ಚಾಕೋಲೆಟ್ ಡೇ 2022: ಪ್ರೀತಿಯ ಸಿಹಿ ನೀಡುವ ಚಾಕೋಲೆಟ್​​ ಆರೋಗ್ಯಕ್ಕೂ ಒಳಿತು

ಈ ಚಾಕೋಲೇಟ್​ ದಿನ ಚಾಕೋಲೆಟ್ಅನ್ನು ತಿನ್ನುತ್ತೀರಿ ಆದರೆ ಅದಕ್ಕೂ ಮುಂಚೆ ಅದರ ಮಹತ್ವವನ್ನು ನೀವು ತಿಳಿದುಕೊಳ್ಳಲೇಬೇಕು. ಇಲ್ಲಿದೆ ನೋಡಿ ಚಾಕೋಲೆಟ್​ ಮಹತ್ವ

ಚಾಕೋಲೆಟ್ ಡೇ 2022: ಪ್ರೀತಿಯ ಸಿಹಿ ನೀಡುವ ಚಾಕೋಲೆಟ್​​ ಆರೋಗ್ಯಕ್ಕೂ ಒಳಿತು
ಚಾಕೋಲೇಟ್​
Follow us
TV9 Web
| Updated By: Pavitra Bhat Jigalemane

Updated on:Feb 09, 2022 | 10:39 AM

ಇಂದು ಪ್ರೇಮಿಗಳ ವಾರದ (Valentine’s Week) ಮೂರನೇ ದಿನ ಚಾಕೋಲೆಟ್​ ಡೇ (Chocolate Day). ಪ್ರೇಮಿಗೆ ಚಾಕೋಲೇಟ್​ ನೀಡಿ ಬದುಕು ಮತ್ತಷ್ಟು ಸಿಹಿಯಾಗಲಿ ಎಂದು ಆಶಿಸುವ ದಿನ. ಚಾಕೋಲೇಟ್​ ಕೇವಲ ಪ್ರೀತಿಯನ್ನು ಮಾತ್ರ ಹಂಚುವುದಿಲ್ಲ. ಆರೋಗ್ಯವನ್ನೂ ಉತ್ತಮಪಡಿಸುತ್ತದೆ.  ಒತ್ತಡ, ಆಯಾಸವನ್ನು ಕಡಿಮೆ ಮಾಡಿ ಒಂದಷ್ಟು ಆಹ್ಲಾದತೆಯನ್ನು ನೀಡುತ್ತದೆ. ಪ್ರತೀ ಪ್ರೇಮಿಗೆ ತಾನು ಪ್ರೀತಿಸುವ ವ್ಯಕ್ತಿ ನೀಡುವ ಚಾಕೋಲೆಟ್ ವಿಶೇಷವಾಗಿರುತ್ತದೆ. ಅದು ವೈಟ್​ ಚಾಕೋಲೇಟ್​ ಆಗಿರಲಿ ಅಥವಾ  ಡಾರ್ಕ್​ ಚಾಕೋಲೆಟ್​ ಆಗಿರಲಿ. ಪ್ರೀತಿಯಿಂದ ನೀಡುವ ಒಂದು ಚಾಕೋಲೆಟ್​ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿ, ಸಿಹಿಯಾಗಿಸುತ್ತದೆ. ಈ ಚಾಕೋಲೇಟ್​ ದಿನ ಚಾಕೋಲೆಟ್​ ಅನ್ನು ತಿನ್ನುತ್ತೀರಿ ಆದರೆ ಅದಕ್ಕೂ ಮುಂಚೆ ಅದರ ಮಹತ್ವವನ್ನು ನೀವು ತಿಳಿದುಕೊಳ್ಳಲೇಬೇಕು. ಇಲ್ಲಿದೆ ನೋಡಿ ಚಾಕೋಲೆಟ್ ಮಹತ್ವ:

ಡಾರ್ಕ್​ ಚಾಕೋಲೆಟ್: ಡಾರ್ಕ್​ ಚಾಕೋಲೆಟ್ಅನ್ನು ಅತಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಡಾರ್ಕ್​ ಚಾಕೋಲೆಟ್​ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ಜತೆಗೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಸಮೃದ್ಧವಾದ ಫೈಬರ್​, ಕಬ್ಬಿಣಾಂಶ​, ಮ್ಯಾಗ್ನಿಶಿಯಂ, ಕಾಪರ್​ ಜತಗೆ ಮ್ಯಾಂಗ್ನನೀಸ್ ಅಂಶಗಳೂ ಕೂಡ ಅಡಕವಾಗಿದೆ. ಈ ಕುರಿತು ಡೈಯಟೀಶಿಯನ್​ ಡಿಟಿ ಅಹ್ಲಾವತ್  ಎನ್ನುವವರು ಮಾಹಿತಿ ನೀಡಿದ್ದಾರೆ. ಡಾರ್ಕ್​ ಚಾಕೋಲೆಟ್ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗಿ, ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ.  ಡಾರ್ಕ್​ ಚಾಕೋಲೆಟ್​ನಲ್ಲಿರುವ ಪಾಲಿಫಿನಾಲ್ಗಳು ಚರ್ಮದ ಕಾಂತಿಯನ್ನೂ ಕೂಡ ಕಾಪಾಡುತ್ತದೆ. ದೇಹದಲ್ಲಿ ಇನ್ಸುಲಿನ್​ ಪ್ರಮಾಣವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ 100 ಗ್ರಾಂ ಡಾರ್ಕ್ ​ಚಾಕೋಲೆಟ್ 500 ಗ್ರಾಂನಷ್ಟು ಕ್ಯಾಲೋರಿಯನ್ನು ನೀಡುತ್ತದೆ. ಹೀಗಾಗಿ ಪ್ರತಿದಿನ 30ರಿಂದ 50 ಗ್ರಾಂನಷ್ಟು ಮಾತ್ರ ಡಾರ್ಕ್​ಚಾಕೋಲೆಟ್​ ಸೇವನೆ ಮಾಡಿ ಎಂದು ಸಲಹೆ ನೀಡುತ್ತಾರೆ.

ವೈಟ್  ಚಾಕೋಲೆಟ್​: ವೈಟ್ ಚಾಕೋಲೆಟ್ ಗುಣಗಳ ಬಗ್ಗೆ ವಿವರಿಸುವ  ಅಹ್ಲಾವತ್ ಅವರು ಇದು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ವೈಟ್​ ಚಾಕೋಲೆಟ್​ ನಲ್ಲಿರುವ ಪಾಲಿಫಿನಾಲ್​ ಅಂಶಗಳು ಹೃದಯಕ್ಕೆ ಸಂಬಂಧಿಸಿದ ಅಪಾಯವನ್ನು ತಡೆಯುತ್ತದೆ ಎಂದಿದ್ದಾರೆ.  ವೈಟ್​​ ಚಾಕೋಲೆಟ್ ದೇಹದಲ್ಲಿ ರಕ್ತ ಸಂಚಾರವನ್ನು ಸರಾಗಗೊಳಿಸಿ ಲಿವರ್​ನ ಆರೋಗ್ಯವನ್ನು ಕಾಪಾಡುತ್ತದೆ. ಜತೆಗೆ ವೈಟ್​ ಚಾಕೋಲೆಟ್​ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಿರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಎಂದಿದ್ದಾರೆ.

ತಜ್ಞರ ಪ್ರಕಾರ 100 ಗ್ರಾಂ ವೈಟ್​ ಚಾಕೋಲೆಟ್ ಸುಮಾರು 560 ಗ್ರಾಂನಷ್ಟು ಕ್ಯಾಲೋರಿಯನ್ನು ಪೂರೈಸುತ್ತದೆ. ಹೀಗಾಗಿ ಪ್ರತಿದಿನ 25 ರಿಂದ 20 ಗ್ರಾಂನಷ್ಟು ವೈಟ್​ ಚಾಕೋಲೆಟ್​ ಸೇವನೆ ಉತ್ತಮ ಎನ್ನುತ್ತಾರೆ.

ಇದನ್ನೂ ಓದಿ:

Chocolate Day Gift Ideas: ಚಾಕಲೇಟ್ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ

Published On - 10:39 am, Wed, 9 February 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ