Relationship: ಡಿಜಿಟಲ್ ಡಿವೈಸ್ಗಳಿಂದ ನಿಮ್ಮ ಪ್ರೀತಿಪಾತ್ರ ದೂರವಾಗಬಹುದು, ಈ ಸಲಹೆ ಪಾಲಿಸಿ
ಇದು ಡಿಜಿಟಲ್ ಯುಗ. ಎಲ್ಲಾ ರೀತಿಯ ಕಾರ್ಯಗಳು ಹೆಚ್ಚಾಗಿ ಡಿಜಿಟಲ್ ಸಂಪರ್ಕದ ಮೂಲಕವೇ ನಡೆಯುತ್ತದೆ. ಹೆಚ್ಚಿನ ಜನರು ಮೊಬೈಲ್ ನೋಡುತ್ತಾ ಅದರಲ್ಲಿಯೆ ಮುಳುಗಿರುತ್ತಾರೆ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂಬ ಸಣ್ಣ ಅರಿವು ಅವರಿಗಿರುವುದಿಲ್ಲ. ಹಾಗಾಗಿ ಡಿಜಿಟಲ್ ಜೀವನದಿಂದ ಹೊರಬಂದು ಸಂಗಾತಿಯ ಜೊತೆಗೆ ನೈಜ ಜೀವನವನ್ನು ನಡೆಸುವುದು ಮುಖ್ಯ.

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಪ್ರತಿನಿತ್ಯ ಡಿಜಿಟಲ್ ಸಂವಹನವನ್ನು ನಡೆಸುತ್ತೇವೆ. ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವೀಡಿಯೋ ಕರೆಗಳು ಮತ್ತು ಮೆಸೇಜ್ ಅಪ್ಲಿಕೇಶನ್ವರೆಗೆ, ನಮ್ಮ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ನಾವು ಡಿಜಿಟಲ್ ಸಂವಹನವನ್ನು ಹೆಚ್ಚು ಅವಲಂಬಿಸಿರುತ್ತೇವೆ. ಆದರೂ ಕೆಲವೊಮ್ಮೆ ತಂತ್ರಜ್ಞಾನವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು. ಡಿಜಿಟಲ್ ಸಾಧನಗಳ ಅತಿಯಾದ ಅವಲಂಬನೆಯು ಕೆಲವೊಮ್ಮೆ ನಮ್ಮ ಸಂಬಂಧದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಇದರಿಂದ ಸಂಗಾತಿಗಳು ಪರಸ್ಪರ ಜೊತೆಯಾಗಿ ಸಮಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ, ಇಬ್ಬರ ಮಧ್ಯೆ ಅನ್ಯೋನ್ಯತೆಯ ಕೊರತೆ ಉಂಟಾಗಬಹುದು. ಹಾಗಾಗಿ ಡಿಜಿಟಲ್ ಅಭ್ಯಾಸಗಳಿಂದ ಹೊರಬಂದು ಸಂಗಾತಿಯ ಜೊತೆ ನೈಜ ಜೀವನವನ್ನು ನಡೆಸುವುದು ಮುಖ್ಯ. ನಮ್ಮ ಡಿಜಿಟಲ್ ಅಭ್ಯಾಸಗಳ ಬಗ್ಗೆ ಎಚ್ಚರದಿಂದಿರುವುದು ಮತ್ತು ನಮ್ಮ ಸಂಬಂಧಕ್ಕೆ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ ಎಂದಾಗ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು ಮುಖ್ಯವಾಗಿರುತ್ತದೆ.
ನಿಮ್ಮ ಸಂಬಂಧಕ್ಕೆ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ ಎನ್ನುವ ಎಚ್ಚರಿಕೆ ಕ್ರಮ:
ರಿಲೇಷನ್ಶಿಪ್ ಕೌನ್ಸಿಲರ್ ಮತ್ತು ಮ್ಯಾರೇಜ್ ಥೆರಪಿಸ್ಟ್ ಕ್ಲಿಂಟನ್ ಪವರ್ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಡಿಜಿಟಲ್ ಪ್ರಪಂಚದಿಂದ ಹಿಂದೆ ಸರಿದು, ಸಂಬಂಧದಲ್ಲಿ ಆರೋಗ್ಯಕರ ಸಮತೋಲನಕ್ಕೆ ಆದ್ಯತೆ ನೀಡುವ ಹಾಗೂ ಡಿಜಿಟಲ್ ಪ್ರಪಂಚದಿಂದ ದೂರ ಸರಿಯುವ ಸಮಯ ಬಂದಿದೆ ಎಂದು ಸೂಚಿಸುವ ಚಿಹ್ನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮ ಸಂಗಾತಿಯಿಂದ ನೀವು ಸಂಪರ್ಕ ಕಳೆದುಕೊಳ್ಳುವ ಭಾವನೆ ಮೂಡಿದಾಗ: ಡಿಜಿಟಲ್ ಡಿಟಾಕ್ಸ್ ನ ಒಂದು ದೊಡ್ಡ ವಿಷಯವೆಂದರೆ ಒಮ್ಮೆ ನೀವು ನಿಮ್ಮ ಸಂಬಂಧದಲ್ಲಿ ಡಿಜಿಟಲ್ ಸಾಧನಗಳಿಂದ ದೂರವಿದ್ದರೆ, ನೀವು ಸ್ವಾಭಾವಿಕವಾಗಿ ಪರಸ್ಪರ ಮುಖಾಮುಖಿ ಸಂಪರ್ಕಿಸಲು ಪ್ರಾರಂಭಿಸುತ್ತೀರಿ. ಸುರಕ್ಷಿತ ಮತ್ತು ಆರೋಗ್ಯಕರ ಸಂಬಂಧಕ್ಕಾಗಿ ಡಿಜಿಟಲ್ ಸಂವಹನಕ್ಕಿಂತ ಮುಖಾಮುಖಿ ಸಂವಹನ ಅತ್ಯಗತ್ಯ. ಇದರಿಂದ ನಿಮ್ಮ ಸಂಬಂಧವು ಎಲ್ಲದಕ್ಕಿಂತ ಹೆಚ್ಚಿನ ಆದ್ಯತೆ ತೆಗೆದುಕೊಳ್ಳುತ್ತದೆ.
ನಿಮ್ಮ ಸಂಗಾತಿಗಿಂತ ನೀವು ಸಾಮಾಜಿಕ ಮಾಧ್ಯಮ ಸಂವಹನಕ್ಕೆ ಆದ್ಯತೆ ನೀಡುತ್ತಿದ್ದೀರಿ ಎಂದಾದಾಗ: ನಿಮ್ಮ ಸಂಗಾತಿಗಿಂತ ನಿಮ್ಮ ಸ್ನೇಹಿತರ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಅದರ ಬಗ್ಗೆ ಹೆಚ್ಚು ಗಮನ ಹರಿಸಿದಾಗ ಮತ್ತು ನಿಮ್ಮ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗದಿದ್ದಾಗ ನೀವು ನಿಮ್ಮ ಸಂಬಂಧದ ಮೆಲೆ ಗಮನವನ್ನು ಕೇಂದ್ರೀಕರಿಸಲು ಮತ್ತು ನಿಮ್ಮ ಸಂಪರ್ಕವನ್ನು ಮರು ನಿರ್ಮಾಣ ಮಾಡಲು ಡಿಜಿಟಲ್ ಸಾಧನಗಳಿಂದ ದೂರವಿದ್ದು, ಆದಷ್ಟು ಸಂಗಾತಿಯ ಜೊತೆಗೆ ಮುಖಾಮುಖಿ ಸಂವಹನವನ್ನು ನಡೆಸಿ. ಒಳ್ಳೆಯ ಮತ್ತು ಗುಣಮಟ್ಟ ಕ್ಷಣಗಳನ್ನು ಕಳೆಯಬಹುದು. ಇದರಿಂದ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳುತ್ತದೆ.
ಇದನ್ನೂ ಓದಿ: Relationship: ಒನ್‌ಸೈಡ್ ಲವ್ ಸಂಕೇತಗಳು ತಿಳಿದುಕೊಳ್ಳುವುದು ಹೇಗೆ?
ಮಲಗುವಾಗ ಮೊಬೈಲ್ನನ್ನು ಬೆಡ್ ಪಕ್ಕ ಇಡುತ್ತೀರಿ ಎಂದಾದಾಗ: ನೀವು ಆದಷ್ಟು ಮೊಬೈಲ್ನಿಂದ ದೂರವಿರಿ. ನಿಮ್ಮ ಮಲಗುವ ಕೋಣೆಗೆ ಯಾವುದೇ ಡಿಜಿಟಲ್ ಡಿವೈಸ್ಗಳನ್ನು ತೆಗೆದುಕೊಂಡು ಹೋಗಬೇಡಿ. ನೀವು ನಿಮ್ಮ ಸಂಗಾತಿಯ ಪಕ್ಕದಲ್ಲಿ ಮಲಗಿಕೊಳ್ಳಿ, ಅವರ ಕಣ್ಣುಗಳನ್ನು ನೋಡುತ್ತಾ ಈ ದಿನ ಏನಾಯಿತು ಎಂಬುದನ್ನೆಲ್ಲಾ ಅವರ ಜೊತೆ ಮಾತನಾಡಿ. ನೀವು ಫೋನ್ನಲ್ಲಿ ಸಮಯವನ್ನು ಕಳೆಯುವ ಬದಲಿಗೆ ನಿಮ್ಮ ಸಂಗಾಂತಿಯೊಂದಿಗೆ ಸಮಯವನ್ನು ಕಳೆಯುವುದನ್ನು ಆನಂದಿಸಿ.
ಊಟದ ಸಮಯದಲ್ಲಿ ಮೊಬೈಲ್ ನೋಡುತ್ತೀರಿ ಎಂದಾದಾಗ: ಹೆಚ್ಚಿನವರು ಊಟದ ಸಮಯದಲ್ಲಿ ಮೊಬೈಲ್ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ನೀವು ಫೋನ್ ನೋಡಿಕೊಂಡು ಊಟವನ್ನು ಮಾಡುವ ಬದಲಿಗೆ, ಊಟ ಮಾಡುತ್ತಾ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡಿ, ಭವಿಷ್ಯದ ಕನಸುಗಳ ಬಗ್ಗೆ ಪರಸ್ಪರ ಹಂಚಿಕೊಳ್ಳಿ, ಟ್ರಿಪ್ ಪ್ಲಾನ್ ಮಾಡಿ, ಇದರಿಂದ ಇಬ್ಬರ ನಡುವೆ ಒಂದು ಉತ್ತಮ ಸಂಪರ್ಕ ಬೆಳೆಯಲು ಸಾಧ್ಯವಾಗುತ್ತದೆ. ಈ ರೀತಿಯಲ್ಲಿ ಜೊತೆಯಾಗಿ ಸಣ್ಣಪುಣ್ಣ ಕ್ಷಣವನ್ನು ಕಳೆಯುವುದು ಆನಂದವನ್ನು ನೀಡುತ್ತದೆ.
ನೀವು ಹೋದ ಕಡೆಯೆಲ್ಲಾ ಡಿಜಿಟಲ್ ಸಾಧನವನ್ನು ತೆಗೆದುಕೊಂಡು ಹೋಗುತ್ತೀರಾ: ನೀವು ಯಾವಾಗಲೂ ಮೊಬೈಲ್ನ್ನು ಜೊತೆಗೆ ತೆಗೆದುಕೊಂಡು ಹೋದಾಗ, ನೀವು ಹೆಚ್ಚು ಕಾಲ ಮೊಬೈಲ್ ನೋಡುತ್ತಾ ಸಮಯವನ್ನು ಕಳೆಯುತ್ತೀರಾ, ಹಾಗಾಗಿ ಒಂದು ದಿನ ಸಂಗಾತಿಯ ಜೊತೆ ಹೊರಗಡೆ ಹೊಗುವಾಗ ಮೊಬೈಲ್ನ್ನು ಮನೆಯಲ್ಲಿಯೇ ಬಿಟ್ಟು ಹೋಗಿ. ಆಗ ನೀವು ಪ್ರತಿ ಕ್ಷಣವು ಸಂಗಾತಿಯ ಜೊತೆ ಕಳೆಯುತ್ತೀರಾ. ಇದು ನಿಜವಾಗಿಯೂ ನಿಮ್ಮ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.