Black Friday 2023: ಬ್ಲಾಕ್ ಫ್ರೈಡೇ ಎಂದರೇನು?; ಇದನ್ನು ಏಕೆ ಆಚರಿಸುತ್ತಾರೆ?
2015ರಲ್ಲಿ ಪ್ರೈಮ್ ಡೇ ಎಂದು ಕರೆಯುವ ಬ್ಲಾಕ್ ಫ್ರೈಡೇಯ ಡೀಲ್‌ಗಳನ್ನು ಮೊದಲು ನೀಡಿದ್ದು ಅಮೆಜಾನ್. ಅಮೆಜಾನ್ ಬ್ಲಾಕ್ ಫ್ರೈಡೇಯಂದು ಉತ್ತಮ ಆಫರ್ಗಳ ಭರವಸೆ ನೀಡಿತು. ಅಮೆಜಾನ್ ಕಂಪನಿಯು 2016 ಮತ್ತು 2017ರಲ್ಲಿ ಈ ಆಫರ್ಗಳನ್ನು ಮತ್ತೆ ನೀಡಿತು. ಇದನ್ನು ಬೇರೆ ಕಂಪನಿಗಳು ಕೂಡ ಫಾಲೋ ಮಾಡಿದವು.
ನವದೆಹಲಿ: ಬ್ಲಾಕ್ ಫ್ರೈಡೇ ಎಂಬುದು ಆಡುಮಾತಿನ ಪದವಾಗಿದ್ದು, ಇದನ್ನು ಅಮೆರಿಕಾದಲ್ಲಿ ನವೆಂಬರ್ ನಾಲ್ಕನೇ ಶುಕ್ರವಾರ ಆಚರಿಸಲಾಗುತ್ತದೆ. ಈ ವರ್ಷ ಈ ದಿನವು ನವೆಂಬರ್ 24ರಂದು (ಇಂದು) ಬಂದಿದೆ. ಬ್ಲಾಕ್ ಫ್ರೈಡೇ ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ಶಾಪಿಂಗ್‌ನ ಅನಧಿಕೃತ ಆರಂಭವನ್ನು ಸೂಚಿಸುತ್ತದೆ. ಈ ದಿನವನ್ನು ವೀಕ್ಷಿಸಲು ಹಲವಾರು ಮಳಿಗೆಗಳು ರಿಯಾಯಿತಿ ದರದಲ್ಲಿ ಆಫರ್ಗಳನ್ನು ನೀಡುತ್ತವೆ. ಅವಧಿಗಿಂತ ಮೊದಲೇ ತಮ್ಮ ಅಂಗಡಿಗಳನ್ನು ಓಪನ್ ಮಾಡುತ್ತವೆ.
ಬ್ಲಾಕ್ ಫ್ರೈಡೇ ಎಂದು ಏಕೆ ಕರೆಯುತ್ತಾರೆ?:
ಬ್ಲಾಕ್ ಫ್ರೈಡೇ ಎಂಬ ಪದವನ್ನು ಪೊಲೀಸರು, ಬಸ್ ಚಾಲಕರು ಮತ್ತು ಇತರರು 1960ರ ದಶಕ ಮತ್ತು 1970ರ ದಶಕದ ಆರಂಭದಲ್ಲಿ ಬಳಸಲಾರಂಭಿಸಿದರು. ಥ್ಯಾಂಕ್ಸ್‌ಗಿವಿಂಗ್ ವಾರಾಂತ್ಯದ ಮೊದಲು ಶುರುವಾದ ನಗರದ ಜನರ ಅವ್ಯವಸ್ಥೆಯನ್ನು ಉಲ್ಲೇಖಿಸಲು ಈ ಪದವನ್ನು ಬಳಸಿದರು. ಕೆಲವು ದೊಡ್ಡ ವ್ಯಾಪಾರಗಳು ಹೆಚ್ಚು ಧನಾತ್ಮಕ ಪ್ರಭಾವ ಬೀರಲು ಅದಕ್ಕೆ ಬಿಗ್ ಫ್ರೈಡೇ ಎಂಬ ಪದವನ್ನು ಮರುನಾಮಕರಣ ಮಾಡಿದವು. 1980ರ ದಶಕದಿಂದಲೂ ಚಿಲ್ಲರೆ ವ್ಯಾಪಾರಿಗಳು ತಮ್ಮ ಚಿಲ್ಲರೆ ಲೆಡ್ಜರ್‌ಗಳು ಕಪ್ಪು ಬಣ್ಣದಲ್ಲಿರುವ ದಿನವನ್ನು ಬ್ಲಾಕ್ ಫ್ರೈಡೇ ಎಂದು ಕರೆಯಲು ಪ್ರಾರಂಭಿಸಿದರು.
ಇದನ್ನೂ ಓದಿ: World Television Day 2023: ವಿಶ್ವ ದೂರದರ್ಶನ ದಿನದ ಇತಿಹಾಸ, ಪ್ರಾಮುಖ್ಯತೆ ಏನು?
ಮಿಚಿಗನ್ ವಿಶ್ವವಿದ್ಯಾನಿಲಯದ ರಾಸ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಮಾರ್ಕೆಟಿಂಗ್ ಪ್ರೊಫೆಸರ್ ಮಾರ್ಕಸ್ ಕಾಲಿನ್ಸ್ ಮತ್ತು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದ ವರದಿ ಪ್ರಕಾರ, ಬ್ಲ್ಯಾಕ್ ಫ್ರೈಡೇ ಎನ್ನುವುದು ಗ್ರಾಹಕರು ಕ್ರಿಸ್‌ಮಸ್‌ಗಾಗಿ ರಜಾ ಶಾಪಿಂಗ್ ಪ್ರಾರಂಭಿಸುವುದರಿಂದ ಅಂಗಡಿಗಳು ಲಾಭದಲ್ಲಿ ಕಾರ್ಯನಿರ್ವಹಿಸುವ ದಿನವಾಗಿದೆ.
ಇದನ್ನೂ ಓದಿ: ಕರಾವಳಿ ಕಂಬಳದ ಇತಿಹಾಸ, ವಿಶೇಷ ತಿಳಿಯೋಣ ಬನ್ನಿ
ಮೊದಲು ಬ್ಲಾಕ್ ಫ್ರೈಡೇ ಎಂಬ ಪದವನ್ನು ನವೆಂಬರ್ 1951ರಲ್ಲಿ ಫ್ಯಾಕ್ಟರಿ ಮ್ಯಾನೇಜ್ಮೆಂಟ್ ಮತ್ತು ನಿರ್ವಹಣೆ ನಿಯತಕಾಲಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ನಂತರದ ದಿನವನ್ನು ಉಲ್ಲೇಖಿಸಲು ಬಳಸಲಾಯಿತು. ಇದಾದ ನಂತರ ಈ ಪದವನ್ನು 1952ರಲ್ಲಿ ಮತ್ತೆ ಬಳಸಲಾರಂಭಿಸಲಾಯಿತು. 2015ರಲ್ಲಿ ಪ್ರೈಮ್ ಡೇ ಎಂದು ಕರೆಯುವ ಬ್ಲಾಕ್ ಫ್ರೈಡೇಯ ಡೀಲ್‌ಗಳನ್ನು ಮೊದಲು ನೀಡಿದ್ದು ಅಮೆಜಾನ್ (Amazon.com). ಅಮೆಜಾನ್ ಬ್ಲಾಕ್ ಫ್ರೈಡೇಯಂದು ಉತ್ತಮ ಆಫರ್ಗಳ ಭರವಸೆ ನೀಡಿತು. ಅಮೆಜಾನ್ ಕಂಪನಿಯು 2016 ಮತ್ತು 2017ರಲ್ಲಿ ಈ ಆಫರ್ಗಳನ್ನು ಮತ್ತೆ ನೀಡಿತು. ಇದನ್ನು ಬೇರೆ ಕಂಪನಿಗಳು ಕೂಡ ಫಾಲೋ ಮಾಡಿದವು.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ