Dengue: ಕಿವಿ ಹಣ್ಣು ತಿನ್ನುವುದರಿಂದ ನಿಜವಾಗಿಯೂ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆಯೇ? ಇಲ್ಲಿದೆ ಮಾಹಿತಿ

ಈಡಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂಗಿ ರೋಗ ಹರಡುತ್ತದೆ. ಡೆಂಗಿ ಜ್ವರದಿಂದ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತದೆ. ಇದು ಕೆಲವೊಮ್ಮೆ ಮಾರಕವಾಗಿ ಪರಿಣಮಿಸಬಹುದು. ಹಾಗಾಗಿ ಈ ಜ್ವರ ಭಾದಿಸಿದ ಸಂದರ್ಭದಲ್ಲಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಕಿವಿ ಹಣ್ಣನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ನಿಜವಾಗಿಯೂ ಕಿವಿ ತಿನ್ನುವುದರಿಂದ ಡೆಂಗಿ ಜ್ವರ ಕಡಿಮೆ ಆಗುತ್ತದೆಯೇ ಎಂಬುದನ್ನು ತಿಳಿಯೋಣ.

Dengue: ಕಿವಿ ಹಣ್ಣು ತಿನ್ನುವುದರಿಂದ ನಿಜವಾಗಿಯೂ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆಯೇ? ಇಲ್ಲಿದೆ ಮಾಹಿತಿ
Kiwi FruitImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 21, 2023 | 6:49 PM

ಈಡಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಹರಡುತ್ತದೆ. ಡೆಂಗಿ ಜ್ವರ ಭಾದಿಸಿದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ತೀವ್ರ ಜ್ವರ ಮತ್ತ ಚರ್ಮದ ದದ್ದುಗಳು, ಕೀಲು ನೋವುಗಳು, ದೇಹದಲ್ಲಿ ವಿಪರೀತ ನೋವುಗಳು ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ದೇಹವನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ ಪ್ಲೇಟ್ಲೆಟ್ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಜ್ವರವು ಅಪಾಯಕಾರಿಯಾಗಿದ್ದು, ಅದು 6 ರಿಂದ 7 ದಿನಗಳಲ್ಲಿ ನಿಮ್ಮನ್ನು ತುಂಬಾ ದುರ್ಬಲಗೊಳಿಸುತ್ತದೆ. ಪ್ರಸ್ತುತ ಡೆಂಗ್ಯೂಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಅದರ ಲಕ್ಷಣಗಳನ್ನು ಪರಿಗಣಿಸಿ, ವೈದ್ಯರು ಔಷಧಿಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಾರೆ ಮತ್ತು ಸಾಧ್ಯವಾದಷ್ಟು ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್ ಅಂಶವಿರುವ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ.

ಕಿವಿ ಹಣ್ಣು ತಿನ್ನುವುದರಿಂದ ಡೆಂಗ್ಯೂ ಜ್ವರ ಕಡಿಮೆಯಾಗುತ್ತದೆಯೇ?

ವಿವಿಧ ಅಧ್ಯಯನಗಳ ಪ್ರಕಾರ ಕಿವಿ ಹಣ್ಣು ಡೆಂಗ್ಯೂ ಜ್ವರದ ಮೇಲೆ ಬಲವಾದ ಚಿಕಿತ್ಸಕ ಪರಿಣಾಮವನ್ನು ಹೊಂದಿದೆ. ಇದು ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಗೆ ಮತ್ತು ಸೋಂಕಿನ ವಿರುದ್ಧ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗೂ ಈ ಹಣ್ಣು ಪೊಟ್ಯಾಸಿಯಂ, ವಿಟಮಿನ್ ಇ ಮತ್ತು ವಿಟಮಿನ್ ಎ ಯ ಸಮೃದ್ಧ ಮೂಲವಾಗಿದ್ದು, ಇದು ದೇಹದ ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕಿವಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಇದು ರೋಗನಿರೋಧಕಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಕಿವಿ ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

ಡೆಂಗ್ಯೂ ಸಮಯದಲ್ಲಿ ಕಿವಿ ಹಣ್ಣನ್ನು ತಿನ್ನಲು ಏಕೆ ಸಲಹೆ ನೀಡಲಾಗುತ್ತದೆ?

ಕಿವಿ ಒಂದು ಅದ್ಭುತ ಹಣ್ಣಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಜೀವಸತ್ವವಿದೆ. ಹಾಗೂ ಇದು ಸಾಕಷ್ಟು ಪ್ರಮಾಣದ ಫೈಬರ್ ಅಂಶವನ್ನು ಒಳಗೊಂಡಿದೆ. ಅಲ್ಲದೆ ನಮ್ಮ ದೇಹದ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳು ಕಿವಿ ಹಣ್ಣಿನಲ್ಲಿ ಕಂಡುಬರುತ್ತದೆ. ಪೈಟೊಕೆಮಿಕಲ್ ಗುಣಲಕ್ಷಣಗಳು ಕೂಡ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಹಾಗಾಗಿ ಈ ಹಣ್ಣನ್ನು ಸೇವಿಸುವುದರಿಂದ ಪ್ಲೇಟ್ಲೆಟ್ಗಳು ಹೆಚ್ಚುತ್ತವೆ ಮತ್ತು ಬಿಳಿರಕ್ತಕಣಗಳು ಸುಧಾರಿಸುತ್ತವೆ. ಈ ಹಣ್ಣಿನ ಅದ್ಭುತ ಪ್ರಯೋಜನಗಳ ಕಾರಣದಿಂದ ಡೆಂಗ್ಯೂ ಸಮಯದಲ್ಲಿ ಕುಗ್ಗಿರುವ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಕಿವಿ ಹಣ್ಣನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ವಿಶ್ವ ಗುಲಾಬಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಕ್ಯಾನ್ಸರ್ ರೋಗಿಗಳಿಗೆ ಮನೋಸ್ಥೈರ್ಯ ಈ ಆಚರಣೆ

ಕಿವಿ ಹಣ್ಣು ತಿನ್ನುವ ಇತರ ಪ್ರಯೋಜನಗಳು:

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:

ಕಿವಿಯು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಪೋಷಕಾಂಶವನ್ನು ಹೊಂದಿರುವ ಹಣ್ಣು. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಕಿವಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯಕ್ಕೆ ತುಂಬಾ ಒಳ್ಳೆಯದು:

ಕಿವಿ ಹಣ್ಣು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿವಿಯಲ್ಲಿ ಫೈಬರ್ ಅಂಶವು ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ:

ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ಮಲಬದ್ಧತೆ ಮತ್ತು ಜಠರಗರುಳಿನ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಇದು ಹೊಟ್ಟೆಯ ಇತರ ಅಸ್ವಸ್ಥತೆಗಳಿಂದಲೂ ಪರಿಹಾರವನ್ನು ಒದಗಿಸುತ್ತದೆ.

ಶ್ವಾಸಕೋಶವನ್ನು ಆರೋಗ್ಯಕರವಾಗಿಡಲು ಸಹಕಾರಿ:

ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಡೆಂಗ್ಯೂ ರೋಗಿಗಳು ಆಸ್ತಮಾದಿಂದ ಬಳಲುವ ಸಾಧ್ಯತೆಯಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕಿವಿ ಹಣ್ಣು ತಿಂದರೆ, ಅದು ಶ್ವಾಸಕೋಶವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಶ್ವಾಸಕೋಶವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ