AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?

ಕೆಲವೊಂದು ಜನ ಇತರರನ್ನು ಕುರುಡಾಗಿ ನಂಬುತ್ತಾರೆ, ಪ್ರತಿ ವಿಚಾರದಲ್ಲೂ ಅವರ ಮಾತನ್ನೇ ಚಾಚೂ ತಪ್ಪದೆ ಪಾಲಿಸುತ್ತಾರೆ. ಇದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸವಲ್ಲ, ಇದು ವ್ಯಕ್ತಿಯ ಜೀವನವನ್ನೇ ತಪ್ಪು ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ ಎಂದು ಆಚಾರ್ಯ ಚಾಣಕ್ಯರು ವಿವರಿಸಿದ್ದಾರೆ. ಹಾಗಿದ್ರೆ ಇತರರ ಮಾತು ಕೇಳುವುದರಿಂದ ಜೀವನದಲ್ಲಿ ಏನೆಲ್ಲಾ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 04, 2026 | 9:43 PM

Share

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮಂತಿಕೆ, ಸಂಬಂಧಗಳು ಮಾತ್ರವಲ್ಲ ನಮಗೆ ಸರಿಯಾದ ಮಾರ್ಗವನ್ನು ತೋರಿಸುವ ಅನೇಕ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಜೊತೆಗೆ ಇತರರನ್ನು ಕುರುಡಾಗಿ ನಂಬಿದಾಗ ಉಂಟಾಗುವ ಕೆಲವು ಅಪಾಯಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇತರರನ್ನು ಕುರುಡಾಗಿ ನಂಬುವ, ಸದಾ ಇತರರ ಮಾತನ್ನೇ ಕೇಳುವ ಅಭ್ಯಾಸ ಒಬ್ಬ ವ್ಯಕ್ತಿಗಿದ್ದರೆ, ಅವನು ವೇಗವಾಗಿ ವಿನಾಶದತ್ತ ಸಾಗುತ್ತದೆ ಎಂಬುದನ್ನು ಸಹ ಎಚ್ಚರಿಸಿದ್ದಾರೆ. ಹಾಗಿದ್ರೆ ಈ ಒಂದು ತಪ್ಪಿನಿಂದ ಜೀವನದಲ್ಲಿ ಏನೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

ಇತರರ ಮಾತನ್ನು ಕೇಳುವುದರಿಂದ ಜೀವನ ಹೇಗೆಲ್ಲಾ ಹಾಳಾಗುತ್ತದೆ ಗೊತ್ತಾ?

ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಇತರರನ್ನು ಕುರುಡಾಗಿ ನಂಬಿದಾಗ, ಆತ ಬೇಗನೆ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ, ಜನರು ತಮ್ಮ ಮಾತುಗಳ ಹಿಂದೆ ಸ್ವಾರ್ಥ, ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಮಾತುಗಳನ್ನು ನಂಬಿ ತಪ್ಪು ದಿಕ್ಕಿನಲ್ಲಿ ಮುಂದುವರಿದರೆ, ಅದರಿಂದ ನಿಮ್ಮ ಸಂಪೂರ್ಣ ಜೀವನವೇ ಹಾಳಾಗುತ್ತದೆ.

ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ: ಆಚಾರ್ಯ ಚಾಣಕ್ಯರು ಹೇಳುವಂತೆ, ಒಬ್ಬ ವ್ಯಕ್ತಿಯು ಇತರರ ಸಲಹೆಗೆ ಮಣಿದು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ, ಆತ ಸಣ್ಣ ಕೆಲಸಗಳಿಗೂ ಇತರರನ್ನು ಅವಲಂಬಿಸಲು ಪ್ರಾರಂಭಿಸುತ್ತಾನೆ. ಇದು ಆತನ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು   ದುರ್ಬಲಗೊಳಿಸುತ್ತದೆ.  ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುವುದು ತುಂಬಾನೇ ಮುಖ್ಯ.

ಇದನ್ನೂ ಓದಿ: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ

ಆತ್ಮವಿಶ್ವಾಸದ ನಷ್ಟ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಎಲ್ಲದಕ್ಕೂ ಇತರರನ್ನು ಅವಲಂಬಿಸಲು ಪ್ರಾರಂಭಿಸಿದಾಗ, ಇತರರ ಮಾತನ್ನೇ ಕೇಳಿ ಮುಂದೆ ಸಾಗಿದಾಗ ಆತನ ಆತ್ಮವಿಶ್ವಾಸವು ಬೇಗನೆ ಕುಸಿಯುತ್ತದೆ. ಒಂದು ನಿರ್ದಿಷ್ಟ ಹಂತದ ನಂತರ, ಆತ ತನ್ನಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ ಮತ್ತು ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇತರರ ಅಭಿಪ್ರಾಯಗಳನ್ನು ಮಾತ್ರ ಅವಲಂಬಿಸಲು ಪ್ರಾರಂಭಿಸುತ್ತಾನೆ. ಈ ಅಭ್ಯಾಸವು ಕೊನೆಗೆ ವ್ಯಕ್ತಿಯ ವ್ಯಕ್ತಿತ್ವವನ್ನೇ ದುರ್ಬಲಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!