Kannada News Lifestyle Fitness Tips : Simple steps for men to stay fit after 40 Kannada News
Fitness Tips : ಪುರುಷರು ದಿನನಿತ್ಯ ಈ ಕೆಲಸ ತಪ್ಪದೇ ಮಾಡಿ 40 ನಂತರ ಫಿಟ್ ಆಗಿ ಕಾಣಿಸಿಕೊಳ್ಳಿ
ಫಿಟ್ ಹಾಗೂ ಯಂಗ್ ಆಗಿರಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಮಹಿಳೆಯರಷ್ಟೇ ಪುರುಷರು ಕೂಡ ತಮ್ಮ ಸೌಂದರ್ಯ ಹಾಗೂ ದೇಹವನ್ನು ಸದೃಢರಾಗಿರಲು ಕಷ್ಟ ಪಡುತ್ತಾರೆ. ಆದರೆ ಪುರುಷರು ಪ್ರತಿದಿನ ಯಾವ ಕೆಲಸವನ್ನು ಮಾಡಬೇಕು? 40 ವರ್ಷ ವಯಸ್ಸಿನ ನಂತರವೂ ತಮ್ಮನ್ನು ತಾವು ಫಿಟ್ ಆಗಿ ಹೇಗೆ ಇಟ್ಟುಕೊಳ್ಳುವುದು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on
ಇಂದಿನ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆಗಳಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತದೆ. ಹೀಗಾಗಿ ಆಧುನಿಕ ಕಾಲದಲ್ಲಿ ಫಿಟ್ ಆಗಿರುವುದು ಬಹಳ ಮುಖ್ಯ. ನಲವತ್ತು ದಾಟಿದ ಮೇಲೆ ಪುರುಷರು ಫಿಟ್ ಮತ್ತು ಯಂಗ್ ಆಗಿ ಉಳಿಯುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಆಹಾರ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ದೇಹವನ್ನು ಶೇಪ್ನಲ್ಲಿ ಇಟ್ಟುಕೊಳ್ಳುವುದು ಕಷ್ಟವೇನಲ್ಲ.
ನಿಯಮಿತ ವ್ಯಾಯಾಮ ಮಾಡಿ : ಬೆಳಗ್ಗೆಂದು ನೀವೇನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮ ಫಿಟ್ ನೆಸ್ ಅವಲಂಬಿತವಾಗಿರುತ್ತದೆ. ಆರೋಗ್ಯಕರ ದೇಹವು ನಿಮ್ಮದಾಗಬೇಕಾದರೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು.
ಉತ್ತಮ ಆಹಾರ ಸೇವನೆ ಇರಲಿ : ಯುವಕರಾಗಿ ಕಾಣಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವೂ ಅಗತ್ಯ. ಹೀಗಾಗಿ 40 ನಂತರದಲ್ಲಿ ಎಣ್ಣೆಯುಕ್ತ ಆಹಾರ, ಜಂಗ್ಫುಡ್ಗಳನ್ನು ಸೇವನೆಯನ್ನು ಆದಷ್ಟು ತಪ್ಪಿಸಿ., ಹೆಚ್ಚುವರಿ ಉಪ್ಪು, ಕೊಬ್ಬಿನ ಆಹಾರ, ಸ್ಯಾಚುರೇಟೆಡ್ ಕೊಬ್ಬಿನಿಂದ ದೂರವಿರುವುದು ಉತ್ತಮ. ಅದಲ್ಲದೇ ಪೌಷ್ಟಿಕಾಂಶಯುಕ್ತ ಆರೋಗ್ಯಕರವಾದ ಆಹಾರವನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಮನಸ್ಥಿತಿ ಸುಧಾರಿಸಿಕೊಳ್ಳುವ ಕೆಲಸ ಮಾಡಿ : ನಾವು ಏನು ತಿನ್ನುತ್ತೇವೆ, ಹೇಗೆ ಮಾತನಾಡುತ್ತೇವೆ, ಎಷ್ಟು ನಿದ್ದೆ ಮಾಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಮನಸ್ಥಿತಿಯನ್ನು ಸುಧಾರಿಸಲು, ಪ್ರತಿದಿನ ವ್ಯಾಯಾಮವನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಧ್ಯಾನ ಅಥವಾ ಕನಿಷ್ಠ 30 ನಿಮಿಷಗಳ ಕಾಲ ನಡೆಯುವ ಮೂಲಕ ಮನಸ್ಸಿನ ನೆಮ್ಮದಿಯುತವಾಗಿರಿಸಿಕೊಳ್ಳಬಹುದು.
ಹೆಚ್ಚು ನೀರು ಸೇವನೆ ಹಾಗೂ ನಿದ್ದೆಗೆ ಆದ್ಯತೆ ಇರಲಿ : ನಿಮ್ಮ ದಿನವನ್ನು ತಾಜಾ ಮತ್ತು ಶಕ್ತಿಯುತವಾಗಿರಲು ದಿನಕ್ಕೆ ಇಂತಿಷ್ಟು ಲೋಟ ನೀರು ಕುಡಿಯುವ ಅಭ್ಯಾಸವಿರಲಿ. ಬೆಳಗ್ಗೆದ್ದು ಬಿಸಿಯಾದ ಒಂದು ಲೋಟ ನೀರು ಕುಡಿಯುವ ಅಭ್ಯಾಸವು ಆರೋಗ್ಯವಾಗಿರಿಸುತ್ತದೆ. ಅದಲ್ಲದೇ ದಿನಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ದೇಹವು ಫಿಟ್ ಆಗಿರಲು ಸಹಕಾರಿಯಾಗಿದೆ.