Chanakya Niti: ತಪ್ಪಿಯೂ ಈ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ

ಇತರರಿಗೆ ಸಹಾಯ ಮಾಡುವುದು ಧರ್ಮ. ಆದರೆ ಎಲ್ಲರಿಗೂ ಸಹಾಯ ಮಾಡುವುದು ಸರಿಯೇ ಎಂಬ ಪ್ರಶ್ನೆ ಬಂದಾಗ ಈ ಕೆಲವು ಜನರಿಗೆ ಜಪ್ಪಯ್ಯ ಅಂದ್ರೂ ಸಹಾಯ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಅಂತಹ ಜನರಿಗೆ ಸಹಾಯ ಮಾಡಿದ್ರೆ, ಅದರಿಂದ ನಮಗೆಯೇ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಎಂತಹ ಜನರಿಗೆ ಸಹಾಯ ಮಾಡುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ ಬನ್ನಿ.

Chanakya Niti: ತಪ್ಪಿಯೂ ಈ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jun 27, 2026 | 7:24 PM

ಕಷ್ಟಕಾಲದಲ್ಲಿ ಒಬ್ಬರಿಗೆ ಸಹಾಯ (help) ಮಾಡುವುದು ತುಂಬಾನೇ ಒಳ್ಳೆಯ ಕೆಲಸ. ಇದು ಮಾನವೀಯತೆ ಕೂಡಾ ಹೌದು. ಹಾಗಾಗಿ ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಿರುತ್ತಾರೆ. ಸಹಾಯ ಮಾಡ್ಬೇಕು ನಿಜ, ಆದ್ರೆ ಕುರುಡಾಗಿ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ. ಈ ಕೆಲವೊಂದಿಷ್ಟು ಜನರಿಗೆ ಉಪಕಾರ ಮಾಡಿದರೆ, ಅದರಿಂದ ನಮಗೆಯೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತಪ್ಪಿಯೂ ಈ ರೀತಿಯ ಜನರಿಗೆ ಉಪಕಾರ ಮಾಡಬಾರದು ಎಂದಿದ್ದಾರೆ. ಎಂತಹ ಜನಗಳಿಗೆ ಉಪಕಾರ ಮಾಡುವುದು ಸರಿಯಲ್ಲ ಎಂಬುದನ್ನು ನೋಡೋಣ ಬನ್ನಿ.

ಇಂತಹ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ:

ದುಷ್ಟ ಅಥವಾ ಕೆಟ್ಟ ಸ್ವಭಾವದ ಜನರು: ದುಷ್ಟನಾಗಿರುವ ಅಥವಾ ಕೆಟ್ಟ ಸ್ವಭಾವದ ವ್ಯಕ್ತಿಗೆ ಎಂದಿಗೂ ಸಹಾಯ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ದುಷ್ಟ ವ್ಯಕ್ತಿ ಹಾವು ಇದ್ದಂತೆ, ನೀವು ಹಾವಿಗೆ ಎಷ್ಟೇ ಹಾಲು ಕುಡಿಸಿದರೂ ಅದು ತನ್ನ ವಿಷವನ್ನು ಉಗುಳುವುದನ್ನು ನಿಲ್ಲಿಸುವುದಿಲ್ಲ. ಅದೇ ರೀತಿ, ನೀವು ದುಷ್ಟ ವ್ಯಕ್ತಿಗೆ ಎಷ್ಟೇ ಸಹಾಯ ಮಾಡಿದರೂ, ಆತನಿಂದ ನಿಮಗೆ ಎಂದಿಗೂ ಒಳ್ಳೆಯದಾಗುವುದಿಲ್ಲ, ಆತ ನಿಮಗೆ ಒಳ್ಳೆಯದನ್ನು ಬಯಸುವುದು ಸಹ ಇಲ್ಲ. ಆದ್ದರಿಂದ ಕೆಟ್ಟ ಸ್ವಭಾವದ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ.

ಯಾವಾಗಲೂ ದುಃಖದಿಂದ ಮತ್ತು ಅಳುತ್ತಾ ಇರುವ ಜನರು: ಕೆಲವು ಜನರಿಗೆ ಎಲ್ಲವೂ ಇದ್ದರೂ ನಿರಂತರವಾಗಿ ಅಳುವ ಅಭ್ಯಾಸವಿರುತ್ತದೆ. ಅವರು ತಮ್ಮ ಜೀವನದಲ್ಲಿನ ನ್ಯೂನತೆಗಳನ್ನು ಮಾತ್ರ ನೋಡುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಅಂತಹ ಜನರಿಗೆ ಸಹಾಯ ಮಾಡುವುದರಿಂದ ಅಥವಾ ಅವರೊಂದಿಗೆ ಇರುವುದರಿಂದ ಅವರ ನಕಾರಾತ್ಮಕ ಶಕ್ತಿ ನಿಮಗೂ ಆವರಿಸುತ್ತದೆ. ಅಂತಹ ಜನರು ಯಾವಾಗಲೂ ಇತರರ ಸಂತೋಷವನ್ನು ನೋಡಿ ಅಸೂಯೆಪಡುತ್ತಾರೆ. ನೀವು ಅವರಿಗೆ ಸಹಾಯ ಮಾಡಿದರೆ, ಅವರು ತಮ್ಮ ನ್ಯೂನತೆಗಳಿಗೆ ನಿಮ್ಮನ್ನು ದೂಷಿಸುತ್ತಾರೆ. ಆದ್ದರಿಂದ, ಅವರಿಂದ ದೂರವಿರುವುದು ಉತ್ತಮ.

ಮೂರ್ಖ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಅಜ್ಞಾನಿ ಮತ್ತು ತಮ್ಮದೇ ಮೂರ್ಖತನ ಸರಿ ಎಂದು ನಂಬುವ ಯಾರಿಗೂ ಸಹಾಯ ಮಾಡಬಾರದು, ಜೊತೆಗೆ ಅವರೊಂದಿಗೆ ತರ್ಕವನ್ನೂ ಮಾಡಬಾರದು. ಅಂತಹ ಮೂರ್ಖನಿಗೆ ಸತ್ಯವನ್ನು ಹೇಳುವುದರಿಂದ ಅವರು ನಿಮ್ಮ ಶತ್ರುಗಳಾಗಿ ಬದಲಾಗುತ್ತಾರೆ. ಅವರು ನಿಮ್ಮ ಒಳ್ಳೆಯತನವನ್ನು ಅವರ ವಿರುದ್ಧದ ಪಿತೂರಿ ಎಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಬಯಸುವವರು ಗೋಲ್ಡನ್‌ ರೂಲ್ಸ್‌ಗಳನ್ನು ತಪ್ಪದೇ ಪಾಲಿಸಿ

ಕೆಟ್ಟ ಚಟಕ್ಕೆ ದಾಸರಾಗಿರುವವರಿ: ಸಾಮಾಜಿಕ ನಿಯಮಗಳನ್ನು ಪಾಲಿಸದವರಿಗೆ ಕಳ್ಳತನ, ಜೂಜಾಟ ಅಥವಾ ಮಾದಕ ದ್ರವ್ಯ ಸೇವನೆಯಂತಹ ಕೆಟ್ಟ ಚಟಗಳಿಗೆ ದಾಸರಾಗಿರುವವರಿಗೆ ಸಹಾಯ ಮಾಡಬಾರದು. ಅಂತಹ ಜನರಿಗೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಎಂದರೆ ನೀವು ಅವರ ತಪ್ಪು ಕೃತ್ಯಗಳನ್ನು ಬೆಂಬಲಿಸುತ್ತಿದ್ದೀರಿ ಎಂದರ್ಥ. ಇದು ನಿಮ್ಮ ಘನತೆಯನ್ನು ಹಾಳು ಮಾಡುತ್ತದೆ.

ಸೋಮಾರಿಯಾಗಿರುವವನು: ಆಚಾರ್ಯ ಚಾಣಕ್ಯರ ಪ್ರಕಾರ, ಕಷ್ಟಪಟ್ಟು ಕೆಲಸ ಮಾಡಲು ಇಷ್ಟವಿಲ್ಲದ ಮತ್ತು ತಮ್ಮ ಕೆಲಸವನ್ನು ಮಾಡಲು ಇತರರನ್ನು ಅವಲಂಬಿಸಿರುವ ಸೋಮಾರಿಗಳಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅಂತಹ ಜನರು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುತ್ತಾರೆ ಮತ್ತು ತಮ್ಮ ಸ್ವಂತ ಪರಿಸ್ಥಿತಿಯನ್ನು ಸುಧಾರಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ. ಸೋಮಾರಿಯಾದ ವ್ಯಕ್ತಿಗೆ ಸಹಾಯ ಮಾಡುವುದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಕೃತಘ್ನನಿಲ್ಲದ ಅಥವಾ ಸ್ವಾರ್ಥಿ ವ್ಯಕ್ತಿ: ಚಾಣಕ್ಯ ನೀತಿಯ ಪ್ರಕಾರ, ನೀವು ಪದೇ ಪದೇ ಸಹಾಯ ಮಾಡಿದರೂ ಗೌರವ ತೋರಿಸದ ಮತ್ತು ನಿಮ್ಮ ಸಹಾಯವನ್ನು ನಿರ್ಲಕ್ಷಿಸುವ ವ್ಯಕ್ತಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅಂತಹ ಜನರು ಬರೀ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನೀವು ಅಂತಹ ಸ್ವಾರ್ಥಿ ಜನರಿಗೆ ಮತ್ತೆಂದೂ ಸಹಾಯ ಮಾಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us