Sign In

By signing in or creating an account, you agree with Associated Broadcasting Company's Terms & Conditions and Privacy Policy.

World Rhino Day 2023: ವಿಶ್ವ  ಘೇಂಡಾಮೃಗ ದಿನದ ಇತಿಹಾಸ ಮಹತ್ವ 

ಹಲವು ದಶಕಗಳಿಂದ ನಿರಂತರವಾದ ಬೇಟೆ ಮತ್ತು ಕಾಡಿನ ವಿನಾಶಗಳಿಂದಾಗಿ ಘೇಂಡಾಮೃಗಗಳು ಅಳಿವಿನಂಚಿನಲ್ಲಿವೆ. ಹೀಗೆ ಅಳಿವಿನಂಚಿನಲ್ಲಿರುವ ಘೇಂಡಾಮೃಗಗಳ ಸಂತತಿ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನವಾದ ಕಾಡುಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಘೇಂಡಾಮೃಗ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 22 ರಂದು ಆಚರಿಸಲಾಗುತ್ತದೆ.

World Rhino Day 2023: ವಿಶ್ವ  ಘೇಂಡಾಮೃಗ ದಿನದ ಇತಿಹಾಸ ಮಹತ್ವ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2023 | 7:27 PM

ಘೇಂಡಾಮೃಗವು (Rhino) ಒಂದು ಜಾತಿಯ ದೈತ್ಯ ಸಸ್ತನಿಯಾಗಿದ್ದು, ಈ ಪ್ರಾಣಿಗಳು ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಕಾಡುಗಳಲ್ಲಿ ಕಾಣಸಿಗುತ್ತವೆ.  ಇವುಗಳ ಚರ್ಮ ಮತ್ತು ಕೊಂಬುಗಳಿಗೆ ವಿಶೇಷವಾದ ಬೇಡಿಕೆಯಿರುವ ಕಾರಣ ಈ ಪ್ರಾಣಿಗಳನ್ನು ಹೆಚ್ಚಾಗಿ ಬೇಟೆಯಾಡಲಾಗುತ್ತದೆ. ಅದರಲ್ಲೂ  ಚೀನಾ, ವಿಯೆಟ್ನಾಂ, ಕೊರಿಯಾ ಮತು ಮಲೇಷ್ಯಾ ಮುಂತಾದ  ದೇಶಗಳಲ್ಲಿ ಘೇಂಡಾಮೃಗದ ಕೊಂಬುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಚೀನಾದಲ್ಲಿ ಖಡ್ಗಮೃಗದ ಕೊಂಬುಗಳನ್ನು ಔಷಧಿಗಳಾಗಿ ಬಳಸಲಾಗುತ್ತದೆ. ಅಲ್ಲದೆ ಈ ಪ್ರಾಣಿಯ ಕೊಂಬುಗಳನ್ನು ಆಭರಣ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.  ಈ ವಿಶೇಷ ಬೇಡಿಕೆಯ ಕಾರಣದಿಂದಾಗಿ ಘೇಂಡಾಮೃಗಳ ಕಳ್ಳಸಾಗಣಿಕೆ ವಿಪರೀತವಾಗಿ ಹೆಚ್ಚಾಗಿ ಅವುಗಳ ಸಂತತಿ ವಿನಾಶದ ಅಂಚಿಗೆ ಬಂದು ನಿಂತಿದೆ.   ಹಾಗಾಗಿ ಘೇಂಡಾಮೃಗಗಳ ಸಂರಕ್ಷಣೆಗೆ  ಒತ್ತು ನೀಡಲು, ಈ ಪ್ರಾಣಿಗಳ ಕಳ್ಳಸಾಗಣೆಯನ್ನು ತಡೆಯಲು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 22 ರಂದು ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಘೇಂಡಾಮೃಗ ದಿನದ ಇತಿಹಾಸ:

ಘೇಂಡಾಮೃಗಗಳ ಕಳ್ಳಸಾಗಾಣಿಕೆಯಿಂದಾಗಿ 1990 ರ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳ ಸಂಖ್ಯೆ ಕ್ಷೀಣಿಸತೊಡಗಿದವು. 2010 ರ ವೇಳೆಗೆ ಈ ಪ್ರಾಣಿಗಳ ಸಂಖ್ಯೆ ತೀರಾ ಇಳಿಮುಖವಾಯಿತು.  ಈ ಬಗ್ಗೆ  ರಾಷ್ಟ್ರವ್ಯಾಪಿ  ಕಳವಳ ವ್ಯಕ್ತವಾಯಿತು. ಇದಲ್ಲದೆ  ಆ ವೇಳೆಯಲ್ಲಿ ಜಗತ್ತಿನಲ್ಲಿ ಕೇವಲ 30,000 ಘೇಂಡಾಮೃಗಗಳು ಮಾತ್ರ ಜೀವಂತವಾಗಿದ್ದವು. ಈ ನಿಟ್ಟಿನಲ್ಲಿ ಘೇಂಡಾಮೃಗಗಳ  ಸಂತತಿಯನ್ನು ಸಂರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 2010 ರಲ್ಲಿ  ವಿಶ್ವ ವನ್ಯಜೀವಿ ನಿಧಿ (WWF) ದಕ್ಷಿಣ ಆಫ್ರಿಕಾದಲ್ಲಿ  ಸೆಪ್ಟೆಂಬರ್ 22 ರಂದು ಘೇಂಡಾಮೃಗ ದಿನವನ್ನು  ಆಚರಿಸಲು ಘೋಷಿಸಿತು. 2011 ರಲ್ಲಿ ಲಿಸಾ ಜೇನ್ ಕ್ಯಾಂಪ್ಬೆಲ್ ಮತ್ತು ರಿಶ್ಜಾ ಎಂಬವರು ಈ ವಿಶೇಷ ಆಚರಣೆಯೊಂದಿಗೆ  ಕೈಜೋಡಿಸಿ ಈ ವಿಶೇಷ  ದಿನವನ್ನು ಅಂತರಾಷ್ಟ್ರೀಯ ಆಚರಣೆಯಾಗಿ ಮಾಡಿದರು.  ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಘೇಂಡಾಮೃಗ ದಿನದ ಮಹತ್ವ:

ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವುದು ಅವಶ್ಯಕ. ಹವಮಾನ ಬದಲಾವಣೆ, ಬೇಟೆ, ಕಳ್ಳಸಾಗಣಿಕೆ ಮತ್ತು ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದಾಗಿ ಘೇಂಡಾಮೃಗಗಳು ಇಂದು ಅಳಿವಿನಂಚಿಗೆ ಬಂದು ತಲುಪಿವೆ. ಹೀಗಾಗಿ ಈ ಅದ್ಭುತ ಪ್ರಾಣಿಗಳ  ಪ್ರಾಮುಖ್ಯತೆ ಮತ್ತು ಕಾಡುಗಳ ರಕ್ಷಣೆ, ಹಾಗೂ ಈ ಪ್ರಾಣಿಗಳ  ಕಳ್ಳಸಾಗಣಿಕೆಯನ್ನು ತಡೆಗಟ್ಟುವ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ.
ಮೃಗಾಲಯಗಳಲ್ಲಿ ಘೇಂಡಾಮೃಗಗಳು ಸುರಕ್ಷಿತವಾಗಿದ್ದರೂ, ದೊಡ್ಡ ಅರಣ್ಯಗಳಲ್ಲಿ ಈ ಪ್ರಾಣಿಗಳ ಬೇಟೆಯನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಈ ಬಗ್ಗೆ   ಘೇಂಡಾಮೃಗಗಳ ಸಂರಕ್ಷಣೆಗೆ ಒತ್ತು ನೀಡಲು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು,  ವನ್ಯಜೀವಿ ಸಂಸ್ಥೆಗಳು, ಎನ್.ಜಿ.ಒಗಳು  ಹಾಗೂ ಪರಿಸರವಾದಿಗಳು ಒಗ್ಗೂಡಿ ವಿನಾಶದ ಅಂಚಿನಲ್ಲಿರುವ ಘೇಂಡಾಮೃಗಗಳನ್ನು  ಸಂರಕ್ಷಿಸಲು  ವಿಶ್ವ ಘೇಂಡಾಮೃಗ ದಿನದಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ