Earth Rotation: ನಿಧಾನಗೊಳ್ಳುತ್ತಿದೆ ಭೂಮಿಯ ಒಳಪದರದ ತಿರುಗುವಿಕೆಯ ವೇಗ, ಇದರಿಂದ ಏನು ಪರಿಣಾಮ? ಅಧ್ಯಯನ ಹೇಳಿದ್ದೇನು?

ಭೂಮಿಯು ತನ್ನ ಚಲನೆಯನ್ನು ಒಂದು ಕ್ಷಣ ನಿಲ್ಲಿಸಲು ಏನಾಗಬಹುದು ಎಂದು ಊಹೆ ಮಾಡಲು ಅಸಾಧ್ಯ. ಆದರೆ ಇದೀಗ ವಿಜ್ಞಾನಿಗಳು ಭೂಮಿಯ ಒಳಪದರವು ಗ್ರಹದ ಮೇಲ್ಮೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ. ಹಾಗೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ ಎನ್ನುವ ಆಘಾತಕಾರಿ ಅಂಶವನ್ನು ಬಹಿರಂಗ ಪಡಿಸಿದ್ದಾರೆ. ಹಾಗಾದ್ರೆ ಈ ಭೂಮಿಯ ಒಳಪದರ ತಿರುಗುವಿಕೆಯು ನಿಧಾನವಾಗಲು ಕಾರಣವೇನು ಎನ್ನುವುದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

Earth Rotation: ನಿಧಾನಗೊಳ್ಳುತ್ತಿದೆ ಭೂಮಿಯ ಒಳಪದರದ ತಿರುಗುವಿಕೆಯ ವೇಗ, ಇದರಿಂದ ಏನು ಪರಿಣಾಮ? ಅಧ್ಯಯನ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 09, 2024 | 11:34 AM

ನಾವು ನೀವುಗಳು ತಿರುಗುತ್ತಿರುವ ಭೂಮಿಯ ಮೇಲೆ ವಾಸಿಸುತ್ತಿದ್ದೇವೆ. ಭೂಮಿಯು ತನ್ನ ಕಕ್ಷೆಯಲ್ಲಿ ತಿರುಗುತ್ತಾ, ಸೂರ್ಯನನ್ನು ಸುತ್ತುತ್ತಿರುತ್ತದೆ. ಈ ಪ್ರದಕ್ಷಿಣೆಯ ಕಾರಣದಿಂದಾಗಿ ಭೂಮಿಯ ಮೇಲೆ ಹಗಲು ಮತ್ತು ರಾತ್ರಿಯ ಸಂಭವಿಸುತ್ತದೆ. ಒಂದು ವೇಳೆ ಭೂಮಿಯು ತನ್ನ ತಿರುಗುವಿಕೆಯನ್ನು ನಿಧಾನಗೊಳಿಸಿದರೆ ಅಥವಾ ವೇಗಗತಿಯಲ್ಲಿ ತಿರುಗಿದರೆ ಏನಾಗಬಹುದು ಎಂದು ಯಾರು ಕೂಡ ಊಹಿಸಿರಲು ಸಾಧ್ಯವಿಲ್ಲ. ಆದರೆ ಇದೀಗ ಭೂಮಿಯ ಒಳಪದರದ ತಿರುಗುವಿಕೆಯ ವೇಗವು ನಿಧಾನವಾಗಿದೆ ಎನ್ನುವ ವಿಚಾರವನ್ನು ವಿಜ್ಞಾನಿಗಳು ಬಹಿರಂಗ ಪಡಿಸಿದ್ದಾರೆ.

‘ನೇಚರ್‌’ನಲ್ಲಿ ಪ್ರಕಟವಾದ ಅಧ್ಯಯನವು 2010ರ ಸುಮಾರಿಗೆ ಭೂಮಿ ಒಳಗಿರುವ ಒಳಪದರವು ತನ್ನ ವೇಗವನ್ನು ಕಡಿಮೆ ಮಾಡಲು ಪ್ರಾರಂಭಿಸಿತು ಎನ್ನುವುದಕ್ಕೆ ಸಾಕ್ಷಿಗಳನ್ನು ಒದಗಿಸುತ್ತದೆ. ಈ ಭೂಮಿಯ ಒಳ ಪದರವು ಭೂಮಿ ಮೇಲಿನ ಪದರಕ್ಕಿಂತ ಅತ್ಯಂತ ಕಡಿಮೆ ವ್ಯಾಸ ಹೊಂದಿದ್ದು, ಕಳೆದ ಸುಮಾರು 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭೂಮಿಯ ಹೊರಪದರಕ್ಕಿಂತ ನಿಧಾನವಾಗಿ ಹಾಗೂ ಹಿಮ್ಮುಖವಾದ ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ಭೂಮಿಯ ಒಳಪದರ ತಿರುಗುವಿಕೆಯ ಅಧ್ಯಯನಕ್ಕಾಗಿ ಜಾನ್ ವಿಡೇಲ್ ಮತ್ತು ಅವರ ಸಹೋದ್ಯೋಗಿಗಳ ತಂಡವು ದಕ್ಷಿಣ ಅಟ್ಲಾಂಟಿಕ್‌ನ ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳ ಸುತ್ತಲೂ 1991 ಮತ್ತು 2023 ರ ನಡುವೆ ದಾಖಲಾದ 121 ಪುನರಾವರ್ತಿತ ಭೂಕಂಪಗಳ ಸಮಯ ಹಾಗೂ ಭೂಕಂಪನದ ತೀವ್ರತೆಯನ್ನು ವಿಶ್ಲೇಷಣೆ ಮಾಡಿದ್ದಾರೆ. ಅದಲ್ಲದೇ, 2023 ರ ವರದಿಗಳ ಪ್ರಕಾರ ಭೂಮಿಗಿಂತ ವೇಗವಾಗಿ ತಿರುಗುತ್ತಿದ್ದ ಒಳಪದರವು ಇದೀಗ ನಿಧಾನವಾಗಿ ತಿರುಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಸೀರೆಯಲ್ಲಿ ಮಿಂಚಿದ ನಟಿ ದೀಪಿಕಾ, ಈ ಸೀರೆ ಬೆಲೆ ಎಷ್ಟು ಗೊತ್ತಾ?

ಒಳಪದರದ ತಿರುಗುವಿಕೆ ನಿಧಾನವಾಗಲು ಕಾರಣಗಳೇನು?

ಭೂಮಿಯು ನಾಲ್ಕು ಪದರಗಳನ್ನು ಒಳಗೊಂಡಿದ್ದು, ಹೊರಗಿನ ಪದರಗಳು ಮೃದುವಾಗಿದ್ದರೂ, ಒಳ ಪದರವು ಗಟ್ಟಿಯಾದ ತಿರುಳಿನಿಂದ ರೂಪಿತವಾಗಿರುತ್ತದೆ. ವಿಜ್ಞಾನಿಗಳು ಒಳಗಿನ ತಿರುಳಿನ ಕುಸಿತವು ಭೂಮಿಯ ಕಾಂತೀಯ ಕ್ಷೇತ್ರವನ್ನು ಉತ್ಪಾದಿಸುವ ದ್ರವದ ಹೊರಭಾಗದ ಕೋರ್‌ನ ಮಂಥನದಿಂದ ಉಂಟಾಗುತ್ತದೆ. ಅದಲ್ಲದೇ ಭೂಮಿಯ ಮೇಲಿನ ಕಲ್ಲಿನ ಪದರವು ದಟ್ಟವಾದ ಪ್ರದೇಶಗಳಿಂದ ಗುರುತ್ವಾಕರ್ಷಣೆಯ ಎಳೆತಗಳು ಉಂಟಾಗುತ್ತದೆ. ಇದೇ ಭೂಮಿಯ ಒಳಪದರದ ತಿರುಗುವಿಕೆಯು ನಿಧಾನವಾಗಲು ಕಾರಣವಾಗಿದೆ. ಈ ತಿರುಗುವಿಕೆಯು ಕಡಿಮೆಯಾಗುತ್ತಾ ಹೋದಲ್ಲಿ ಭೂಮಿಯ ತಿರುಗುವಿಕೆಯ ವೇಗವು ನಿಧಾನವಾಗಲಿದೆ. ಈ ಗ್ರಹದ ಮೇಲೆ ವಾಸಿಸುತ್ತಿರುವ ಜೀವರಾಶಿಗಳ ಮೇಲೆ ನಾನಾ ರೀತಿಯ ಪರಿಣಾಮಗಳು ಬೀರಲಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Tue, 9 July 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್