Fridge Storage Mistakes: ಅಪ್ಪಿ ತಪ್ಪಿಯೂ ಈ ಒಂದಷ್ಟು ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡ್ಬೇಡಿ

ಬಹುತೇಕ ಹೆಚ್ಚಿನವರ ಮನೆಗಳಲ್ಲಿ ಫ್ರಿಡ್ಜ್‌ ಮೇಲೆ ಏನಾದ್ರೂ ಒಂದು ವಸ್ತುವನ್ನು ಇಟ್ಟುಬಿಡುತ್ತಾರೆ. ಇರೋ ಜಾಗವನ್ನು ಯಾಕೆ ಸುಮ್ನೆ ವೇಸ್ಟ್‌ ಮಾಡೋದು ಎಂಬ ಕಾರಣಕ್ಕೆ ಮಸಾಲೆಗಳ ಡಬ್ಬಿ, ಎಣ್ಣೆ, ತಿಂಡಿ ಡಬ್ಬಿ ಇತ್ಯಾದಿಗಳನ್ನು ಫ್ರಿಡ್ಜ್‌ ಮೇಲ್ಗಡೆ ಇಟ್ಟು ಬಿಡುತ್ತಾರೆ. ಆದರೆ ಈ ರೀತಿ ಎಲ್ಲಾ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡಬಾರದು. ಏಕೆಂದರೆ ಇದರಿಂದ ಕೆಲವು ವಸ್ತುಗಳ ಗುಣಮಟ್ಟ ಹದಗೆಡಬಹುದು ಮತ್ತು ಮನೆಯಲ್ಲಿ ಭದ್ರತಾ ಅಪಾಯವನ್ನು ಉಂಟುಮಾಡಬಹುದು.

Fridge Storage Mistakes: ಅಪ್ಪಿ ತಪ್ಪಿಯೂ ಈ ಒಂದಷ್ಟು ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡ್ಬೇಡಿ
ಸಾಂದರ್ಭಿಕ ಚಿತ್ರ
Image Credit source: Unsplash

Updated on: Nov 23, 2026 | 5:30 PM

ಬಹುತೇಕ ಹೆಚ್ಚಿನವರು ತಮ್ಮ ಮನೆಯಲ್ಲಿರುವ ಫ್ರಿಡ್ಜ್‌ (fridge) ಮೇಲ್ಗಡೆ ಏನಾದ್ರೂ ಒಂದು ವಸ್ತುವನ್ನಿಡುವ ಅಭ್ಯಾಸ ಇದ್ದೇ ಇರುತ್ತದೆ. ಅಡುಗೆ ಮನೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅಥವಾ ಖಾಲಿ ಜಾಗವನ್ನು ಯಾಕೆ ಸುಮ್ಮನೆ ವೇಸ್ಟ್‌ ಮಾಡೋದು ಅನ್ನೋ ಕಾರಣಕ್ಕೆ ಖಾಲಿಯಿರುವ ಫಿಡ್ಜ್‌ ಮೇಲ್ಭಾಗವನ್ನು ಯಾವುದಾದರೂ ವಸ್ತುಗಳನ್ನಿಡಲು ಬಳಸಿಕೊಳ್ಳುತ್ತಾರೆ. ಹೌದು ಧಾನ್ಯಗಳು, ಮಸಾಲೆ ಡಬ್ಬಿಗಳು, ಎಣ್ಣೆ ಬಾಟಲಿಗಳು, ತಿಂಡಿಗಳು ಅಥವಾ ಇತರ ವಸ್ತುಗಳನ್ನು ಸಂಗ್ರಹಿಸಲು ಬಳಸುತ್ತಾರೆ. ಈ ಸ್ಥಳವು ಶೇಖರಣೆಗೆ ಉತ್ತಮವೆಂದು ತೋರುತ್ತದೆಯಾದರೂ, ಈ ರೀತಿ ಎಲ್ಲವನ್ನೂ ಫ್ರಿಡ್ಜ್ ಮೇಲೆ ಇಡುವುದು ಸೂಕ್ತವಲ್ಲ. ಏಕೆಂದರೆ ಫ್ರಿಡ್ಜ್ ಶಾಖ ಕೆಲವು ವಸ್ತುಗಳ ಗುಣಮಟ್ಟವನ್ನು ಹದಗೆಡಿಸಬಹುದು. ಇದಲ್ಲದೆ ಫಿಡ್ಜ್‌ ಬಳಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಈ ಕೆಲವು ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡ್ಬೇಡಿ.

ಈ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡುವುದು ಸೂಕ್ತವಲ್ಲ:

ಅಡುಗೆ ಎಣ್ಣೆ ಮತ್ತು ಮಸಾಲೆಗಳನ್ನು ಫ್ರಿಡ್ಜ್‌ ಮೇಲೆ ಇಡ್ಬೇಡಿ:

ಅಡುಗೆ ಎಣ್ಣೆ ಮತ್ತು ಮಸಾಲೆಗಳನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು. ವಿಶೇಷವಾಗಿ ಪಾರದರ್ಶಕ ಬಾಟಲಿಗಳಲ್ಲಿ ಸಂಗ್ರಹಿಸಲಾದ ಎಣ್ಣೆಗಳು, ಶಾಖ ಮತ್ತು ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಾಳಾಗಬಹುದು. ಅಲ್ಲದೆ, ಶಾಖವು ಮಸಾಲೆಗಳ ರುಚಿ ಮತ್ತು ಸುವಾಸನೆಯನ್ನು ಹಾಳುಮಾಡುತ್ತದೆ

Loading...

ಧಾನ್ಯಗಳು, ಬ್ರೆಡ್ ಮತ್ತು ತಿನಿಸುಗಳನ್ನು ಫ್ರಿಡ್ಜ್‌ ಮೇಲೆ ಇಡುವುದು ಸೂಕ್ತವಲ್ಲ:

ಧಾನ್ಯಗಳ ಡಬ್ಬಗಳು, ತಿಂಡಿಗಳನ್ನು ಫ್ರಿಡ್ಜ್‌ ಮೇಲ್ಗಡೆ ಇಡಬಾರದು. ಏಕೆಂದರೆ ಶಾಖದಿಂದಾಗಿ ಬೇಗನೆ ಮೃದುವಾಗುತ್ತವೆ ಮತ್ತು ತಿಂಡಿಗಳು ಗರಿಗರಿಯಾದ ವಿನ್ಯಾಸವನ್ನು ಕಳೆದುಕೊಳ್ಳುತ್ತವೆ. ಮತ್ತು ಅವುಗಳ ರುಚಿ ಹದಗೆಡಬಹುದು. ಹಾಗಾಗಿ ಇವುಗಳನ್ನು ಫ್ರಿಡ್ಜ್‌ ಮೇಲೆ ಇಡಬೇಡಿ.

ಔಷಧಗಳನ್ನು ಫ್ರಿಡ್ಜ್‌ ಮೇಲ್ಗಡೆ ಇಡ್ಬೇಡಿ:

ಅನೇಕರು ಮಕ್ಕಳ ಕೈಗೆ ಸಿಗಬಾರದೆಂದು ಔಷಧಿಗಳನ್ನು ಫ್ರಿಡ್ಜ್‌ ಮೇಲ್ಗಡೆ ಇಟ್ಟುಬಿಡುತ್ತಾರೆ. ಆದರೆ ಫ್ರಿಡ್ಜ್‌ನ ಮೇಲ್ಭಾಗವು ಔಷಧಿಗಳನ್ನು ಇಡಲು ಸರಿಯಾದ ಸ್ಥಳವಲ್ಲ. ಏಕೆಂದರೆ ಫ್ರಿಡ್ಜ್‌ ಶಾಖವು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ, ಅವುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಭಾರವಾದ ವಸ್ತುಗಳನ್ನು ಫ್ರಿಡ್ಜ್‌ ಮೇಲೆ ಇಡಬಾರದು:

ಪ್ಲಾಸ್ಟಿಕ್ ಪಾತ್ರೆಗಳು ನಿರಂತರವಾಗಿ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಬೇಗನೆ ದುರ್ಬಲಗೊಳ್ಳಬಹುದು, ಇದು ಅವು ಒಡೆಯಲು ಕಾರಣವಾಗಬಹುದು. ಅಲ್ಲದೆ, ತುಂಬಾ ಭಾರವಾದ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡುವುದರಿಂದ ಫ್ರಿಡ್ಜ್ ಮೇಲೆ ಒತ್ತಡ ಉಂಟಾಗುತ್ತದೆ

ಹಣ್ಣುಗಳನ್ನು ಫ್ರಿಡ್ಜ್‌ ಮೇಲೆ ಇಡಬೇಡಿ:

ಕೆಲವರು ಹಣ್ಣುಗಳ ಬುಟ್ಟಿಯನ್ನು ಫ್ರಿಡ್ಜ್‌ ಮೇಲ್ಗಡೆ ಇಟ್ಟುಬಿಡುತ್ತಾರೆ. ಈ ರೀತಿ ಹಣ್ಣಗಳನ್ನು ಸ್ಟೋರ್‌ ಮಾಡುವುದು ತಪ್ಪು. ಏಕೆಂದರೆ ಫ್ರಿಡ್ಜ್‌ನ ಹೀಟ್‌ಗೆ ಹಣ್ಣುಗಳು ಹಾಳಾಗಬಹುದು, ಕೊಳೆತುಹೋಗಬಹುದು.

ಇದನ್ನೂ ಓದಿ: ಹೂಕೋಸುಗಳಲ್ಲಿ ಅಡಗಿಡುವ ಹುಳಗಳನ್ನು ಈಸಿಯಾಗಿ ತೆಗೆದುಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಅನುಸರಿಸಿ

ರೆಫ್ರಿಜರೇಟರ್ ಮೇಲೆ ಸಸ್ಯಗಳನ್ನು ಇಡಬೇಡಿ:

ಜನರು ತಮ್ಮ ಮನೆಯ ಅಲಂಕಾರವನ್ನು ಹೆಚ್ಚಿಸಲು ರೆಫ್ರಿಜರೇಟರ್‌ಗಳ ಮೇಲೆ ಸಣ್ಣ ಪಾಟ್‌ಗಳಲ್ಲಿ ಗಿಡಗಳನ್ನು ಇಡುತ್ತಾರೆ. ಆದರೆ ಈ ರೀತಿ ಭಾರವಾದ ಸಸ್ಯಗಳನ್ನು ಇಡುವುದರಿಂದ ರೆಫ್ರಿಜರೇಟರ್ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ, ಇದಲ್ಲದೆ, ಕೆಲವು ಸಸ್ಯಗಳು ರೆಫ್ರಿಜರೇಟರ್‌ನಿಂದ ಹೊರಹೊಮ್ಮುವ ಶಾಖಕ್ಕೆ ಹಾಳಾಗುವ ಸಾಧ್ಯತೆ ಇರುತ್ತದೆ.

ಮೇಣದಬತ್ತಿ, ವಿದ್ಯುತ್ ಉಪಕರಣಗಳನ್ನು ಫ್ರಿಡ್ಜ್‌ ಮೇಲೆ ಇಡಬಾರದು:

ಫ್ರಿಡ್ಜ್‌ನ ಮೇಲೆ ಮೇಣದಬತ್ತಿಗಳು, ಲೈಟರ್‌ಗಳಂತಹ ಸುಡುವ ವಸ್ತುಗಳನ್ನು ಇಡುವುದು ತುಂಬಾ ಅಪಾಯಕಾರಿ, ಏಕೆಂದರೆ ಫ್ರಿಡ್ಜ್‌ನಿಂದ ಬರುವ ಶಾಖವು ಬೆಂಕಿ ಹತ್ತಿಕೊಳ್ಳಲು ಕಾರಣವಾಗಬಹುದು.

ಫ್ರಿಡ್ಜ್‌ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಸಹ ಅಪಾಯಕಾರಿ: 

ಜಾಗವನ್ನು ಉಳಿಸಲು ರೆಫ್ರಿಜರೇಟರ್ ಮೇಲೆ ಟೋಸ್ಟರ್, ಮೈಕ್ರೋವೇವ್, ರೇಡಿಯೋ ಅಥವಾ ಓವನ್ ಇಡುವುದು ಸಾಮಾನ್ಯ. ಆದರೆ ರೆಫ್ರಿಜರೇಟರ್‌ನ ಕಂಪ್ರೆಸರ್‌ನಿಂದ ಬರುವ ಕಂಪನಗಳು ಮತ್ತು ಶಾಖವು ಈ ಎಲೆಕ್ಟ್ರಾನಿಕ್ ವಸ್ತುಗಳ ಆಂತರಿಕ ಘಟಕಗಳನ್ನು ಹಾನಿಗೊಳಿಸುತ್ತದೆ, ಇದರಿಂದಾಗಿ ಅವು ಬೇಗನೆ ಹಾಳಾಗುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us