ವಾಹನ ಚಲಾಯಿಸುವಾಗ ನಿದ್ರೆ ಬರುತ್ತಾ? ಇದಕ್ಕೆ ಕಾರಣಗಳು ಏನು? ಇಲ್ಲಿದೆ ತಜ್ಞರ ಸಲಹೆ
ನಿದ್ದೆಗಣ್ಣಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ ಅಪಘಾತಗಳಿಗೆ ಸಂಭವಿಸಬಹುದು. ಡ್ರೈವ್ ಮಾಡುವಾಗ ನಿದ್ದೆ ಬರಲು ಕಾರಣಗಳು ಮತ್ತು ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಜ್ಞರು ವಿವರಿಸುತ್ತಾರೆ.

ವಾಹನ ಚಲಾಯಿಸುವಾಗ ನಿದ್ದೆ ಬಂದು, ಆ ನಿದ್ದೆಗಣ್ಣಲ್ಲೇ ಡ್ರೈವ್ ಮಾಡುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಆಯಾಸದಿಂದ ಮೈಕ್ರೋಸ್ಲೀಪ್ ಎಂಬ ಕಿರುನಿದ್ರೆಯ ಸಣ್ಣ ಅಸ್ವಸ್ಥತೆಯನ್ನು ಹೊಂದಿರುತ್ತಾರೆ. ಅಂತಹವರು ವಾಹನ ಚಲಾಯಿಸುವಾಗ ರಸ್ತೆ ಅಪಘಾತಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅರೆನಿದ್ರಾವಸ್ಥೆಯಲ್ಲಿ ವಾಹನ ಚಲಾಯಿಸುವುದು, ಮದ್ಯ ಸೇವಿಸಿ ವಾಹನ ಚಲಾಯಿಸಿದಷ್ಟೇ ಅಪಾಯಕಾರಿಯಾಗಿದೆ. ಅನೇಕ ಜನರು ನಿದ್ದೆಗಣ್ಣಲ್ಲಿ ವಾಹನಗಳನ್ನು ಚಲಾಯಿಸುವಾಗ ನಿಯಂತ್ರಣ ತಪ್ಪಿ, ಅಪಘಾತಕ್ಕಿಡಾದ ಅನೇಕ ಉದಾಹರಣೆಗಳಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತಕ್ಕೀಡಾಗಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರು ನಿದ್ದೆಗಣ್ಣಲ್ಲಿ ಕಾರ್ ಚಲಾಯಿಸಿದ ಕಾರಣದಿಂದ ಈ ಅಪಘಾತ ಸಂಭವಿಸಿತ್ತು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಾರಿಗೆ ಸಂಶೋಧನಾ ವಿಭಾಗದ ಸಚಿವಾಲಯದ ವರದಿಯ ಪ್ರಕಾರ, 2021ರಲ್ಲಿ ರಸ್ತೆ ಅಪಘಾತಗಳು 1,53,972 ಜೀವಗಳನ್ನು ಬಲಿ ಪಡೆದುಕೊಂಡಿವೆ. 3,84,448 ಜನರಿಗೆ ರಸ್ತೆ ಅಪಘಾತದಿಂದ ಗಂಭೀರ ಗಾಯಗಳಾಗಿವೆ. ಮತ್ತು ಇದರಲ್ಲಿ ವಾಹನ ಚಲಾಯಿಸಿದ ಹೆಚ್ಚಿನವರು 18 ರಿಂದ 45 ವರ್ಷದ ಒಳಗಿನವರು.
ಇಎನ್‌ಟಿ ಕನ್ಸಲ್ಟೆಂಟ್ ಸರ್ಜನ್ ಮತ್ತು ಸ್ಲೀಪ್ ಸ್ಪೆಷಲಿಸ್ಟ್ ಡಾ. ಮುರಾರ್ಜಿ ಘಾಡ್ಗೆ ಅವರ ಪ್ರಕಾರ, ಅರೆನಿದ್ರಾವಸ್ಥೆಯು ನಿದ್ರಾಹಿನತೆ ಮತ್ತು ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಿಂದ ಉಂಟಾಗುತ್ತದೆ. ಮತ್ತು ಹಿಂದಿನ 24 ಗಂಟೆಗಳಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ ವಾಹನವನ್ನು ಚಲಾಯಿಸಬಾರದು. ಚಿಕಿತ್ಸೆ ನೀಡದ ಸ್ಲೀಪ್ ಅಪ್ನೆಯವು ಅರೆನಿದ್ರಾವಸ್ಥೆಯ ಚಾಲನೆಗೆ ಹೇಗೆ ಕಾರಣವಾಗಬಹುದು.
ಇದನ್ನೂ ಓದಿ: Real Driving Emissions: ಹೊಸ ನಿಯಮ ಜಾರಿಯಿಂದ ಬಂದ್ ಆಗಲಿವೆ ಸಣ್ಣ ಡೀಸೆಲ್ ಕಾರುಗಳ ಮಾರಾಟ!
ನಿಮ್ಮ ನಿದ್ರಾಹೀನತೆ ಅಥವಾ ನಿದ್ರೆಯಲ್ಲಿ ಉಸಿರುಗಟ್ಟುವಿಕೆಗೆ ಚಿಕಿತ್ಸೆ ನೀಡದೆ ಹಾಗೆ ಬಿಟ್ಟರೆ ಅದರೊಂದ ಗಮನವನ್ನು ಕಾಪಾಡಿಕೊಳ್ಳಲು, ನಿಮ್ಮ ಕಣ್ಣುಗಳನ್ನು ಕೇಂದ್ರಿಕರಿಸಲು ಮತ್ತು ವಾಹನವನ್ನು ಚಲಾಯಿಸುವಾಗ ನಿಮ್ಮ ಗಮನವನ್ನು ಕೇಂದ್ರಿಕರಿಸಲು ನಿಮಗೆ ಸವಾಲಾಗಬಹುದು. ಸ್ಲೀಪ್‌ಅಪ್ನೆಯಗೆ ಚಿಕಿತ್ಸೆ ಪಡೆಯದಿರುವವರು ಹೆಚ್ಚಾಗಿ ಅರೆನಿದ್ರಾವಸ್ಥೆ ಸಂಬಂಧಿತ ಸ್ವಯಂ ಅಪಘಾತಕ್ಕೆ ತುತ್ತಾಗವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ನಿಮ್ಮ ಅರಿವಿನ ಕಾರ್ಯ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಸ್ಮರಣಾಶಕ್ತಿ, ವಾಹನ ಚಲಾಯಿಸುವ ಸಾಮರ್ಥ್ಯ ಇವೆಲ್ಲವೂ ನಿದ್ರೆಯಲ್ಲಿ ಉಸಿರುಗಟ್ಟುವಿಕೆಯಿಂದ ಪ್ರಭಾವಿತವಾಗಿರುತ್ತದೆ.
ಇವುಗಳಲ್ಲಿ ಹಲವು ಅಂಶಗಳು ಸ್ಲೀಪ್‌ಅಪ್ನೆಯಾ ಹೊಂದಿರುವ ಜನರಿಗೆ ಕೆಲಸದ ಮೇಲೆ ಗಮನ ಕೇಂದ್ರಿಕರಿಸಲು ಕಷ್ಟವಾಗಬಹುದು ಎಂದು ಘಾಡ್ಗೆ ಹೇಳುತ್ತಾರೆ.
ಸ್ಲೀಪ್ ಅಪ್ನಿಯವನ್ನು ತಡೆಗಟ್ಟುವ ಮಾರ್ಗ
ಪಾಲಿಸೋಮ್ನೋಗ್ರಫಿ ಅಥವಾ ಹೋಮ್ ಸ್ಲೀಪ್ ಸ್ಟಡಿ ಮೂಲಕ ರೋಗರ್ನಿಯ ಮಾಡುವುದು ಮೂಗಿನ ಸೆಪ್ಟಮ್ ವಿಚಲನ, ಟರ್ಬಿನೇಟ್ ಹೈಪರ್‌ಟ್ರೋಫಿಡ್ ಮೂಗಿನ ಪಾಲಿಪ್ಸ್, ಹೈಪರ್‌ಟ್ರೋಫಿಡ್ ಟಾನ್ಸಿಲ್ಸ್ಗಳಂತಹ ಮೇಲ್ಭಾಗದ ಶ್ವಾಸನಾಳದ ಅಡಚಣೆಯ ಶಸ್ತ್ರಚಿಕಿತ್ಸೆ ಮಾಡುವುದು.
ಪ್ಯಾಪ್ ಸಾಧನವನ್ನು ಬಳಸುವುದು
ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ನಿದ್ರೆಯ ಕೊರತೆಯು ಹೇಗೆ ತೂಕಡಿಕೆಯ ಚಾಲನೆಗೆ ಕಾರಣವಾಗಬಹುದು. ಸರಿಯಾದ ನಿದ್ರೆಯಿಂದ ವಂಚಿತರಾದ ಅನೇಕ ಜನರು ಕೆಲವು ಗಂಟೆಗಳ ನಿದ್ರೆಯಿಂದ ದೀರ್ಘಕಾಲದವರೆಗೆ ಚೆನ್ನಾಗಿ ಕೆಲಸ ಮಾಡಬಹುದು ಎಂದು ತಪ್ಪಾಗಿ ಭಾವಿಸುತ್ತಾರೆ. ಈ ನಿದ್ರೆಯ ಕೊರೆತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೆಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ನಿದ್ರೆಯ ಕೊರತೆಯಿಂದ ಮೆದುಳು ತನ್ನ ಕರ್ತವ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಿಂದ ಹೊಸ ಮಾಹಿತಿಯನ್ನು ಕೇಂದ್ರೀಕರಿಸಲು ನಮಗೆ ಕಷ್ಟಕರವಾಗಬಹುದು. ಜೊತೆಗೆ ಇದು ವಾಹನ ಚಲಾವಣೆ ಮಾಡುವುದರ ಮೇಲೂ ಪರಿಣಾಮವನ್ನು ಬೀರುತ್ತದೆ. ಇದು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ಘಾಡ್ಗೆ ಹೇಳುತ್ತಾರೆ.
ವಾಹನ ಚಲಾಯಿಸುವಾಗ ಅರೆನಿದ್ರಾವಸ್ಥೆಯನ್ನು ತಪ್ಪಿಸುವ ಮಾರ್ಗಗಳು
1. ವಾಹನದಲ್ಲಿ ಕುಳಿತಿರುವ ಇತರರ ಮಾತುಗಳನ್ನು ಆಲಿಸುತ್ತಿರಿ.
2. ವಾಹನ ಚಲಾಯಿಸುವಾಗ ಉಂಟಾಗುವ ದಣಿವಿನ ಚಿಹ್ನೆಗಳ ಬಗ್ಗೆ ತಿಳಿದಿರಿ.
3. ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ. ಕಿರುನಿದ್ರೆಯನ್ನು ಮಾಡಿ.
4. ನಿಮಗೆ ನಿದ್ರೆ ಬರುತ್ತಿದ್ದರೆ, ವಾಹನವನ್ನು ಇತರರಿಗೆ ಚಲಾಯಿಸಲು ನೀಡಿ.
5. ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ
6. ಚಹಾ ಅಥವಾ ಕಾಫಿಯನ್ನು ಸೇವಿಸುತ್ತಿರಿ
7.ನೀವು ತೆಗೆದುಕೊಳ್ಳಬೇಕಾದ ಔಷಧಿಗಳ ಬಗ್ಗೆ ಗಮನ ಕೊಡಿ.
Published On - 11:58 am, Sat, 8 April 23




