ಜಗತ್ತಿನ ದೀರ್ಘಾಯುಷಿಗಳ ಆಹಾರದ ಗುಟ್ಟು ಇಲ್ಲಿದೆ
ದೀರ್ಘಾಯುಷ್ಯದ ಹಾಟ್‌ಸ್ಪಾಟ್‌ಗಳ ಕುರಿತು ಸಂಶೋಧನೆಯನ್ನು ಪ್ರಾರಂಭಿಸಿದ ಲೇಖಕ ಡಾನ್ ಬಟ್ನರ್, ಈ ಪ್ರದೇಶಗಳ ನಿವಾಸಿಗಳ ಜೀವನಶೈಲಿಯ ಅಭ್ಯಾಸಗಳನ್ನು ಬಹಿರಂಗಪಡಿಸಿದ್ದಾರೆ.
ನಾವು ಸೆಲೆಬ್ರಿಟಿಗಳ ಮುಂಜಾನೆಯ ಅಭ್ಯಾಸಗಳು, ಅವರು ಏನು ತಿನ್ನುತ್ತಾರೆ ಎಂಬುದೆಲ್ಲದರ ಬಗ್ಗೆ ಮಾತನಾಡುತ್ತೇವೆ. ಅದನ್ನೇ ಅನುಸರಿಸಲು ನಾವು ಪ್ರಯತ್ನಿಸುತ್ತೇವೆ. ಆದರೆ, ಬ್ಲೂ ಜೋನ್ಗಳಾದ ಗ್ರೀಸ್, ಕ್ಯಾಲಿಫೋರ್ನಿಯ, ಇಟಲಿ, ಜಪಾನ್ ಮುಂತಾದ ದೇಶಗಳ ಜನರು ತಮ್ಮ ದಿನಗಳನ್ನು ಹೇಗೆ ಪ್ರಾರಂಭಿಸುತ್ತಾರೆ ಎಂಬುದರ ಬಗ್ಗೆ ನಾವು ಗಮನ ನೀಡುವುದಿಲ್ಲ. ಸಂಶೋಧನೆಯ ಪ್ರಕಾರ, ಈ ಸ್ಥಳಗಳಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ 100 ವರ್ಷಗಳವರೆಗೆ ಬದುಕುತ್ತಾರೆ. ಅವರ ದೀರ್ಘಾಯಸ್ಸು ಇದೀಗ ವಿವಿಧ ದೇಶಗಳ ಗಮನ ಸೆಳೆದಿದೆ.
ದೀರ್ಘಾಯುಷ್ಯದ ಹಾಟ್‌ಸ್ಪಾಟ್‌ಗಳ ಕುರಿತು ಸಂಶೋಧನೆಯನ್ನು ಪ್ರಾರಂಭಿಸಿದ ಲೇಖಕ ಡಾನ್ ಬಟ್ನರ್, ಈ ಪ್ರದೇಶಗಳ ನಿವಾಸಿಗಳ ಜೀವನಶೈಲಿಯ ಅಭ್ಯಾಸಗಳನ್ನು ಬಹಿರಂಗಪಡಿಸಿದ್ದಾರೆ. ಕಡಿಮೆ ಪ್ರೋಟೀನ್ ಹೊಂದಿರುವ ಆಹಾರವನ್ನು ಅನುಸರಿಸುವುದರಿಂದ ದೀರ್ಘಾವಧಿಯ ಜೀವನವನ್ನು ನಡೆಸಬಹುದಾಗಿದೆ.
ಇದನ್ನೂ ಓದಿ: ಚಹಾದೊಂದಿಗೆ ಈ 3 ಆಹಾರಗಳನ್ನು ಸೇವಿಸಬಾರದು? ಈ ಬಗ್ಗೆ ಪೌಷ್ಟಿಕತಜ್ಞರು ಹೇಳಿದ್ದೇನು?
ಬೆಳಗಿನ ತಿಂಡಿಗೆ ಪೌಷ್ಟಿಕ ಆಹಾರವನ್ನು ಸೇವಿಸಿ:
ದೀರ್ಘಾಯುಷಿಯಾಗಬೇಕೆಂದರೆ ಬೆಳಗ್ಗೆ ಪೌಷ್ಟಿಕಾಂಶ ಇರುವ ಆಹಾರ ಸೇವಿಸಬೇಕು. ಬಟ್ನರ್ ಅವರ ಅಧ್ಯಯನದಲ್ಲಿ ಲೋಮಾ ಲಿಂಡಾದಲ್ಲಿ ವಾಸಿಸುತ್ತಿದ್ದ 105 ವರ್ಷ ವಯಸ್ಸಿನ ಮಹಿಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ದಿನವೂ ಬೆಳಗ್ಗೆ ಒಂದು ದೊಡ್ಡ ಕಪ್ ಬೇಯಿಸಿದ ಓಟ್ಸ್ ಸೇವಿಸುತ್ತಾರೆ. ಇದನ್ನು ತಯಾರಿಸುವುದು ಬಹಳ ಸುಲಭ. ಇದಕ್ಕೆ ಆರೋಗ್ಯಕರ ವಾಲ್‌ನಟ್‌ಗಳು, ಹೆಚ್ಚಿನ ಫೈಬರ್ ಹೊಂದಿರುವ ಖರ್ಜೂರ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುವ ಸೋಯಾ ಹಾಲನ್ನು ಹಾಕಲಾಗುತ್ತದೆ.
ಬೆಳಗ್ಗೆ ಒಂದು ಕಪ್ ಕಾಫಿ ಕುಡಿಯಿರಿ:
ಬುಟ್ನರ್ ಪ್ರಕಾರ, 5 ಬ್ಲೂ ಜೋನ್ಗಳ ನಿವಾಸಿಗಳು ತಮ್ಮ ಮುಂಜಾನೆಯನ್ನು ಕಾಫಿಯ ಮೂಲಕ ಆರಂಭಿಸುತ್ತಾರೆ. ಅವರು ಇದಕ್ಕೆ ಸಕ್ಕರೆ ಹಾಕುವುದಿಲ್ಲ. ಅದರ ಬದಲಾಗಿ ಸ್ಟೀವಿಯಾದಂತಹ ನೈಸರ್ಗಿಕ ಸಿಹಿ ಅಂಶವನ್ನು ಹಾಕುತ್ತಾರೆ.
ಇದನ್ನೂ ಓದಿ: ಊಟದ ನಂತರ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಇದು ಆರೋಗ್ಯಕ್ಕೆ ಹಾನಿಕಾರಕ
ಬ್ಲೂ ಜೋನ್ಗಳಲ್ಲಿ ಚಹಾವು ಮತ್ತೊಂದು ಸಾಮಾನ್ಯ ಪಾನೀಯವಾಗಿದೆ. ಆದ್ದರಿಂದ ನಿಮ್ಮ ಮುಂಜಾನೆಯನ್ನು ಕಾಫಿ ಅಥವಾ ಒಂದು ಕಪ್ ಚಹಾದೊಂದಿಗೆ ಆರಂಭಿಸಿ.
ಬೆಳಗ್ಗೆ ಆದಷ್ಟು ಲವಲವಿಕೆಯಿಂದಿರಿ. ನಿಮ್ಮ ಎದುರು ಯಾರೇ ಸಿಕ್ಕರೂ ನಗುತ್ತಾ ಮಾತನಾಡಿಸಿ. ನಿಮ್ಮ ನಡವಳಿಕೆಗಳು ಸಾಂಕ್ರಾಮಿಕವಾಗಿರುತ್ತವೆ. ನೀವು ನಿಮ್ಮ ನೆರೆಹೊರೆಯವರನ್ನು ಹೇಗೆ ನೋಡುತ್ತೀರೋ, ಮಾತನಾಡಿಸುತ್ತೀರೋ ಅವರೂ ಅದೇ ರೀತಿ ನಿಮ್ಮನ್ನು ನಡೆಸಿಕೊಳ್ಳುತ್ತಾರೆ. ಹಣ್ಣುಗಳು, ಧಾನ್ಯಗಳು ಸಮೃದ್ಧವಾಗಿರುವ ಆಹಾರ ಸೇವಿಸಿ. 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ.