Introvert: ಅಂತರ್ಮುಖಿಯಾಗಿರುವುದು ಅಸ್ವಸ್ಥತೆಯಲ್ಲ, ನಿಮ್ಮನ್ನು ನೀವು ಬದಲಾಯಿಸಲು ಬಯಸಿದರೆ ಹೀಗೆ ಮಾಡಿ

ಕೆಲವರು ನಿಮ್ಮೊಂದಿಗೆ ತುಂಬಾ ಮಾತನಾಡಬಹುದು ಇನ್ನೂ ಕೆಲವರು ಹೆಚ್ಚು ಮಾತನಾಡದೇ ಇರಬಹುದು, ಗುಂಪುಗೂಡಿ ಮಾತನಾಡುವುದು, ತಮಾಷೆ ಮಾಡುವುದು ಹರಟೆ ಹೊಡೆಯುವುದು ಕೆಲವರಿಗೆ ಇಷ್ಟವಾಗದೇ ಇರಬಹುದು.

Introvert: ಅಂತರ್ಮುಖಿಯಾಗಿರುವುದು ಅಸ್ವಸ್ಥತೆಯಲ್ಲ, ನಿಮ್ಮನ್ನು ನೀವು ಬದಲಾಯಿಸಲು ಬಯಸಿದರೆ ಹೀಗೆ ಮಾಡಿ
ಅಂತರ್ಮುಖಿImage Credit source: Healthshots.com
Follow us
ನಯನಾ ರಾಜೀವ್
|

Updated on: Jun 13, 2023 | 9:00 AM

ಕೆಲವರು ನಿಮ್ಮೊಂದಿಗೆ ತುಂಬಾ ಮಾತನಾಡಬಹುದು ಇನ್ನೂ ಕೆಲವರು ಹೆಚ್ಚು ಮಾತನಾಡದೇ ಇರಬಹುದು, ಗುಂಪುಗೂಡಿ ಮಾತನಾಡುವುದು, ತಮಾಷೆ ಮಾಡುವುದು ಹರಟೆ ಹೊಡೆಯುವುದು ಕೆಲವರಿಗೆ ಇಷ್ಟವಾಗದೇ ಇರಬಹುದು. ಹಾಗೆಂದ ಮಾತ್ರಕ್ಕೆ ಅಂತರ್ಮುಖಿಯಾಗಿರುವುದನ್ನು ಅಸ್ವಸ್ಥತೆ ಎಂದು ಕರೆಯಲು ಸಾಧ್ಯವಿಲ್ಲ. ಯಾರಿಗೂ ಹಾನಿಯಾಗದಂತೆ ಮತ್ತು ಅವಮಾನಿಸದೆ ತಮ್ಮ ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ತೀರ್ಮಾನವನ್ನು ತೆಗೆದುಕೊಳ್ಳುವವರನ್ನು ಅಂತರ್ಮುಖಿಗಳು ಎಂದು ಕರೆಯಲಾಗುತ್ತದೆ. ನಾವು ಬೆಳೆದು ಬಂದ ವಾತಾವರಣ ಅಂಥದ್ದಿರಬಹುದು, ನಮ್ಮ ನಡುವಳಿಕೆಯೂ ಅದೇ ರೀತಿ ಆಗಲು ಶುರುವಾಗುತ್ತದೆ. ಅಂತರ್ಮುಖಿ ಜನರು ಸಾಮಾನ್ಯವಾಗಿ ಗಂಭೀರ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ಅವರು ಸಮಾಜದಲ್ಲಿ ಉತ್ತಮ ಚಿತ್ರಣವನ್ನು ಬೆಳೆಸಿಕೊಳ್ಳುತ್ತಾರೆ. ಹೆಚ್ಚು ಸ್ನೇಹಿತರು ಇವರಿಗಿರುವುದಿಲ್ಲ.

ಅಂತರ್ಮುಖಿ ಎಂದರೇನು? ಇದರಲ್ಲಿ ವ್ಯಕ್ತಿಯು ತನ್ನ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಅಸಮರ್ಥತೆಯನ್ನು ಅನುಭವಿಸುತ್ತಾನೆ. ಅಂತಹ ಜನರು ಇತರರೊಂದಿಗೆ ಬೆರೆಯುವ ಬದಲು ತಮ್ಮ ಸ್ವಂತ ಭಾವನೆಗಳು ಮತ್ತು ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ. ಬಹಿರ್ಮುಖಿಗಳು ಇತರರೊಂದಿಗೆ ಬೆರೆಯುವ ಮೂಲಕ ಚೈತನ್ಯವನ್ನು ಹೊಂದುತ್ತಾರೆ, ಅಂತರ್ಮುಖಿಗಳು ಸಾಮಾಜಿಕ ವಲಯಗಳಲ್ಲಿ ಸಮಯ ಕಳೆದ ನಂತರ ವಿಶ್ರಾಂತಿ ಪಡೆಯಲು ಮತ್ತು ತಮ್ಮನ್ನು ರೀಚಾರ್ಜ್ ಮಾಡಲು ಸ್ವಲ್ಪ ಸಮಯವನ್ನು ಕಳೆಯಲು ಬಯಸುತ್ತಾರೆ.

ಮತ್ತಷ್ಟು ಓದಿ: Positive Thinking: ಪ್ರತಿದಿನ ದೇವಸ್ಥಾನಕ್ಕೆ ಖಾಲಿ ಹೊಟ್ಟೆಯಲ್ಲಿ ಹೋಗಿ, ಅಲ್ಲಿ ಹೀಗೆ ಮಾಡಿ

ಅಂತರ್ಮುಖಿಗಳು ಶಾಂತ ಮನಸ್ಸಿನವರು ಹಾರ್ವರ್ಡ್ ಅಧ್ಯಯನದ ಪ್ರಕಾರ, ಅಂತರ್ಮುಖಿಯಾಗಿರುವ ಜನರು ಹೆಚ್ಚು ಶಾಂತ ಮನಸ್ಸನ್ನು ಹೊಂದಿರುತ್ತಾರೆ. ಅವರು ವಿಷಯಗಳನ್ನು ಉತ್ತಮವಾಗಿ ಕೇಂದ್ರೀಕರಿಸಲು ಸಮರ್ಥರಾಗಿರುತ್ತಾರೆ, ಸಂಶೋಧನೆಯ ಪ್ರಕಾರ, ನಿಮ್ಮ ಮೆದುಳು ಸಕ್ರಿಯವಾಗಿದ್ದಾಗ, ಅದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಅಂತಹ ಜನರು ಹೆಚ್ಚು ಪ್ರತಿಭಾವಂತರು. ಈ ಚಿಹ್ನೆಗಳು ನೀವು ಅಂತರ್ಮುಖಿ ವ್ಯಕ್ತಿ ಎಂದು ತೋರಿಸುತ್ತವೆ ಸ್ನೇಹಿತರ ವಲಯದಲ್ಲಿ ಕೆಲವೇ ಜನರನ್ನು ಹೊಂದಿರುವುದು ಹೆಚ್ಚು ಮಾತನಾಡುವುದನ್ನು ತಪ್ಪಿಸುವುದು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು ಸ್ವಂತ ಆಲೋಚನೆಗಳಲ್ಲಿ ಕಳೆದುಹೋಗುವುದು ಏಕಾಂತಕ್ಕೆ ಆದ್ಯತೆ ನೀಡುವುದು

ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕೆಂಬ ಮನಸ್ಸಿದೆಯೇ? ಚಟುವಟಿಕೆಯಿಂದಿರಿ ಏಕಾಂಗಿಯಾಗಿ ಸಮಯ ಕಳೆಯುವ ಬದಲು, ಸಾಮಾಜಿಕ ಸಭೆಗಳು ಮತ್ತು ಪಾರ್ಟಿಗಳಿಗೆ ಹೋಗಿ ಮತ್ತು ಜನರೊಂದಿಗೆ ಸಂವಹನ ನಡೆಸಿ. ಜನರನ್ನು ಭೇಟಿ ಮಾಡಿ ಮತ್ತು ಪ್ರವಾಸಗಳನ್ನು ಯೋಜಿಸಿ. ಇದು ನಿಮ್ಮೊಳಗಿನ ಹಿಂಜರಿಕೆಯನ್ನು ಕ್ರಮೇಣವಾಗಿ ತೆಗೆದುಹಾಕುತ್ತದೆ. ಒಬ್ಬಂಟಿಯಾಗಿದ್ದರೂ, ನೀವು ಅನೇಕ ವಿಷಯಗಳ ಬಗ್ಗೆ ಉತ್ತಮ ರೀತಿಯಲ್ಲಿ ಯೋಚಿಸಬಹುದು.

ಹೆಚ್ಚು ಸ್ನೇಹಿತರಿರಲಿ ಒಬ್ಬರೇ ಕೂರುವ ಬದಲು ಸ್ನೇಹಿತರನ್ನು ಮಾಡಿಕೊಳ್ಳಿ, ಅವರ ಬಳಿ ಸಮಯ ಕಳೆಯಿರಿ, ನಿಮ್ಮ ಕಷ್ಟಸುಖಗಳನ್ನು ಹಂಚಿಕೊಳ್ಳಿ, ಸ್ನೇಹದ ಮೇಲೆ ನಂಬಿಕೆ ಇಡಿ.

ಬಹಿರ್ಮುಖಿ ಜನರೊಂದಿಗೆ ಬೆರೆಯಿರಿ ಬಹಿರ್ಮುಖಿ, ಹೆಚ್ಚು ಮಾತನಾಡುವ ಜನರೊಂದಿಗೆ ಸೇರಿ, ನಾಲ್ಕು ಜನರೊಂದಿಗೆ ಮಾತನಾಡಲು ಶುರುಮಾಡಿದಾಗ ನೀವು ಅಷ್ಟಷ್ಟಾಗೆ ಬದಲಾಗುವಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ