ಮಳೆ ನೀರಿನಲ್ಲಿ ನೆನೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಮಳೆಗಾಲ ಆರಂಭವಾಗಿದೆ, ಆಗಾಗ್ಗೆ ಮಳೆ ಸುರಿಯುವ ಕಾರಣ ವಿಶೇಷವಾಗಿ ಅಮ್ಮಂದಿರು ಮಳೆಯಲ್ಲಿ ಒದ್ದೆಯಾಗಬೇಡಿ ಜ್ವರ, ಶೀತ ಬಂದ್ರೆ ಕಷ್ಟ ಎಂದು ಮಕ್ಕಳಿಗೆ ಗದರುತ್ತಿರುತ್ತಾರೆ. ಆದರೆ ಏನು ಗೊತ್ತಾ, ಈ ಮಳೆ ನೀರಿನಲ್ಲಿ ಸ್ವಲ್ಪ ನೆನೆಯುವುದರಿಂದಲೂ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆಯಂತೆ. ಈ ಬಾರಿಯ ಮಳೆಯಲ್ಲಿ ಸ್ವಲ್ಪ ನೆನೆಯುವ ಮೂಲಕ ನೀವು ಕೂಡ ಈ ಕೆಲವು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

ಮಳೆ ನೀರಿನಲ್ಲಿ ನೆನೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 30, 2026 | 6:04 PM

ಮುಖ್ಯಾಂಶಗಳು

  • ಮಳೆನೀರಿನಲ್ಲಿ ನೆನೆಯುವುದು ತುಂಬಾನೇ ಒಳ್ಳೆಯದು
  • ಮಳೆನೀರಿನಲ್ಲಿ ಹಲವು ಖನಿಜಗಳಿದ್ದು, ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ
  • ತುಂಬಾ ಹಗುರವಾಗಿರುವ ಮಳೆನೀರು ಮನಸ್ಸನ್ನು ತಕ್ಷಣವೇ ರಿಫ್ರೆಶ್ ಮಾಡುತ್ತದೆ

ಮಳೆಗಾಲದಲ್ಲಿ (Monsoon) ವಾತಾವರಣ ತುಂಬಾನೇ ತಂಪಾಗಿರುತ್ತದೆ. ಚಿಟಪಟ ಮಳೆಹನಿಗಳು, ತಂಪಾದ ಗಾಳಿ ಮನಸ್ಸಿಗೆ ಏನೋ ಸಂತೋಷವನ್ನು ನೀಡುತ್ತದೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮಳೆಯಲ್ಲಿ ನೆನೆಯುತ್ತಾ ಕುಣಿದಾಡಬೇಕೆಂದು ಹಲವರಿಗೆ ಆಸೆಯಾಗುತ್ತದೆ. ಆದರೆ ಮನೆಯಲ್ಲಿ ಅಮ್ಮನ ಕೈಯಲ್ಲಿ ಚೆನ್ನಾಗಿ ಬೈಸಿಕೊಳ್ಳಬೇಕಾಗುತ್ತದೆ, ಜ್ವರ ಬಂದ್ರೆ ಏನು ಮಾಡೋದಪ್ಪಾ ಎಂಬ ಭಯದಿಂದ ಮಳೆಯಲ್ಲಿ ನೆನೆಯಲು ಹಿಂದೇಟು ಹಾಕುತ್ತಾರೆ. ಏನು ಗೊತ್ತಾ, ಸ್ವಲ್ಪ ಹೊತ್ತು ಮಳೆಯಲ್ಲಿ ನೆನೆಯುತ್ತಾ ಮನಬಿಚ್ಚಿ ಖುಷಿಪಟ್ಟರೆ ಯಾವ ತೊಂದರೆಯೂ ಇರೋದಿಲ್ಲವಂತೆ, ಹೀಗೆ ಸ್ವಲ್ಪ ಹೊತ್ತು ಮಳೆ ನೀರಿನಲ್ಲಿ ನೆನೆದರೆ ಹಲವಾರು ಪ್ರಯೋಜನಗಳು ಲಭಿಸುತ್ತವೆಯಂತೆ. ಅಷ್ಟಕ್ಕೂ ಮಳೆನೀರಿನಲ್ಲಿ ನೆನೆದರೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ನೋಡೋಣ ಬನ್ನಿ.

ಮಳೆ ನೀರಿನಲ್ಲಿ ನೆನೆಯುವುದರಿಂದ ಲಭಿಸುವ ಪ್ರಯೋಜನಗಳೇನು?

ಮಳೆನೀರಿನಲ್ಲಿ ವಿಟಮಿನ್ ಬಿ12 ಮತ್ತು ಇತರ ಹಲವು ಖನಿಜಗಳು ಇದ್ದು, ಅವು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಇದು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿದ್ದು, ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಕೂದಲನ್ನು ಬಲಪಡಿಸುತ್ತದೆ: ಮಳೆಯು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಆಮ್ಲೀಯ ಸ್ವಭಾವವನ್ನು ಹೊಂದಿರುವ ಇದು ನಿಮ್ಮ ನೆತ್ತಿಯಿಂದ ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು  ಇದು ಕೂದಲನ್ನು ಬಲಪಡಿಸುತ್ತದೆ, ಮಂದತೆಯನ್ನು ತೆಗೆದುಹಾಕುತ್ತದೆ. ಅಲ್ಲದೆ ಮಳೆ ನೀರಿನಲ್ಲಿ ವಿಟಮಿನ್‌ ಬಿ12 ಇದ್ದು, ಇದು ನಮ್ಮ ಕೂದಲನ್ನು ಮೃದುಗೊಳಿಸಲು ಸಹಕಾರಿ.

ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ: ಮಳೆಯಲ್ಲಿ ನೆನೆಯುವುದು ಹಾರ್ಮೋನುಗಳ ಸಮತೋಲನಕ್ಕೆ ಪ್ರಯೋಜನಕಾರಿ. ಮಳೆನೀರಿನಲ್ಲಿ ನೆನೆಯುವುದರಿಂದ ಎಂಡಾರ್ಫಿನ್ ಮತ್ತು ಸಿರೊಟೋನಿನ್ ನಂತಹ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ, ಉತ್ತಮ ನಿದ್ರೆ ಪಡೆಯಲು ಸಹ ಸಹಕಾರಿಯಾಗಿದೆ.

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ: ಮಳೆಯಲ್ಲಿ ನೆನೆಯುವುದು ತುಂಬಾ ಒಳ್ಳೆಯದು. ಇದು ಉದ್ವೇಗ, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಮಳೆಹನಿಗಳು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಚಿಂತೆಗಳಿಂದ ಮುಕ್ತರಾಗಲು ಬಯಸಿದರೆ, ಋತುಮಾನದ ಮಳೆಯಲ್ಲಿ ನೆನೆಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ: ಬೇಸಿಗೆಯಲ್ಲಿ ಚರ್ಮದ ಸಮಸ್ಯೆಗಳಿಗೆ ಬೆವರು ಪ್ರಮುಖ ಕಾರಣವಾಗಿದೆ. ತಂಪಾದ ಮಳೆನೀರಿನಲ್ಲಿ ಸ್ನಾನ ಮಾಡುವುದರಿಂದ ಈ ದದ್ದುಗಳಿಂದ ಪರಿಹಾರ ಸಿಗುತ್ತದೆ. ಮಳೆನೀರಿನ ಸ್ನಾನವು ನಿಮ್ಮ ದೇಹವನ್ನು ತಂಪಾಗಿಸುವುದಲ್ಲದೆ, ದದ್ದುಗಳನ್ನು ಸಹ ನಿವಾರಿಸುತ್ತದೆ. ಮಳೆನೀರು ನಿಮ್ಮ ಚರ್ಮದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ ಮತ್ತು ಬೇಸಿಗೆಯ ದದ್ದುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಳೆನೀರಿನ ಕ್ಷಾರೀಯ ಗುಣಗಳು ತೀವ್ರವಾದ ಮೊಡವೆಗಳಿಂದ ಉಂಟಾಗುವ ಮುಖದ ಊತವನ್ನು ಕಡಿಮೆ ಮಾಡಲು ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ದೇಹಕ್ಕೆ ವಿಟಮಿನ್ ಬಿ 12 ಒದಗಿಸುತ್ತದೆ: ಮಳೆನೀರು ತುಂಬಾ ಹಗುರವಾಗಿದ್ದು, ಕ್ಷಾರೀಯ pH ಅನ್ನು ಹೊಂದಿರುತ್ತದೆ. ಇದು  ಮನಸ್ಸನ್ನು ತಕ್ಷಣವೇ ರಿಫ್ರೆಶ್ ಮಾಡುವ ಶಕ್ತಿಯನ್ನು ಹೊಂದಿದೆ. ಮಳೆನೀರು ವಿಟಮಿನ್ ಬಿ 12 ಅನ್ನು ಉತ್ಪಾದಿಸುವ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ನೀವು ವಿಟಮಿನ್ ಪಡೆಯಲು ಬಯಸಿದರೆ, ನೀವು 10-15 ನಿಮಿಷಗಳ ಕಾಲ ಮಳೆಯಲ್ಲಿ ನೆನೆಯಬಹುದು.

ಮಳೆಯಲ್ಲಿ ನೆನೆಯುವಾಗ ತೆಗೆದುಕೊಳ್ಳಬೇಕಾದ ಈ ಮುನ್ನೆಚ್ಚರಿಕೆಗಳು:

  • ಹೆಚ್ಚು ಹೊತ್ತು ಮಳೆಯಲ್ಲಿ ನೆನೆಯಬಾರದು ಏಕೆಂದರೆ ಇದು ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. 15 ರಿಂದ 20 ನಿಮಿಷಗಳ ಕಾಲ ಮಳೆಯಲ್ಲಿ ಒದ್ದೆಯಾಗುವುದು ಒಳ್ಳೆಯದು.
  • 15-20 ನಿಮಿಷಗಳ ಕಾಲ ಮಳೆಯಲ್ಲಿ ನೆನೆದ ನಂತರ, ತಕ್ಷಣ ಸ್ನಾನ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು.
  • ದೇಹವನ್ನು ಒಳಗಿನಿಂದ ಬೆಚ್ಚಗಾಗಿಸಲು, ಮಳೆಯಲ್ಲಿ ನೆನೆದ ನಂತರ ಬಿಸಿ ಸೂಪ್ ಅಥವಾ ಚಹಾ ಕುಡಿಯಿರಿ. ಇದಲ್ಲದೆ, ಮೊದಲ ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಬೇಕು. ಈ ನೀರಿನಲ್ಲಿ ಬ್ಯಾಕ್ಟೀರಿಯಾ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us