Fashion Tips: ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್

ಬಿಸಿಲ ಧಗೆಯೂ ಆರಂಭವಾಗಿ ಬಿಟ್ಟಿದೆ. ಸೂರ್ಯ ನೆತ್ತಿಯ ಮೇಲೆ ಬಂದಾಗ ಉರಿಯನ್ನು ತಡೆಯಲಾಗದು. ಈ ಬಿಸಿಲಿಗೆ ಬಟ್ಟೆಗಳೇ ಬೆವರಿಗೆ ಅಂಟಾಗಿ ಕಿರಿಕಿರಿ ಅನುಭವವನ್ನು ಉಂಟು ಮಾಡುತ್ತದೆ. ಈ ಋತುವಿನಲ್ಲಿ ಬಟ್ಟೆಗಳ ಆಯ್ಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ವೇಳೆಯಲ್ಲಿ ಗಾಢ ಹಾಗೂ ದಪ್ಪ ಬಣ್ಣಗಳಿಂದ ದೂರವಿರುವುದು ಉತ್ತಮ. ಆದರೆ ಬಟ್ಟೆಗಳ ಆಯ್ಕೆಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ. ಈ ಬೇಸಿಗೆಯಲ್ಲಿ ಯಾವ ಬಣ್ಣಗಳು ಹೆಚ್ಚು ಆರಾಮದಾಯಕವಾಗಿರುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

Fashion Tips: ಬೇಸಿಗೆಯಲ್ಲಿ ಯಾವ ಬಣ್ಣದ ಬಟ್ಟೆ ಬೆಸ್ಟ್? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Edited By:

Updated on: Feb 26, 2025 | 4:41 PM

ಬೇಸಿಗೆಯಲ್ಲಿ ಸುಡುವ ಬಿಸಿಲಿಗೆ ಬೆವರುವುದು ಸಹಜ. ಅದರಲ್ಲಿ ಬಟ್ಟೆಯ ಆಯ್ಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಾಕು, ಮೈಯೆಲ್ಲಾ ಉರಿ ಹಾಗೂ ಕಿರಿಕಿರಿಯಂತಾಗುತ್ತದೆ. ಹೀಗಾಗಿ ಈ ಋತುವಿನಲ್ಲಿ ದೇಹಕ್ಕೆ ಹೊಂದಿಕೊಳ್ಳುವ ಉಡುಪುಗಳನ್ನು ಧರಿಸುವುದು ಮುಖ್ಯ. ಕಾಟನ್‌, ಲೆನಿನ್ ನಂತಿರುವ ಹಗುರ ಹಾಗೂ ತೆಳು ಬಟ್ಟೆಗಳು ಆರಾಮದಾಯಕವಾಗಿರುತ್ತದೆ. ಬಟ್ಟೆಗಳ ಆಯ್ಕೆಯ ಜೊತೆಗೆ ಬಣ್ಣಗಳ ಬಗ್ಗೆಯೂ ಹೆಚ್ಚು ಗಮನವಹಿಸುತ್ತದೆ. ಹೀಗಾಗಿ ಈ ಬಣ್ಣದ ಬಟ್ಟೆಗಳನ್ನೆ ಧರಿಸುವುದು ಸೂಕ್ತವಾಗಿದೆ.

  •  ಬಿಳಿ : ಬಿಳಿ ಬಣ್ಣದ ಬಟ್ಟೆಗಳು ಎಲ್ಲರಿಗೂ ಹೊಂದುತ್ತದೆ. ಈ ಬಣ್ಣವು ಪ್ರಶಾಂತವಾದ ವಾತಾವರಣ ಮೂಡಿಸುತ್ತದೆ ಹಾಗೂ ಈ ಬಣ್ಣದ ಬಟ್ಟೆಯು ದೇಹ ಮತ್ತು ಮನಸ್ಸಿಗೆ ಹಿತ ಅನುಭವ ನೀಡುತ್ತದೆ. ಹೀಗಾಗಿ ಬಿಳಿ ಬಣ್ಣದ ಟೀಶರ್ಟ್, ಸಲ್ವಾರ್, ಕುರ್ತಿ ಹೀಗೆ ಆರಾಮದಾಯಕ ಉಡುಪುಗಳ ಆಯ್ಕೆ ಮಾಡಿಕೊಳ್ಳುತ್ತಾರೆ.
  • ಕಂದು : ಹೆಚ್ಚಿನವರಿಗೆ ಕಂದು ಬಣ್ಣವೆಂದರೆ ಅಷ್ಟಕಷ್ಟೆ. ಆದರೆ ಈ ಸರಳವಾದ ವಿನ್ಯಾಸ ಹೊಂದಿರುವ ಈ ಬಣ್ಣದ ಉಡುಪುಗಳು ಆಕರ್ಷಕವಾಗಿ ಕಾಣಿಸುತ್ತದೆ. ಈ ಬಣ್ಣವು ಫ್ಯಾಷನ್ ಬಣ್ಣವಾಗಿದ್ದು, ಬೇಸಿಗೆಯ ಋತುವಿನಲ್ಲಿ ಬಣ್ಣ ಧರಿಸುವುದು ಸುಂದರವಾಗಿ ಕಾಣುವಂತೆ ಮಾಡುತ್ತದೆ.
  • ಹಳದಿ : ಬೇಸಿಗೆಯಲ್ಲಿ ಸೂರ್ಯನ ಪ್ರಕಾರವಾದ ಬೆಳಕು ಇದ್ದು ಹೀಗಾಗಿ ಬಟ್ಟೆಗಳ ಬಣ್ಣವು ಬಹಳ ಮುಖ್ಯವಾಗುತ್ತದೆ. ಹೀಗಾಗಿ ಹಳದಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು. ಇದು ಹಳದಿ ಬಣ್ಣದ ಫ್ಲೋರಲ್ ಡಿಸೈನ್ ಇರುವ ಡ್ರೆಸ್, ಕುರ್ತಾ, ಸಲ್ವಾರ್ ಗಳು ಈ ಋತುವಿಗೆ ಹೊಂದುತ್ತದೆ.
  • ಗುಲಾಬಿ : ಹೆಣ್ಣು ಮಕ್ಕಳಿಗೆ ಗುಲಾಬಿ ಬಣ್ಣದ ಬಟ್ಟೆಗಳನ್ನು ಇಷ್ಟ ಪಡುತ್ತಾರೆ. ತಿಳಿ ಹಳದಿ ಬಣ್ಣವು ಹಗುರವಾದ ಅನುಭವ ನೀಡುತ್ತದೆ. ಹೀಗಾಗಿ ಸುಡುವ ಬಿಸಿಲಿಗೆ ಪಿಂಕ್ ಬಣ್ಣದಲ್ಲಿ ಲೆಹೆಂಗಾ, ಕುರ್ತಿ ಮತ್ತು ಸಲ್ವಾರ್ ಧರಿಸುವುದು ಉತ್ತಮ. ಈ ಬಣ್ಣವನ್ನು ಫ್ಯಾಶನ್ ಕಲರ್ ಎಂದು ಸೌಂದರ್ಯ ತಜ್ಞರು ಹೇಳುತ್ತಾರೆ.
  • ತಿಳಿ ನೀಲಿ : ತಿಳಿನೀಲಿ ಬಣ್ಣವು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ ಮತ್ತು ತಂಪಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಬಣ್ಣವು ಉಲ್ಲಾಸಕರ ಮತ್ತು ಶಾಂತಗೊಳಿಸುವ ಪರಿಣಾಮವನ್ನು ಉಂಟು ಮಾಡುತ್ತದೆ. ಹೀಗಾಗಿ ಈ ಬಿಸಿಲಿಗೆ ಈ ಬಣ್ಣದ ಉಡುಗೆಯೂ ಅತ್ಯುತ್ತಮ ಆಯ್ಕೆಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us