Dog Breeds: ಶ್ವಾನ ಪ್ರಿಯರನ್ನು ಒಂದು ಕ್ಷಣ ಭಯಪಡಿಸುವ ವಿಶ್ವದ ಅಪಾಯಕಾರಿ ಶ್ವಾನಗಳಿವು

ಮನೆಯಲ್ಲೊಂದು ಶ್ವಾನವಿದ್ದರೆ ಅದು ಕೇವಲ ಸಾಕು ಪ್ರಾಣಿಯಾಗಿರದೆ ಮನೆಯ ಸದಸ್ಯನಂತೆ ಇದ್ದು ಬಿಡುತ್ತವೆ. ಮನೆಯವರು ಕೂಡ ಆ ಶ್ವಾನವನ್ನು ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ವಿಶ್ವದಲ್ಲಿರುವ ಈ ಕೆಲವು ಶ್ವಾನಗಳು ನಾಯಿಯನ್ನು ಇಷ್ಟ ಪಡುವವರಿಗೆ ಭಯ ಹುಟ್ಟಿಸುತ್ತದೆ. ವಿಶ್ವದಲ್ಲಿರುವ ಈ ಶ್ವಾನಗಳು ದುಬಾರಿ ಮಾತ್ರವಲ್ಲದೇ, ಭಾರಿ ಅಪಾಯಕಾರಿಯಾಗಿವೆ.

Dog Breeds: ಶ್ವಾನ ಪ್ರಿಯರನ್ನು ಒಂದು ಕ್ಷಣ ಭಯಪಡಿಸುವ ವಿಶ್ವದ ಅಪಾಯಕಾರಿ ಶ್ವಾನಗಳಿವು
Most dangerous dogsImage Credit source: Pinterest
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Feb 07, 2024 | 6:31 PM

ಶ್ವಾನಗಳೆಂದರೆ ಎಲ್ಲರಿಗೂ ಇಷ್ಟನೇ. ಮಕ್ಕಳಿಂದ ದೊಡ್ಡವರವರೆಗೂ ಇಷ್ಟ ಪಡುವ ಪ್ರಾಣಿ ಎಂದರೆ ಅದುವೇ ಶ್ವಾನ. ಶ್ವಾನಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಿಷ್ಠಾವಂತ ಪ್ರಾಣಿ ಎನಿಸಿಕೊಂಡಿರುವ ಶ್ವಾನವು ಮನುಷ್ಯನ ಫ್ರೆಂಡ್ ಕೂಡ ಆಗಿದೆ. ಅನ್ನದ ಋಣಕ್ಕಾಗಿಸಾಯುವವರೆಗೂ ಮಾಲೀಕನ ಮನೆಗೆ ಕಾವಲಾಗಿರುತ್ತದೆ. ಆದರೆ ಕೆಲವರಿಗೆ ಶ್ವಾನಗಳನ್ನು ಕಂಡರೆ ಪ್ರೀತಿಗಿಂತ ಭಯವೇ ಹೆಚ್ಚು.ನಾಯಿಗಳನ್ನು ಕಂಡೊಡನೆ ಓಡುವವರು ಇದ್ದಾರೆ. ಹೀಗಾಗಿ ಎಲ್ಲಾ ಶ್ವಾನಗಳು ಸಾಧುವಾಗಿರುತ್ತದೆ ಎಂದು ಹೇಳುವುದು ಕಷ್ಟ. ಈ ಪ್ರಪಂಚದಲ್ಲಿ ಕೆಲವು ದುಬಾರಿ ಬೆಲೆಯ ಹಾಗೂ ಅಪಾಯಕಾರಿ ಶ್ವಾನಗಳಿವೆ.

ಪ್ರಪಂಚದ ಕೆಲವು ದುಬಾರಿ ಬೆಲೆಯ ಹಾಗೂ ಅಪಾಯಕಾರಿ ಶ್ವಾನಗಳು:

ಪ್ರೆಸ್ಸಾ ಕೆನಾರಿಯೊ:

ಸ್ಪೇನ್‌ನ ಕ್ಯಾನರಿ ದ್ವೀಪಗಳ ತಳಿಯಾಗಿದ್ದು, ಮಾಲೀಕನಿಗೆ ವಿಧೇಯದಾಯಕ ವಾಗಿದ್ದು, ಕಾವಲುಗಾರನಗಿರುತ್ತದೆ. ಆದರೆ ಅಪರಿಚಿತರು ವ್ಯಕ್ತಿಗಳು ಹಾಗೂ ಪ್ರಾಣಿಗಳನ್ನು ಕಂಡಾಗ ತನ್ನ ಅಕ್ರಮಣಕಾರಿ ಸ್ವಭಾವವನ್ನು ತೋರಿಸುತ್ತದೆ.

ಇಂಗ್ಲಿಷ್ ಮಾಸ್ಟಿಫ್ :

ವಿಶ್ವದಲ್ಲೇ ಅತಿದೊಡ್ಡ ನಾಯಿ ಎನಿಸಿಕೊಂಡಿರುವ ಇಂಗ್ಲಿಷ್ ಮಾಸ್ಟಿಫ್. ಈ ಹಿಂದೆ ಯುದ್ಧಗಳಲ್ಲಿ ಈ ನಾಯಿಗಳನ್ನು ಬಳಸಲಾಗುತ್ತಿತ್ತು. 90 ಮೀಟರ್ ಎತ್ತರ ಹಾಗೂ 120 ಕೆಜಿ ತೂಕವನ್ನು ಹೊಂದಿದೆ. ಅಪಾಯಕಾರಿ ಶ್ವಾನಗಳ ಸಾಲಿಗೆ ಇದು ಸೇರಿದ್ದು, ಮೈಕಟ್ಟಿನಿಂದಲೇ ಭಯ ಪಡಿಸುತ್ತದೆ.

ಜರ್ಮನ್ ಶೆಫರ್ಡ್ :

ಹೆಸರೇ ಸೂಚಿಸುವಂತೆ ನಾಯಿ ಜರ್ಮನ್ ಮೂಲದಾಗಿದ್ದು ಜಾನುವಾರುಗಳ ರಕ್ಷಣೆಗಾಗಿ ಬೆಳೆಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಸಾಕು ನಾಯಿಗಳಲ್ಲಿ ಒಂದಾಗಿದೆ. ಇದನ್ನು ಚುರುಕುತನ, ಶಕ್ತಿ, ಬುದ್ದಿವಂತಿಕೆಯ ಕಾರಣ ಪೊಲೀಸ್ ನಾಯಿ ಮತ ಸೈನ್ಯದ ನಾಯಿಯಾಗಿ ಬಳಸಲಾಗುತ್ತದೆ. ಈ ನಾಯಿ ಹೆಚ್ಚು ಕುಟುಂಬ ಸ್ನೇಹಿಯಾಗಿದ್ದು, ಆದರೆ ಅಪಾಯಕಾರಿಯಾಗಿದೆ.

ಇದನ್ನೂ ಓದಿ: ವಿವಿಧ ದೇಶಗಳ ಜನರು ಧರಿಸುವ ಸಾಂಪ್ರದಾಯಿಕ ಉಡುಗೆಗಳಿವು

ಸ್ಪನಿಷ್ ಮಾಸ್ಟಿಫ್ :

ಈ ಶ್ವಾನ ಅತಂತ್ಯ ದೈತ್ಯಕಾರವಾಗಿದ್ದು, 115 ಕೆಜಿಗಳಷ್ಟು ತೂಕವನ್ನು ಹೊಂದಿದ್ದು, 87 ಮೀಟರ್ ಎತ್ತರವಾಗಿ ಬೆಳೆಯುತ್ತವೆ. ನೋಡುವುದಕ್ಕೂ ಭಯಾನಕವಾಗಿದ್ದು, ತನ್ನ ಮಾಲೀಕನಿಗೆ ವಿಧೇಕನಾಗಿದ್ದು, ಗುರುತು ಪರಿಚಯವಿಲ್ಲದ ವ್ಯಕ್ತಿಯ ಮೇಲೆ ದಾಳಿ ಮಾಡುವ ಪ್ರವೃತ್ತಿಯನ್ನು ಹೊಂದಿದೆ.

ನೆಪೋಲೀಟನ್ ಮಾಸ್ಟಿಫ್ :

ಈ ಶ್ವಾನವು ಗಾತ್ರ ಹಾಗೂ ಎತ್ತರವನ್ನು ಹೊಂದಿದ್ದು ನೋಡಿದರೆ ಎಂತಹವರಿಗೂ ಭಯವಾಗುತ್ತದೆ. ಮಾಲೀಕನ ಜೊತೆಗೆ ನಿಯತ್ತಾಗಿರುವ ಈ ಶ್ವಾನವು ಅಪರಿಚಿತರನ್ನು ಕಂಡಾಗ ಸಹಜವಾಗಿಯೇ ತನ್ನ ಆಕ್ರಮಣ ಸ್ವಭಾವವನ್ನು ತೋರಿಸುತ್ತದೆ. ಇತರ ಪ್ರಾಣಿಗಳೊಂದಿಗೆ ಹೊಂದಿಕೊಂಡು ಹೋಗುವ ಗುಣವಿಲ್ಲ.

ಫೇರೋ ಹೌಂಡ್:

ಯುರೋಪಿನ ಮಾಲ್ಟಾದ ರಾಷ್ಟ್ರೀಯ ನಾಯಿಯೆಂದು ಈ ಫೇರೋ ಹೌಂಡ್ ಅನ್ನು ಕರೆಯಲಾಗುತ್ತದೆ. ಫೇರೋ ಹೌಂಡ್ ಅನ್ನು ಹೆಚ್ಚಾಗಿ ಶಿಕಾರಿಗಾಗಿ ಬಳಸುವ ಕಾರಣ ಇದು ಚುರುಕುತನ ಹಾಗೂ ಆಕ್ರಮಣಕಾರಿ ಸ್ವಭಾವವನ್ನು ಹೊಂದಿದೆ.

ರಾಟ್ ವೀಲರ್ :

ಜರ್ಮನ್​ ತಳಿಯಾಗಿರುವ ರಾಟ್ ವೀಲರ್ 50 ರಿಂದ 60 ಕೆ.ಜಿ ತೂಕ ಮತ್ತು 24 -27 ಮೀಟರ್​ ಎತ್ತರವಾಗಿ ಬೆಳೆಯುತ್ತವೆ. ಈ ನಾಯಿಗಳನ್ನು ಬಂಡಿಗಳನ್ನು ಎಳೆಯಲು ಬಳಸುತ್ತಿದ್ದರು. ಬಲಿಷ್ಠ ನಾಯಿಯಾಗಿದ್ದು, ತನ್ನ ನೋಟದಿಂದಲೇ ಎಲ್ಲರನ್ನು ಭಯಪಡಿಸುತ್ತದೆ. ಈ ನಾಯಿ ಅಪಾಯಕಾರಿಯಾಗಿದ್ದರೂ ತನ್ನ ಯಜಮಾನನಿಗೆ ಮಾತ್ರ ಅತಿ ವಿಧೇಯಕನಾಗಿ ಇರುತ್ತದೆ.

ಬೊರ್ಬೋಲ್ :

ಇದು ದಕ್ಷಿಣ ಆಫ್ರಿಕಾದ ತಳಿಯಾಗಿದ್ದು, ಇವುಗಳ ಕಣ್ಣು ತೀಕ್ಷವಾಗಿದ್ದು, ತರಬೇತಿಯಿಲ್ಲದೇ ಈ ಶ್ವಾನವನ್ನು ಸಾಕುವುದು ಕಷ್ಟ. ಈ ಶ್ವಾನವನ್ನು ಕಾವಲಾಗಿ ಸಾಕಾಗುತ್ತದೆ. 22 ರಿಂದ 27 ಮೀಟರ್ ನಷ್ಟು ಎತ್ತರ ಹಾಗೂ 200 ತೂಕವನ್ನು ಹೊಂದಿದೆ.

ಸೈಟ್ ಬರ್ನಾಡ್ :

ಈ ಶ್ವಾನಗಳು ಪ್ರಪಂಚದ ದೊಡ್ಡ ನಾಯಿಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಮೃದು ಸ್ವಭಾವದ ಶ್ವಾನವಾಗಿದ್ದು, ಸೂಕ್ಷ್ಮ, ಬುದ್ದಿವಂತ ಹಾಗೂ ಬಲಿಷ್ಠವಾಗಿದೆ. ಕುಟುಂಬದವರೊಂದಿಗೆ ಅತ್ಯಂತ ಸಲಿಗೆಯಿಂದ ಇರುತ್ತವೆ.

ಟಿಬೆಟಿಯನ್ ಮಾಸ್ಟಿಫ್:

ಈ ಶ್ವಾನವು ಟಿಬೆಟ್​ನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಮಾಸ್ಟಿಫ್​ ಜಾತಿಗೆ ಸೇರಿದ ಈ ಶ್ವಾನವು 50-90 ಕೆಜಿ ತೂಕವನ್ನು ಹೊಂದಿದ್ದು, 33ಮೀಟರ್​ ಉದ್ದವಾಗಿ ಬೆಳೆಯುತ್ತವೆ. ಈ ಶ್ವಾನಗಳು ತನ್ನ ಚುರುಕುತನ ಹಾಗೂ ಸೂಕ್ಷ್ಮ ಬುದ್ದಿಗೆ ಹೆಸರುವಾಸಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ