AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?

ಇತ್ತೀಚಿನ ದಿನಗಳಲ್ಲಿ, ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಎಲ್ಲರೂ ಹೆಚ್ಚಿನ ಸಮಯ ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಅದರಲ್ಲೂ ಹೆಚ್ಚಿನವರು ಊಟ ಮಾಡುವಾಗ ಕೂಡ ಮೊಬೈಲ್‌ ಕೈಯಲ್ಲಿಟ್ಟುಕೊಂಡಿರುತ್ತಾರೆ. ಹೀಗೆ ಮೊಬೈಲ್‌ ನೋಡುತ್ತಾ ಊಟ ಮಾಡುವ ಅಭ್ಯಾಸ ನಿಮಗೂ ಇದ್ಯಾ, ಈ ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಎಷ್ಟು ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಿರಿ.

ಮೊಬೈಲ್‌ ನೋಡುತ್ತಾ ಆಹಾರ ಸೇವನೆ ಮಾಡುವ ಅಭ್ಯಾಸದಿಂದ ಉಂಟಾಗುವ ತೊಂದರೆಗಳೇನು?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 30, 2026 | 5:05 PM

Share

ಮುಖ್ಯಾಂಶಗಳು

  • ಆಹಾರ ಸೇವಿಸುವಾಗ ಮೊಬೈಲ್‌ ನೋಡುವುದು ಒಳ್ಳೆಯ ಅಭ್ಯಾಸವಲ್ಲ
  • ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಮಗಳನ್ನು ಬೀರುತ್ತವೆ
  • ಮೊಬೈಲ್‌ ನೋಡುತ್ತಾ ಊಟ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ

ಇಂದಿನ ಈ ಡಿಜಿಟಲ್ ಯುಗದಲ್ಲಿ, ಮೊಬೈಲ್ ಫೋನ್‌ಗಳು (mobile phone) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಹುತೇಕ ಹೆಚ್ಚಿನವರು ಬೆಳಿಗ್ಗೆ ಎದ್ದ ಕ್ಷಣದಿಂದ ಹಿಡಿದು ರಾತ್ರಿ ಮಲಗುವವರೆಗೆ, ಹೆಚ್ಚಿನ ಸಮಯ ಮೊಬೈಲ್‌ ಫೋನ್‌ನಲ್ಲಿಯೇ ಕಳೆಯುತ್ತಾರೆ. ಅಷ್ಟೇ ಅಲ್ಲದೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಊಟ ಮಾಡುವಾಗಲೂ ಮೊಬೈಲ್‌ ನೋಡುತ್ತಾರೆ. ಈ ಅಭ್ಯಾಸವು ಸಾಮಾನ್ಯದಂತೆ ತೋರಿದರೂ, ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಮಗಳನ್ನು ಬೀರುತ್ತವೆ. ನೀವು ಕೂಡ ಊಟ ಮಾಡುವಾಗ ಮೊಬೈಲ್‌ ಫೋನ್‌ ನೋಡ್ತೀರಾ, ಈ ಒಂದು ಅಭ್ಯಾಸ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಊಟ ಮಾಡುವಾಗ ಮೊಬೈಲ್‌ ಫೋನ್‌ ನೋಡಿದರೆ ಏನಾಗುತ್ತದೆ?

ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ನೀವು ಮೊಬೈಲ್ ನೋಡುತ್ತಾ ಊಟ ಮಾಡುವಾಗ, ನಿಮ್ಮ ಪೂರ್ಣ ಗಮನ ಫೋನ್‌ ಮೇಲೆಯೇ ಇರುತ್ತದೆ ಹೊರತು ಆಹಾರದ ಮೇಲೆ ಇರುವುದಿಲ್ಲ. ಇದರಿಂದ ಆಹಾರವನ್ನು ಸರಿಯಾಗಿ ಜಗಿಯಲು ಸಾಧ್ಯವಾಗುವುದಿಲ್ಲ, ಈ ರೀತಿ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಇದು ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಜೀರ್ಣಕ್ರಿಯೆಯ ಮೇಲೆಯೂ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ.

ಅತಿಯಾಗಿ ತಿನ್ನುವ ಅಪಾಯ: ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ಫೋನ್ ನೋಡುವುದರಿಂದ ಆಹಾರದ ಮೇಲಿನ ಗಮನ ಕಡಿಮೆಯಾಗುತ್ತದೆ, ಇದರಿಂದಾಗಿ ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಅತಿಯಾಗಿ ಊಟ ಮಾಡುವ ಅಭ್ಯಾಸ  ಇದು ತೂಕ ಹೆಚ್ಚಾಗುವ ಮತ್ತು ಬೊಜ್ಜುತನದ ಅಪಾಯವನ್ನು ಹೆಚ್ಚಿಸುತ್ತದೆ.

ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು: ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಆಹಾರವನ್ನು ಎಚ್ಚರಿಕೆಯಿಂದ ಸೇವನೆ ಮಾಡುವುದು ಅತ್ಯಗತ್ಯ. ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಕರುಳು ಮತ್ತು ಮೆದುಳಿನ ನಡುವಿನ ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಜೀರ್ಣಕ್ರಿಯೆಯ ಸಮಸ್ಯೆಗಳು ಹೆಚ್ಚಾಗಬಹುದು.

ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ:  ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್‌ ಫೋನ್‌ ತೋರಿಸುತ್ತಾ ಊಟ ಮಾಡಿಸುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಸರಿಯಾದ ಆಹಾರ ಪದ್ಧತಿ ಬೆಳೆಯುವುದಿಲ್ಲ. ಇದು ಪೌಷ್ಟಿಕಾಂಶದ ಕೊರತೆ, ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಒಂದು ತಿಂಗಳ ಕಾಲ ಚಹಾ ಸೇವಿಸದಿದ್ದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ?

ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ: ಮೊಬೈಲ್‌ ನೋಡುತ್ತಾ ಊಟ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ ಮತ್ತು ಇದು ವ್ಯಕ್ತಿಯು ಆಹಾರವನ್ನು ಆನಂದಿಸುತ್ತಾ ಸವಿಯುವುದನ್ನು ತಡೆಯುತ್ತದೆ.

ಸೋಂಕಿನ ಅಪಾಯ ಹೆಚ್ಚಾಗಬಹುದು: ಮೊಬೈಲ್ ಫೋನ್‌ಗಳಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅಂಟಿಕೊಂಡಿರುತ್ತವೆ. ಊಟ ಮಾಡುವಾಗ ಫೋನ್ ಅನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಈ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಬಹುದು. ಇದು ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

ಆಹಾರ ಸೇವಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳೇನು?

  • ಊಟ ಮಾಡುವಾಗ ಮೊಬೈಲ್ ಮತ್ತು ಟಿವಿಯಿಂದ ದೂರವಿರಿ.
  •  ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿರಿ. ಈ ರೀತಿ ಮಾಡುವುದರಿಂದ ಲಾಲಾರಸವು ಆಹಾರದೊಂದಿಗೆ ಚೆನ್ನಾಗಿ ಬೆರೆಯುತ್ತದೆ. ಮತ್ತು ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.
  • ಯಾವಾಗಲೂ ಶಾಂತ ಮತ್ತು ಆಹ್ಲಾದಕರ ವಾತಾವರಣದಲ್ಲಿ ಕುಳಿತು ಊಟ ಮಾಡಿ.
  •  ಸಾಧ್ಯವಾದರೆ ಕುಟುಂಬದೊಂದಿಗೆ ಕುಳಿತು ಒಟ್ಟಿಗೆ  ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us