
ಗಂಡು ಹೆಣ್ಣು ಆಕರ್ಷಿತರಾಗುವುದು ಸಹಜ. ಒಂದೇ ಒಂದು ನೋಟದಲ್ಲಿಯೇ ಗಂಡು ಮಕ್ಕಳು ಪ್ರೀತಿ (Love) ಯಲ್ಲಿ ಬೀಳುತ್ತಾರೆ. ಕೆಲ ಪುರುಷರು ಮಹಿಳೆಯರ ಧ್ವನಿಗೆ ಆಕರ್ಷಿತರಾಗುತ್ತಾರೆ. ತಾನು ಮನಸಾರೆ ಪ್ರೀತಿಸುವ ಹುಡುಗಿ ಇಲ್ಲವಾದರೆ ಅಥವಾ ಕೈ ಕೊಟ್ಟರೆ ಜೀವನವೇ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ಈ ಕೆಲ ಪುರುಷರು ಮಹಿಳೆಯರಿಂದ ದೂರವಿರಲು ಆಚಾರ್ಯ ಚಾಣಕ್ಯ (Acharya Chanakya) ಸೂಚಿಸಿದ್ದಾರೆ. ಈ ಗುಣವಿರುವ ಪುರುಷರ ಬಾಳಲ್ಲಿ ಮಹಿಳೆಯರು ವಿಷವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.