Chanakya Niti: ಈ ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ

ಪ್ರೀತಿ, ನಂಬಿಕೆ ಪ್ರತಿಯೊಂದು ವಿಚಾರದಲ್ಲೂ ಕೆಲವೊಂದಿಷ್ಟು ಜನರು ಬಹು ಬೇಗನೆ ಮೋಸ ಹೋಗುತ್ತಾರೆ. ಈ ಕೆಲವು ಗುಣಗಳ ಕಾರಣದಿಂದಲೇ ಕೆಲವು ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಯಾವ ರೀತಿಯ ಜನರು ಸುಲಭವಾಗಿ ಮೋಸ ಹೋಗ್ತಾರೆ, ನಿಮ್ಮಲ್ಲೂ ಆ ಗುಣಗಳಿವೆಯೇ ಎಂಬುದನ್ನು ಪರೀಕ್ಷಿಸಿ.

Chanakya Niti: ಈ ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 23, 2026 | 8:53 PM

ಮುಖ್ಯಾಂಶಗಳು

  • ಕೆಲವು ಜನರು ಸುಲಭವಾಗಿ ಮೋಸ ಹೋಗುತ್ತಾರೆ ಎಂದಿದ್ದಾರೆ ಚಾಣಕ್ಯ
  • ಚಾಣಕ್ಯರ ಪ್ರಕಾರ ಮುಗ್ಧ ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚು
  • ಎಲ್ಲರನ್ನೂ ಕುರುಡಾಗಿ ನಂಬುವ ಜನರ ಮೋಸಗಾರರ ಬಲೆಗೆ ಬೇಗನೆ ಬೀಳುತ್ತಾರೆ

ಪ್ರಪಂಚದಲ್ಲಿ ಮೋಸ (cheat) ಹೋಗುವವರು  ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂದು ಹೇಳುವ ಮಾತನ್ನು ನೀವು ಕೇಳಿರಬಹುದಲ್ವಾ. ಆದರೆ ಎಂತಹ ಜನರು ಸುಲಭವಾಗಿ ಮೋಸ ಹೋಗ್ತಾರೆ ಗೊತ್ತಾ? ಈ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದು, ಕೆಲವೊಂದು ಗುಣ, ಅಭ್ಯಾಸಗಳನ್ನು ಹೊಂದಿರುವ ಜನರು ಕುತಂತ್ರ ಮತ್ತು ಸ್ವಾರ್ಥಿ ಜನರ ದುರಾಸೆಗೆ ಸುಲಭವಾಗಿ ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ. ನಿಮ್ಮಲ್ಲೂ ಆ ಗುಣಗಳಿದ್ದರೆ ಅದನ್ನು ತಕ್ಷಣವೇ ಬದಲಾಯಿಸಿ, ಬುದ್ಧಿವಂತಿಕೆಯಿಂದ ಮೋಸ ಹೋಗುವುದನ್ನು ತಪ್ಪಿಸಿ.

ಈ ರೀತಿಯ ಜನರು ಮೋಸ ಹೋಗುವ ಸಾಧ್ಯತೆ ಹೆಚ್ಚು:

ಮುಗ್ಧ ಜನರು: ಮುಗ್ಧ ಮನಸ್ಸಿನವರನ್ನು ಮೋಸ ಗೊಳಿಸುವುದು ತುಂಬಾನೇ ಸುಲಭ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯ. ಕುತಂತ್ರಿಗಳು ಯಾವಾಗಲೂ ಮುಗ್ಧ ಜನರನ್ನು ಟಾರ್ಗೆಟ್‌ ಮಾಡಿ ಅವರ ನಂಬಿಕೆಯನ್ನು ಗಳಿಸಿ ಕೊನೆಗೆ ಅವರ ಬೆನ್ನಿಗೆ ಚೂರಿ ಹಾಕುತ್ತಾರೆ. ಮುಗ್ಧ ಜನರು ತಮ್ಮಂತೆಯೇ ಎಲ್ಲರೂ ಪ್ರಾಮಾಣಿಕರು ಎಂದು ಭಾವಿಸಿ ಎಲ್ಲರನ್ನೂ ನಂಬುತ್ತಾರೆ. ಹಾಗಾಗಿ ಸುಲಭವಾಗಿ ಮೋಸ ಹೋಗ್ತಾರೆ. ಆದ್ದರಿಂದ ಒಳ್ಳೆಯವರಾಗಿರುವುದು ಒಳ್ಳೆಯದು, ಆದರೆ ಅತಿಯಾದ ಒಳ್ಳೆಯತನ ತೋರುವುದು ತರವಲ್ಲ ಎಂದಿದ್ದಾರೆ ಚಾಣಕ್ಯ.

ಎಲ್ಲರನ್ನೂ ಕುರುಡಾಗಿ ನಂಬುವ ಜನರು: ನೀವು ಕೂಡ ಹಿಂದೂಮುಂದು ನೋಡದೆ ಎಲ್ಲರನ್ನೂ ಕುರುಡಾಗಿ ನಂಬುತ್ತೀರಾ? ಹಾಗಿದ್ರೆ ನೀವು ಬೇಗನೇ ಮೋಸ ಹೋಗ್ತೀರಿ. ಆಚಾರ್ಯ ಚಾಣಕ್ಯರ ಪ್ರಕಾರ ಜನರ ಸಿಹಿ ಮಾತುಗಳನ್ನು ಕೇಳಿ ಅವರನ್ನು ಕುರುಡಾಗಿ ನಂಬುತ್ತಾರೋ, ಅವರನ್ನು ಸುಲಭವಾಗಿ ಮೋಸಗೊಳಿಸಬಹುದು. ಆದ್ದರಿಂದ ಯಾರನ್ನೂ ನಂಬಲು ಹೋಗಬೇಡಿ. ಅತಿಯಾದ ನಂಬಿಕೆಯೂ ಒಳ್ಳೆಯದಲ್ಲ, ಇದರಿಂದ ಕೊನೆಗೆ ನೀವು ನೋವು ಅನುಭವಿಸಬೇಕಾಗುತ್ತದೆ.

ಭಾವನಾತ್ಮಕವಾಗಿ ವರ್ತಿಸುವ ಜನ: ಬುದ್ಧಿವಂತಿಕೆಯಿಂದ ಯೋಚಿಸದೆ ಭಾವನಾತ್ಮಕವಾಗಿ ವರ್ತಿಸುವ ಜನರು ಬಹುಬೇಗನೇ ಮೋಸ ಹೋಗ್ತಾರೆ. ಮೋಸಗಾಗರು ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ಇಂತಹ ಜನರನ್ನು ಸುಲಭವಾಗಿ ಮೋಸಗೊಳಿಸುತ್ತಾರೆ. ಹಾಗಾಗಿ ಪ್ರತಿಯೊಂದು ಸಂದರ್ಭದಲ್ಲೂ ಭಾವನಾತ್ಮಕ ಜೀವಿಯಾಗಿರುವುದು ಒಳ್ಳೆಯದಲ್ಲ, ಪ್ರಾಕ್ಟಿಕಲ್‌ ಅಗಿ ಯೋಚಿಸಿ ಬುದ್ಧಿವಂತಿಕೆಯಿಂದ ವರ್ತಿಸಬೇಕು ಆಗ ಮಾತ್ರ ಮೋಸ ಹೋಗುವದನ್ನು ತಪ್ಪಿಸಬಹುದು ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಹೊಸದಾಗಿ ಬಿಸಿನೆಸ್‌ ಆರಂಭಿಸುವ ಪ್ರತಿಯೊಬ್ಬರೂ ಚಾಣಕ್ಯರ ಸಲಹೆಗಳನ್ನು ಪಾಲಿಸಲೇಬೇಕು

ಸುಳ್ಳು ಹೊಗಳಿಕೆಗೆ ಸಂತೋಷಪಡುವ ಜನರು: ಮೋಸಗಾರರು ಹಾಗೂ ಕುತಂತ್ರಿಗಳು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ. ಅವರು ತಮ್ಮ ಕಪಟ ಮಾತುಗಳಿಂದ ಹೊಗಳಿದಾಗ, ಈ ಸುಳ್ಳು ಹೊಗಳಿಕೆಯ ಮಾತನ್ನು ಕೇಳಿ ಸಂತೋಷಪಡುತ್ತಾರೋ ಅವರು ಬೇಗನೇ ಮೋಸಗಾರರ ಬಲೆಗೆ ಬೀಳುತ್ತಾರೆ ಎನ್ನುತ್ತಾರೆ ಚಾಣಕ್ಯ.

ಇತರರನ್ನು ಅವಲಂಬಿಸಿರುವ ಜನರು: ಕೆಲವು ಜನರ ಎಲ್ಲದಕ್ಕೂ ಇತರರನ್ನು ಅವಲಂಬಿಸಿರುತ್ತಾರೆ. ಇಂತಹ  ಜನರು ಬೇಗನೇ ಮೋಸ ಹೋಗುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ನೀವು ನಿಮ್ಮ ಜೀವನದ ನಿಯಂತ್ರಣವನ್ನು ಬೇರೆಯವರ ಕೈಯಲ್ಲಿ ಇಟ್ಟಾಗ, ಆ ವ್ಯಕ್ತಿಯು  ಸ್ವಂತ ಲಾಭಕ್ಕಾಗಿ ನಿಮ್ಮನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಆ ವ್ಯಕ್ತಿಯನ್ನು ಕುಡುಡಾಗಿ ನಂಬಿ ನೂವು ಮೋಸ ಹೋಗ್ತೀರಿ. ಆದ್ದರಿಂದ ಯಾರ ಮೇಲೂ ಅವಲಂಬಿತರಾಗಬೇಡಿ, ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ, ನಿಮಗಾಗಿ ನೀವು ಬುದ್ಧಿವಂತಿಕೆಯಿಂದ ಯೋಚಿಸುವುದನ್ನು ಕಲಿಯಿರಿ. ಮುಖ್ಯವಾಗಿ ನೀವು ನಿಮಗಾಗಿ ಬದುಕುವುದನ್ನು ಕಲಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us