Early Dinner Benefits: ರಾತ್ರಿಯ ಭೋಜನವನ್ನು ಸಂಜೆ ಏಳು ಗಂಟೆಗೆ ಮಾಡಿ, ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆ: ಅಧ್ಯಯನ

ರಾತ್ರಿಯ ಊಟವು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ರಾತ್ರಿಯ ಊಟಕ್ಕೆ ಸಂಬಂಧಿದಂತೆ ನಾವು ಅನೇಕ ತಪ್ಪುಗಳನ್ನು ಮಾಡುತ್ತೇವೆ. ಇವುಗಳಲ್ಲಿ ತಡರಾತ್ರಿಯಲ್ಲಿ ಆಹಾರ ಸೇವಿಸುವುದು ಕೂಡಾ ಒಂದು. ಇದು ಅನಾರೋಗ್ಯಕರ ಜೀವನಶೈಲಿ ಅಭ್ಯಾಸವಾಗಿದ್ದು,  ಈ ಅಭ್ಯಾಸದಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು.  ಹಾಗಿರುವಾಗ ರಾತ್ರಿಯ ಊಟವನ್ನು ಸಂಜೆ ಏಳು ಗಂಟೆಯ ಮೊದಲು ಮಾಡಿ ಮುಗಿಸುವ ಆರೋಗ್ಯಕ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಜೀವಿತಾವಧಿಯು ಹೆಚ್ಚಾಗುವುದಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡ ಪಡೆಯಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

Early Dinner Benefits: ರಾತ್ರಿಯ ಭೋಜನವನ್ನು ಸಂಜೆ ಏಳು ಗಂಟೆಗೆ ಮಾಡಿ, ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us
| Edited By: ಅಕ್ಷಯ್​ ಪಲ್ಲಮಜಲು​​

Updated on: Nov 20, 2023 | 6:30 PM

ಆರೋಗ್ಯಕರ ಜೀವನಶೈಲಿಯು, ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಹಾಗೂ ಇತ್ಯಾದಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ರಾತ್ರಿ ಬೇಗನೆ ಮಲಗುವುದು ಹೀಗೆ  ಇತ್ಯಾದಿ ಕೆಲವೊಂದು ಅಭ್ಯಾಸಗಳು ಆರೋಗ್ಯಕ ಜೀವನಶೈಲಿಯ ಅಭ್ಯಾಸಗಳಾಗಿವೆ. ಅದರ ಜೊತೆಗೆ  ರಾತ್ರಿಯ ಭೋಜನವನ್ನು ಸಂಜೆ ಏಳು ಗಂಟೆಯ ಮೊದಲು ಮಾಡುವುದು ಕೂಡ  ಆರೋಗ್ಯಕರ ಅಭ್ಯಾಸವಾಗಿದೆ. ಇದರಿಂದ ಜೀವಿತಾವಧಿ ಹೆಚ್ಚಾಗುವುದಲ್ಲದೆ, ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ಇತ್ತೀಚಿಗೆ, ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್ ನಿಯತಕಾಲಿಕೆಯಲ್ಲಿ ಪ್ರಕಟವಾದ  ಅಧ್ಯಯನವು ರಾತ್ರಿಯ ಭೋಜನವನ್ನು ಸಂಜೆ ಏಳು ಗಂಟೆಯ ಮೊದಲು ಮಾಡುವುದರಿಂದ ಜೀವಿತಾವಧಿಯು ಹೆಚ್ಚುತ್ತದೆ ಎಂಬುದನ್ನು ಕಂಡುಹಿಡಿದಿದೆ. ಈ ಅಧ್ಯಯನದಲ್ಲಿ ಇಟಲಿಯ ಹಳ್ಳಿಯೊಂದರ ಜನರನ್ನು ಸಂಶೋಧನೆಗೆ ಒಳಪಡಿಸಲಾಯಿತು.  ಮತ್ತು 90 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ರಾತ್ರಿ 7 ಗಂಟೆಯ ಸುಮಾರಿಗೆ ರಾತ್ರಿಯ ಊಟವನ್ನು ಸೇವನೆ ಮಾಡುತ್ತಾರೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ಅಲ್ಲದೆ ಆ ಜನರು ಸಸ್ಯಾಹಾರ ಮತು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರಗಳನ್ನು ಸೇವನೆ ಮಾಡುತ್ತಾರೆ. ಹಾಗೂ  ಇಲ್ಲಿನ ಎಲ್ಲಾ ವಯಸ್ಸಿನ ಜನರ ಜೀವನಶೈಲಿಯೂ ತುಂಬಾ ಕ್ರಿಯಾಶೀಲವಾಗಿದೆ. ಈ ಅಂಶಗಳು ಕೂಡಾ ಇದು ಅವರು ದೀರ್ಘಕಾಲ ಆರೋಗ್ಯವಂತರಾಗಿ ಜೀವಿಸಸಲು ಸಹಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ. ಈ ಅಧ್ಯಯನದಿಂದ   ನಮ್ಮ ಜೀವನಶೈಲಿಯು ನಮ್ಮ ಜೀವನದ ಗುಣಮಟ್ಟದ ಮೇಲೆ ಹೇಗೆ  ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಬಹುದು.  ಹಾಗಾದರೆ ರಾತ್ರಿಯ ಭೋಜನವನ್ನು ಬೇಗ ಸೇವನೆ ಮಾಡುವುದರಿಂದ ದೊರೆಯುವ ಇತರ ಪ್ರಯೋಜನಗಳನ್ನು ತಿಳಿಯೋಣ.

ಜೀರ್ಣಕ್ರಿಯೆಗೆ ಪ್ರಯೋಜನಕಾರಿ:

ರಾತ್ರಿಯ ಊಟವನ್ನು ಬೇಗನೇ ಮಾಡುವುದರಿಂದ,  ಇದು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸಂಜೆ ಏಳು ಗಂಟೆಯ ಸುಮಾರಿಗೆ ಊಟ ಮಾಡಿ ಮುಗಿಸುವುದರಿಂದ  ಮಲಗುವ ಮುನ್ನ ಊಟ ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ. ಮತ್ತು ಇದರಿಂದಾಗಿ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.  ಆದರೆ ರಾತ್ರಿ ತಡವಾಗಿ ಊಟ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ಹೊಟ್ಟೆಯುಬ್ಬರ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ರಾತ್ರಿ ಬೇಗ ಊಟ ಮಾಡುವುದು  ನಮ್ಮ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ರಾತ್ರಿಯ ಭೋಜನವನ್ನು ಸೂರ್ಯಾಸ್ತದ ಮುಂಚೆ ಸೇವಿಸಿ, ಅನುಷ್ಕಾ ಶರ್ಮಾ ಸಲಹೆ ಇಲ್ಲಿದೆ

ಉತ್ತಮ ನಿದ್ರೆ:

ರಾತ್ರಿ ಬೇಗನೇ ಊಟ ಮಾಡುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ.  ಆಹಾರ ಸರಿಯಾಗಿ ಜೀರ್ಣವಾದಾಗ ನೀವು ಹಗುರವಾದ ಭಾವನೆಯನ್ನು ಅನುಭವಿಸುತ್ತೀರಿ ಮತ್ತು ಇದರಿಂದ ನೀವು ಉತ್ತಮ ನಿದ್ರೆಯನ್ನು ಪಡೆಯುತ್ತೀರಿ.  ಅಲ್ಲದೆ ಆಹಾರವು ಸರಿಯಾಗಿ ಜೀರ್ಣವಾಗುವ ಕಾರಣ ಅಜೀರ್ಣದ ಸಮಸ್ಯೆಯೂ ಕಡಿಮೆಯಗುತ್ತದೆ. ಈ ಕಾರಣದಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸುತ್ತದೆ:

ರಾತ್ರಿಯ ಊಟವನ್ನು ಸಂಜೆ ಏಳು ಗಂಟೆಯ ಮೊದಲು ತಿನ್ನುವುದರಿಂದ ನಿಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು  ಮತ್ತು ಎಲ್ಲಾ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಹೆಚ್ಚಿನ ಸಮಯವಿರುತ್ತದೆ. ಅಲ್ಲದೆ ರಾತ್ರಿಯ ಊಟವನ್ನು ಬೇಗ ಸೇವಿಸುವುದರಿಂದ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ. ಹಾಗೂ ಇದು ಮಧುಮೇಹ ಮತ್ತು ಹೃದ್ರೋಗದ ಅಪಾಯವನನು ಕಡಿಮೆ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸಹಕಾರಿ:

ರಾತ್ರಿ ಬೇಗನೆ ಊಟ ಮಾಡುವುದರಿಂದ ತೂಕ ಹೆಚ್ಚಾಗುವ ಸಮಸ್ಯೆ ಕಡಿಮೆಯಾಗುತ್ತದೆ. ಸಂಜೆ ಏಳು ಗಂಟೆಯ ಮೊದಲು ರಾತ್ರಿಯ ಭೋಜನವನ್ನು ಮಾಡುವುದರಿಂದ  ಚಯಾಪಚಯಕ್ರಿಯೆಯು ವೇಗಗೊಳ್ಳುತ್ತದೆ, ಇದರಿಂದಾಗಿ ಸೇವನೆ ಮಾಡಿದ  ಆಹಾರವು ಮಲಗುವ ಮೊದಲು ಸರಿಯಾಗಿ ಜೀರ್ಣವಾಗುತ್ತದೆ. ಇದು ತೂಕ ಇಳಿಕೆಗೂ ಸಹಕಾರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಹೈಕಮಾಂಡ್ ಸೂಚಿಸಿದರೆ ಪುನಃ ಟ್ರಬಲ್ ಶೂಟರ್ ಆಗಲು ಸಿದ್ಧ: ಡಿಕೆ ಶಿವಕುಮಾರ್
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ
ಕನಕದಾಸ ಜಯಂತಿ: ಸಭಾ ಮರ್ಯಾದೆ, ಸಮಯಪ್ರಜ್ಞೆ ಪ್ರದರ್ಶಿಸಿದ ಸಚಿವ ಜೋಶಿ