Positive Thinking: ಪ್ರತಿದಿನ ದೇವಸ್ಥಾನಕ್ಕೆ ಖಾಲಿ ಹೊಟ್ಟೆಯಲ್ಲಿ ಹೋಗಿ, ಅಲ್ಲಿ ಹೀಗೆ ಮಾಡಿ
ಜೀವನದುದ್ದಕ್ಕೂ ಧನತ್ಮಾಕ ಚಿಂತನೆ ನಿಮ್ಮಲ್ಲಿ ಇರಬೇಕು. ಆಗಾ ಮಾತ್ರ ನೀವು ಎಲ್ಲ ವಿಚಾರಗಳನ್ನು positive ರೀತಿಯಲ್ಲಿ ಯೋಚನೆ ಮಾಡಬಹುದು. ಇದಕ್ಕೆ ನಿಮ್ಮ ಮನಸ್ಸು ಮಾತ್ರವಲ್ಲ, ವಾತಾವರಣವು ಕೂಡ ಧನತ್ಮಾಕವಾಗಿ ಇರಬೇಕು.
ನಿಮ್ಮ ಜೀವನದಲ್ಲಿ ಎಲ್ಲವನ್ನು ನೀವು positive ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನೀವು ಅನೇಕ ಸಂಬಂಧಗಳ ಜೊತೆಗೆ ಬದುಕುತ್ತೀರಿ, ಆ ಸಂಬಂಧಗಳು ನಿಮ್ಮ ಸುಖ- ದುಃಖದಲ್ಲೂ ಎಲ್ಲ ಸಮಯದಲ್ಲಿ ಇರಬೇಕು, ಆದರೆ ಅದು ಅಸಾಧ್ಯ ಏಕೆಂದರೆ ಇದು ಸ್ವಾರ್ಥ ಲೋಕ, ಅದಕ್ಕಾಗಿ ಎಲ್ಲ ಕಡೆ ಸುಖವನ್ನು ಅಥವಾ ಎಲ್ಲ ಕಡೆ ದುಃಖವನ್ನು ಪಡೆಯಲು ಸಾಧ್ಯವಿಲ್ಲ.
ಜೀವನದುದ್ದಕ್ಕೂ ಧನತ್ಮಾಕ ಚಿಂತನೆ ನಿಮ್ಮಲ್ಲಿ ಇರಬೇಕು. ಆಗಾ ಮಾತ್ರ ನೀವು ಎಲ್ಲ ವಿಚಾರಗಳನ್ನು positive ರೀತಿಯಲ್ಲಿ ಯೋಚನೆ ಮಾಡಬಹುದು. ಇದಕ್ಕೆ ನಿಮ್ಮ ಮನಸ್ಸು ಮಾತ್ರವಲ್ಲ, ವಾತಾವರಣವು ಕೂಡ ಧನತ್ಮಾಕವಾಗಿ ಇರಬೇಕು. ನಿಮ್ಮ ಮನಸ್ಸಿನ ನೋವವನ್ನು ಎಲ್ಲರಲ್ಲೂ ಹೇಳಬಹುದು, ಆದರೆ ಆ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು, ಅಬ್ಬಬ್ಬಾ ಎಂದರೆ ಒಂದು ಸಮಾಧಾನದ ಮಾತುಗಳು ಬರಬಹುದು, ಆದರೆ ಅದು ನಿಮ್ಮ ಮನಸ್ಸಿನಲ್ಲಿ ಧನತ್ಮಾಕ ಯೋಚನೆಯನ್ನು ಉಂಟು ಮಾಡುವುದಿಲ್ಲ.
ಅದಕ್ಕಾಗಿ ನಿಮ್ಮ ಮನಸ್ಸಿನಲ್ಲಿ positive ಯೋಚನೆ ಬರಬೇಕಾದರೆ ಮೊದಲು ಅಧ್ಯಾತ್ಮಕ ಚಿಂತನೆ ಬೆಳೆಸಿಕೊಳ್ಳಿ, ಏಕೆಂದರೆ positive ಯೋಚನೆಗೆ ಇದು ಒಂದು ಉತ್ತಮ ಸ್ನೇಹಿತ, ಆ ಸ್ನೇಹಿತ ದೇವರು ಮಾತ್ರ ಆಗಬಹುದು, ಏಕೆಂದರೆ ನಾವೆಲ್ಲ ಅವನ ಸೃಷ್ಟಿ ಅಲ್ಲವೇ, ಅದಕ್ಕಾಗಿ ನೀವು ಪ್ರತಿದಿನ ಈ ರೀತಿಯ ಕೆಲಸಗಳನ್ನು ಮಾಡಿ ಪ್ರತಿದಿನ positive ಯೋಚನೆ ಮಾಡಿ.
ಇದನ್ನು ಓದಿ: lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ
ಪ್ರತಿದಿನ ಬೆಳಿಗ್ಗೆ ಎದ್ದ ಮೇಲೆ ಮನೆಯಲ್ಲಿ ನಿಮ್ಮ ಪ್ರತಿನಿತ್ಯದ ಕರ್ಮಗಳನ್ನು ಉತ್ಸಾಹಕತೆಯಿಂದ ಪ್ರಾರಂಭ ಮಾಡಿ, ಮನೆಯ ಕೆಲಸ ಮಾಡುವಾಗ ಯಾವುದೇ ಒತ್ತಡವನ್ನು ಹಾಕಿಕೊಳ್ಳದೇ ಮತ್ತು ಯೋಚನೆ ಮಾಡದೆ ನಿಮ್ಮ ಕೆಲಸವನ್ನು ಮಾಡಿ. ನಂತರ ತಲೆಗೆ ಸ್ನಾನ ಮಾಡಿ, ಖಾಲಿ ಹೊಟ್ಟೆಯಲ್ಲಿ ದೇವಸ್ಥಾನಕ್ಕೆ ಹೋಗಿ, ದಿನನಿತ್ಯ positive ಯೋಚನೆ ಮಾಡಲು ಇದು ಮುಖ್ಯ ದಾರಿ. ದೇವಸ್ಥಾನಕ್ಕೆ ಒಬ್ಬರೇ ಖಾಲಿ ಹೊಟ್ಟೆಯಲ್ಲಿ ಹೋಗಿ, ಅಲ್ಲಿ ಯಾವುದೇ ಯೋಚನೆ ಮಾಡದೆ ಒಂದು ಬಾರಿ ನಿಮ್ಮ ಕಣ್ಣು ತುಂಬಿಕೊಳ್ಳುವಷ್ಟು ಕಣ್ಣೀರು ಹಾಕಿ, ನಿಮ್ಮ ಮನಸ್ಸಿನ ನೋವುಗಳನ್ನು ದೇವರ ಮುಂದೆ ಹೇಳಿಕೊಳ್ಳಿ, ನಂತರ ಒಂದು ಬಾರಿ ನಿಮ್ಮ ಇಷ್ಟದ ದೇವರನ್ನು ಮನಸ್ಸಿನಲ್ಲಿ ನಿಮಗೆ ಬರುವ ಭಾಷೆಯಲ್ಲಿ ಪಠಿಸಿ.
ಈ ಸಮಯದಲ್ಲಿ ಯಾವುದೇ ನೋವುಗಳನ್ನು ಅಥವಾ ಒತ್ತಡವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ನಿಮ್ಮ ಮನಸ್ಸಿನಲ್ಲಿ ನಾನು ಎಲ್ಲವನ್ನು ಸಾಧಿಸುವೇ, ಎಲ್ಲ ಮಾತಿಗೂ ಮೌನದಿಂದ ಉತ್ತರಿಸುವೇ ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿ. ಜೊತೆಗೆ ದೇಗುಲದ ಪರಿಸರವನ್ನು ಸ್ವಚ್ಛ ಮನದಿಂದ ಆನಂದಿಸಿ. ಖಾಲಿ ಹೊಟ್ಟೆಯಲ್ಲಿ ದೇವಸ್ಥಾನಕ್ಕೆ ಹೋದರೆ ಖಂಡಿತ ನಿಮ್ಮಲ್ಲಿ positive ಚಿಂತನೆ ಮೂಡುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಸಹಾಯ ಮಾಡುತ್ತದೆ. ನೀವು ಮಾಡುವ ಕೆಲಸದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು positive ಯೋಚನೆ ಮೂಲಕ ಪರಿಹಾರ ಮಾಡಿ.