸಮೀಪದ ಥಕಾಲದಲ್ಲಿ ಆದಿಶಯ ವಿನಾಯಕ ದೇವಸ್ಥಾನವಿದಾಗಿದ್ದು, ಗಣೇಶನ ವಿಗ್ರಹವು ಆರು ತಿಂಗಳಿಗೊಮ್ಮೆ ಬಣ್ಣ ಬದಲಾಯಿಸುತ್ತದೆ. ಹೌದು, ಇಲ್ಲಿನ ಗಣೇಶನ ವಿಗ್ರಹವು 6 ತಿಂಗಳು ಬಿಳಿ ಬಣ್ಣದಲ್ಲಿದ್ದರೆ, ಉಳಿದ 6 ತಿಂಗಳು ಕಪ್ಪು ಬಣ್ಣದಲ್ಲಿರುವುದೇ ವಿಶೇಷವಾಗಿದೆ. ಹೀಗಾಗಿ ಈ ಗಣೇಶನನ್ನು ಕಲರ್ ಫುಲ್ ಗಣೇಶ ಅಥವಾ ವಿಸ್ಮಯ ಗಣೇಶ ಎಂದು ಕರೆಯಲಾಗುತ್ತದೆ.

ತಿರುವಿತನಕರ ರಾಜ ವೀರಕ್ಕರ ವರ್ಮನು ಆದಿಶಯ ವಿನಾಯಕ ದೇವಾಲಯವನ್ನು ನಿರ್ಮಿಸಿದ್ದು, ಆದರೆ ಇಲ್ಲಿರುವ ವಿಗ್ರಹವನ್ನು ಸಾಧಾರಣವಾದ ಕಲ್ಲಿನಿಂದ ಕೆತ್ತನೆ ಮಾಡಲಾಗಿಲ್ಲ. ಬದಲಾಗಿ ಅಪರೂಪದ ಚಂದ್ರಕಾಂತದಿಂದ ಮೂರ್ತಿಯನ್ನು ಕೆತ್ತಲಾಗಿದೆ. ಆದರೆ ವರ್ಷಕ್ಕೆ ಎರಡು ಬಾರಿ ವಿಗ್ರಹದ ಬಣ್ಣವು ತನ್ನಿಂದ ತಾನೇ ಬದಲಾಗುತ್ತದೆ.

ಇದನ್ನೂ ಓದಿ: ಗಣೇಶನಿಗೆ ಬಲುಪ್ರಿಯ ಈ ಮೋದಕ, ಮಾಡೋದು ಹೇಗೆ?

ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ಗಣಪತಿ ವಿಗ್ರಹವು ಬಿಳಿ ಬಣ್ಣದಲ್ಲಿದ್ದರೆ, ಜುಲೈ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಕಪ್ಪು ಬಣ್ಣದಲ್ಲಿ ಗಣಪತಿ ವಿಗ್ರಹವು ಕಾಣಿಸುತ್ತದೆ. ಶಿರದ ಭಾಗದಿಂದ ಪ್ರಾರಂಭವಾಗಿ ಪಾದದವರೆಗೆ ಈ ವಿಗ್ರಹದ ಬಣ್ಣವು ಬದಲಾಗುತ್ತದೆ. ಅದರೊಂದಿಗೆ ವಿಗ್ರಹವು ದಿನೇ ದಿನೇ ಬೆಳೆಯುತ್ತಿದ್ದು, ಇದೀಗ ಅರ್ಧ ಅಡಿಯಷ್ಟು ಎತ್ತರವಾಗಿದೆ. ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ವಿಸ್ಮಯಕಾರಿ ಗಣೇಶನ ಕೃಪೆಗೆ ಪಾತ್ರರಾಗುತ್ತಾರೆ.

ಗಣೇಶ ಚತುರ್ಥಿ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!