Chanakya Niti : ಹುಡುಗನು ಹುಡುಗಿಯ ಮನಸ್ಸನ್ನು ಗೆಲ್ಲೋದು ಹೇಗೆ? ಚಾಣಕ್ಯನ ಈ ಸಲಹೆ ಪಾಲಿಸಿ

ಮೀನಿನ ಹೆಜ್ಜೆ, ನದಿಯ ಮೂಲ ಮತ್ತು ಹೆಣ್ಣಿನ ಮನಸ್ಸನ್ನು ತಿಳಿದುಕೊಳ್ಳುವುದು ತುಂಬಾ ಕಠಿಣ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹುಡುಗಿಯ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಅಷ್ಟೇ ಕಷ್ಟಕರ. ಆದರೆ ಆಚಾರ್ಯ ಚಾಣಕ್ಯನು ಹುಡುಗಿಯರ ಮನಸ್ಸನ್ನು ಗೆಲ್ಲೋದು ಹೇಗೆ ಎನ್ನುವ ಬಗ್ಗೆ ನೀತಿಯಲ್ಲಿ ಉಲ್ಲೇಖಿಸಿದ್ದಾನೆ. ಹಾಗಾದ್ರೆ ಚಾಣಕ್ಯ ನೀತಿಯಲ್ಲಿ ಹುಡುಗಿಯರ ವಿಷಯದಲ್ಲಿ ಹುಡುಗರಿಗೆ ನೀಡಿದ ಸಲಹೆಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಹುಡುಗನು ಹುಡುಗಿಯ ಮನಸ್ಸನ್ನು ಗೆಲ್ಲೋದು ಹೇಗೆ? ಚಾಣಕ್ಯನ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 07, 2024 | 5:25 PM

ಈಗಿನ ಕಾಲದಲ್ಲಿ ಯಾವ ಹುಡುಗಿಯೂ ಅಷ್ಟು ಸುಲಭವಾಗಿ ಹುಡುಗನ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಹುಡುಗರು ಮನಸ್ಸು ಗೆಲ್ಲಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ನಮ್ಗೆಲ್ಲಾ ಹುಡುಗಿಯರು ಬೀಳಲ್ಲ ಎಂದು ಸುಮ್ಮನಿದ್ದು ಬಿಡುತ್ತಾರೆ. ಆದರೆ ಈ ಹೆಣ್ಣಿನ ಮನಸ್ಸನ್ನು ಗಂಡು ಗೆಲ್ಲಬಹುದು ಎನ್ನುವುದಕ್ಕೆ ಚಾಣಕ್ಯನು ಕೆಲವು ಸಲಹೆಗಳನ್ನು ನೀಡಿದ್ದಾನೆ. ಚಾಣಕ್ಯನು ಹೇಳಿದ್ದಂತೆ ಮಾಡಿದರೆ ಯಾವುದೇ ಹುಡುಗಿ ನಿಮ್ಮ ಹಿಂದೆ ಬೀಳುವುದರಲ್ಲಿ ಅನುಮಾನವೇ ಇಲ್ಲ.

  • ಸದಾ ಹೊಗಳುತ್ತಿರಬೇಕು : ಹೊಗಳಿಕೆಗೆ ಯಾವ ಹೆಣ್ಣು ಮರುಳಾಗಲ್ಲ ಹೇಳಿ. ಹೆಣ್ಣು ತನ್ನನ್ನು ಎಲ್ಲರೂ ಹೊಗಳಲಿ ಎಂದು ಬಯಸುತ್ತಾಳೆ. ತನ್ನ ನಡೆ ನುಡಿ, ಮಾತು, ಕೆಲಸವನ್ನು ಹಾಡಿ ಹೊಗಳಿದರೆ ಆಕೆಯೂ ಆ ವ್ಯಕ್ತಿಯ ಮೇಲೆ ಒಳ್ಳೆಯ ಅಭಿಪ್ರಾಯವನ್ನು ಬೆಳೆಸಿಕೊಳ್ಳುತ್ತಾಳೆ. ಅದಲ್ಲದೇ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ಇಷ್ಟ ಪಡುವುದಿಲ್ಲ. ಒಳ್ಳೆಯ ಹೊಗಳಿಕೆ ಮಾತುಗಳಿಂದ ಹೆಣ್ಣಿನ ಮನಸ್ಸಿನಲ್ಲಿ ಜಾಗ ಪಡೆಯುವುದು ಸುಲಭ ಎನ್ನುತ್ತಾನೆ ಚಾಣಕ್ಯ.
  • ಸದಾ ನಗಿಸುತ್ತಿರಬೇಕು : ಸದಾ ನಗುತ್ತಾ ಸಂತೋಷವಾಗಿರಬೇಕು ಎನ್ನುವುದು ಎಲ್ಲರ ಆಸೆ. ಆದರೆ ನಗಿಸುವ ವ್ಯಕ್ತಿಗಳು ತನ್ನ ಸುತ್ತಮುತ್ತಲಿನಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಯಾವಾಗಲೂ ತಮಾಷೆ ಮಾಡುತ್ತಾ ನಗಿಸುವ ಗಂಡಸರ ಮೇಲೆ ಬೇಗನೇ ಆಕರ್ಷಿತಳಾಗುತ್ತಾಳೆ. ಪುರುಷರ ಮೊಗದಲ್ಲಿ ಸದಾ ನಗುವಿರಲಿ. ಗಂಭೀರ ಸ್ವಭಾವದ ಗಂಡಸರತ್ತ ಮಹಿಳೆಯರು ತಿರುಗಿ ಕೂಡ ನೋಡುವುದಿಲ್ಲ.
  • ಡ್ರೆಸ್ಸಿಂಗ್ ಸೆನ್ಸ್ ಇರಲಿ : ಒಬ್ಬ ವ್ಯಕ್ತಿಯನ್ನು ನೋಡಿದಾಗ ಮೊದಲು ಗಮನಿಸುವುದೇ ಉಡುಗೆ ತೊಡುಗೆಗಳನ್ನು. ಆದರೆ ಕೆಲವರು ಗಡ್ಡ ಬಿಟ್ಟುಕೊಂಡು, ತಲೆ ಬಾಚದೆ, ಉಡುಗೆ ತೊಡುಗೆಯೂ ಸ್ವಚ್ಛವಾಗಿರುವುದಿಲ್ಲ. ಹೀಗೆ ಇದ್ದರೆ ಯಾರೇ ಆಗಿರಲಿ ಅವರತ್ತ ತಿರುಗಿ ನೋಡುವುದಿಲ್ಲ. ನೀವು ಧರಿಸುವ ಬಟ್ಟೆಗಳು ದುಬಾರಿಯಾಗದೇ ಇದ್ದರೂ ಸ್ವಚ್ಛವಾಗಿರಬೇಕು, ಆಗ ಮಾತ್ರ ಹುಡುಗಿಯರು ನಿಮ್ಮ ಹಿಂದೆ ಬೀಳಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.
  • ಸಣ್ಣ ಪುಟ್ಟ ಉದ್ಯೋಗದಲ್ಲಿರಬೇಕು : ಅಪ್ಪ ಅಮ್ಮ ಎಷ್ಟೇ ಆಸ್ತಿ ಮಾಡಿದ್ದರೂ ಹುಡುಗನು ಏನು ಕೆಲಸ ಮಾಡ್ತಾ ಇದ್ದಾನೆ ಎಂದು ಹುಡುಗಿಯರು ಗಮನಿಸುತ್ತಾರೆ. ಸಣ್ಣದಾದರೂ ಕೈಯಲ್ಲಿ ಒಂದು ಉದ್ಯೋಗವಿದ್ದರೆ, ಜೀವನದಲ್ಲಿ ಏನೇ ಬಂದರೂ ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಸಾಮರ್ಥ್ಯ ಇವನಿಗೆ ಎಂದು ಆಕೆಗೆ ಅನಿಸುತ್ತದೆ. ಹೀಗಾಗಿ ಹುಡುಗಿಯ ಮನಸ್ಸನ್ನು ಗೆಲ್ಲಬೇಕಾದರೆ ದುಡಿಮೆಯಿರಲೇಬೇಕು.
  • ಉತ್ತಮ ಕೇಳುಗನಾಗಿರಬೇಕು : ಪ್ರತಿಯೊಬ್ಬ ಹೆಣ್ಣು ಬಯಸೋದು ತನ್ನನ್ನು ಪ್ರೀತಿಸುವ ಹಾಗೂ ಇಷ್ಟ ಪಡುವ ಹುಡುಗನು ತನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ತನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹ ಗುಣವಿರುವ ಹುಡುಗನನ್ನು ಬೇಗನೇ ಹುಡುಗಿಯೂ ಮೆಚ್ಚಿಕೊಳ್ಳುತ್ತಾಳೆ. ಏನೇ ಹೇಳಿದರೂ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿರುವ ಪುರುಷನನ್ನು ಇಷ್ಟ ಪಡಲ್ಲ. ಉತ್ತಮ ಕೇಳುಗನಾಗಿದ್ದರೆ ಮಾತ್ರ ಹುಡುಗಿಗೆ ಇಷ್ಟವಾಗಲು ಸಾಧ್ಯ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಉಲ್ಲೇಖಿಸಿದ್ದಾನೆ.
  • ಹುಡುಗಿಯ ಕುಟುಂಬ ಮೇಲೆ ಒಳ್ಳೆಯ ಭಾವನೆ : ಒಬ್ಬ ಹುಡುಗಿ ತನ್ನನ್ನು ಮಾತ್ರ ತನ್ನ ಕುಟುಂಬವನ್ನು ಹುಡುಗನು ಇಷ್ಟಪಡಬೇಕೆಂದು ಬಯಸುತ್ತಾಳೆ. ತನ್ನ ಮನೆಯವರನ್ನು ಆತನ ಮನೆಯವರಂತೆ ಕಾಳಜಿ ಮಾಡುವ ಹುಡುಗನೆಂದರೆ ಹುಡುಗಿಗೆ ಇಷ್ಟ. ಯಾವ ಹುಡುಗಿಯ ಮುಂದೆ ತನ್ನ ಅಪ್ಪ ಅಥವಾ ಅಮ್ಮನನ್ನು ತನ್ನ ಗೆಳೆಯ ಟೀಕಿಸುವುದನ್ನು ಇಷ್ಟ ಪಡುವುದಿಲ್ಲ. ಆಕೆಯ ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಕೆಟ್ಟ ಭಾವನೆಯಿದ್ದರೆ ಅದನ್ನು ತೋರಿಸಿಕೊಳ್ಳದೇ ಇರುವುದು ಉತ್ತಮ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ಶಿವಕುಮಾರ್​ರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ವಿಫಲನಾದ ಪಕ್ಷದ ಮುಖಂಡ!
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ತುಮಕೂರಲ್ಲಿ ಅಮಾನವೀಯ ಘಟನೆ: ಬರಿಗೈಲಿ ಮಲ ಬಾಚುವ ಪದ್ಧತಿ ಜೀವಂತ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಪುಟ್ಟರಾಜು ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ಎಲ್ಲ ಗೊತ್ತಾಗುತ್ತದೆ: ಬಾಲಕೃಷ್ಣ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಜಿಲ್ಲಾಧಿಕಾರಿ ಮುಡಾ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಸಭೆ ಇದು: ಜಿಟಿಡಿ
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ