AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್ ಮೀಡಿಯಾದಿಂದ ದೂರವಿದ್ದರೆ ಈ ಎಲ್ಲ ಲಾಭವಿದೆ

Social Media Addiction: ಈ ಸೋಷಿಯಲ್ ಮೀಡಿಯಾಗಳಿಂದ ನಮ್ಮ ಮನಸಿಗೆ ನೆಮ್ಮದಿ ಸಿಗುತ್ತದಾ? ಎಂದು ನೋಡಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿರುತ್ತದೆ. ಇತ್ತೀಚಿನ ಖಾಸಗಿ ವೆಬ್​ಸೈಟ್​​ನ ಸಮೀಕ್ಷೆಯಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಬಳಕೆದಾರರಿಗೆ ಹೇಗೆ ಅನಿಸುತ್ತದೆ ಎಂದು ಕೇಳಲಾಗಿತ್ತು. ಅದರಲ್ಲಿ ಶೇ. 25ರಷ್ಟು ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಶೇ. 53ರಷ್ಟು ಜನರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿತಗೊಳಿಸುವುದು ತಮ್ಮ ಮನಸಿನ ನೆಮ್ಮದಿಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಸೋಷಿಯಲ್ ಮೀಡಿಯಾದಿಂದ ದೂರವಿದ್ದರೆ ಈ ಎಲ್ಲ ಲಾಭವಿದೆ
ಸುಷ್ಮಾ ಚಕ್ರೆ
| Edited By: |

Updated on:Oct 09, 2026 | 3:37 PM

Share

ಸೋಷಿಯಲ್ ಮೀಡಿಯಾಗಳು ಬಂದಮೇಲೆ ಜನರ ಜೀವನವೇ ಬದಲಾಗಿಬಿಟ್ಟಿದೆ. ವೈಯಕ್ತಿಕ ವಿಷಯಗಳು ಈಗ ಸಾರ್ವಜನಿಕ ಚರ್ಚೆಯ ವಿಷಯಗಳಾಗುತ್ತಿವೆ. ಟ್ವಿಟ್ಟರ್, ಫೇಸ್​ಬುಕ್, ವಾಟ್ಸಾಪ್, ಇನ್​ಸ್ಟಾಗ್ರಾಂ, ಕೂ, ಟೆಲಿಗ್ರಾಂ, ರೀಲ್ಸ್ ಹೀಗೆ ನಾನಾ ರೀತಿಯ ಸಾಮಾಜಿಕ ಜಾಲತಾಣಗಳು ಮೊಬೈಲ್​ನಲ್ಲಿ ಸ್ಥಾನ ಪಡೆದಿವೆ. ದಿನದ ಬಹುತೇಕ ಸಮಯವನ್ನು ಸೋಷಿಯಲ್ ಮೀಡಿಯಾ ನೋಡುವುದರಲ್ಲೇ ಕಳೆಯುವ ಜನರಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಇಲ್ಲದ ಜಗತ್ತನ್ನು ನಾವು ಊಹೆ ಮಾಡಿಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ, ಈಗೊಂದು 10 ವರ್ಷಗಳ ಹಿಂದೆ ಈ ಸೋಷಿಯಲ್ ಮೀಡಿಯಾ (Social Media) ಬರುವುದಕ್ಕೂ ಮೊದಲು ನಾವು ಏನು ಮಾಡುತ್ತಿದ್ದೆವು? ಹೇಗೆ ಸಮಯ ಕಳೆಯುತ್ತಿದ್ದೆವು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ಈ ಸೋಷಿಯಲ್ ಮೀಡಿಯಾಗಳಿಂದ ಟೈಂ ಪಾಸ್ ಆಗುವುದಂತೂ ನಿಜ. ಆದರೆ, ಇದರಿಂದ ನಮ್ಮ ಮನಸಿಗೆ ನೆಮ್ಮದಿ ಸಿಗುತ್ತದಾ? ಎಂದು ನೋಡಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿರುತ್ತದೆ. ಇತ್ತೀಚಿನ ಖಾಸಗಿ ವೆಬ್​ಸೈಟ್​​ನ ಸಮೀಕ್ಷೆಯಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಬಳಕೆದಾರರಿಗೆ ಹೇಗೆ ಅನಿಸುತ್ತದೆ ಎಂದು ಕೇಳಲಾಗಿತ್ತು. ಅದರಲ್ಲಿ ಶೇ. 25ರಷ್ಟು ಜನರು ತಮ್ಮ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಶೇ. 53ರಷ್ಟು ಜನರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿತಗೊಳಿಸುವುದು ತಮ್ಮ ಮನಸಿನ ನೆಮ್ಮದಿಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಹಾಗಾಗಿ, ಸಾಮಾಜಿಕ ಜಾಲತಾಣ ನಿಮ್ಮ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಲು 10 ದಿನಗಳ ಕಾಲ ಎಲ್ಲ ಸೋಷಿಯಲ್ ಮೀಡಿಯಾ ಖಾತೆಗಳನ್ನೂ ಅನ್​ಇನ್​ಸ್ಟಾಲ್ ಮಾಡಿ. ಆಗ ನಿಮ್ಮಲ್ಲಾಗುವ ಬದಲಾವಣೆ ನಿಮಗೇ ಗೊತ್ತಾಗುತ್ತದೆ. ಕೆಲವರಿಗೆ ಇದರಿಂದ ಮಾನಸಿಕ ಹಿಂಸೆ ಆಗಬಹುದು, ಇನ್ನು ಕೆಲವರಿಗೆ ಮಾನಸಿಕ ನೆಮ್ಮದಿಯೂ ಸಿಗಬಹುದು.

ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆಯಿಂದ ನಿಮಗೆ ಒಂಟಿತನ, ಆತಂಕ, ಖಿನ್ನತೆ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಎದುರಾಗಬಹುದು.

ಹಾಗಾದರೆ, ಸೋಷಿಯಲ್ ಮೀಡಿಯಾದ ಬದಲು ಬೇರೆ ಯಾವುದರಿಂದ ನಮ್ಮ ಸಮಯವನ್ನು ಕಳೆಯಬಹುದು? ನೀವು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟಿವ್ ಎಂಬುದಕ್ಕಿಂತಲೂ ನಿಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದು ಹೆಚ್ಚು ಮುಖ್ಯವಾಗಿದೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಕ್ರಾಲ್ ಮಾಡುತ್ತಾ ಕೂರುವ ಬದಲು ಸಮಯ ಸಿಕ್ಕಾಗ ಹೊರಗೆಲ್ಲ ಸಣ್ಣದೊಂದು ವಾಕ್ ಮಾಡಿ. ಸ್ವಲ್ಪ ಸಂಗೀತವನ್ನು ಹಾಕಿಕೊಂಡು ಕುಳಿತುಕೊಳ್ಳಿ. ಸಂಜೆಯ ಬಳಿಕ ಕ್ಯಾಂಡಲ್​ಗಳನ್ನು ಹಚ್ಚಿಕೊಂಡು ಸುಮ್ಮನೇ ಕುಳಿತುಕೊಳ್ಳಿ. ಬಿಡುವು ಸಿಕ್ಕಾಗ ಒಳ್ಳೆಯ ಪುಸ್ತಕಗಳನ್ನು ಓದಿ.

ಅದೂ ಬೋರ್ ಎನಿಸಿದರೆ ಅಡುಗೆ ಮನೆಗೆ ಹೋಗಿ ರುಚಿಕರವಾದ ಅಡುಗೆ ತಯಾರಿಸಿ. ಯೋಗ ಅಥವಾ ಧ್ಯಾನ ಮಾಡಲು ಪ್ರಯತ್ನಿಸಿ. ಚಹಾ, ಕಾಫಿ ಅಥವಾ ಹಾಟ್ ಚಾಕೊಲೇಟ್‌ನಂತಹ ಹಿತವಾದ, ಬಿಸಿ ಪಾನೀಯವನ್ನು ಕುಡಿಯಿರಿ. ಹಳೆಯ ಫೋಟೋಗಳನ್ನು ನೋಡಿ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಿ. ಸಮಯ ಸಿಕ್ಕಾಗ ಹಳೆಯ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ಕರೆ ಮಾಡಿ. ಫ್ರೆಂಡ್ಸ್ ಜೊತೆ ಊಟ ಮಾಡಿ. ತರಕಾರಿ, ಹಣ್ಣು, ದಿನಸಿಯನ್ನು ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಬದಲು ನೀವೇ ನೇರವಾಗಿ ಹೋಗಿ ಖರೀದಿ ಮಾಡಿ. ಆಗ ನಿಮಗೂ ಟೈಂ ಪಾಸ್ ಆಗುತ್ತದೆ, ಒಳ್ಳೆಯ ತರಕಾರಿಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು.

ಇದರಿಂದ ನಿಮ್ಮ ಮನಸಿಗೆ ನೆಮ್ಮದಿ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆಗಾಗ ಸೋಷಿಯಲ್ ಮೀಡಿಯಾದಿಂದ ಈ ರೀತಿಯ ಬ್ರೇಕ್ ತೆಗೆದುಕೊಳ್ಳದಿದ್ದರೆ ಅದೇ ಹುಚ್ಚಾಗಿ ಅಂಟಿಕೊಳ್ಳಬಹುದು ಎಚ್ಚರ! ಇದನ್ನೂ ಓದಿ:

Published On - 3:30 pm, Tue, 28 May 24

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ