ಬೆಳಿಗ್ಗೆ ಚಹಾ ಕುಡಿಯುವಾಗ ಈ 7 ಸಲಹೆಗಳನ್ನು ಅನುಸರಿಸಿದರೆ ನಿಮ್ಮ ತೂಕ ಕಡಿಮೆಯಾಗುತ್ತೆ! ಟ್ರೈ ಮಾಡಿ ನೋಡಿ
ತೂಕ ಇಳಿಸಿಕೊಳ್ಳಲು ಅನೇಕ ಜನರು ಚಹಾ ಕುಡಿಯುವುದನ್ನು ನಿಲ್ಲಿಸುತ್ತಾರೆ. ಆದರೆ ಚಹಾದಿಂದ ತೂಕ ಇಳಿಕೆಗೆ ಸಹಾಯ ವಾಗುತ್ತದೆ ಎಂದರೆ ನೀವು ನಂಬುತ್ತೀರಾ? ತೂಕ ಇಳಿಸಿಕೊಳ್ಳಲು ಮತ್ತು ಚಹಾ ಕುಡಿಯುವುದಕ್ಕೂ ಏನು ಸಂಬಂಧ ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ.
ಚಹಾ ಪ್ರೇಮಿಗಳಿಗೆ ಇದೊಂದು ಸಿಹಿ ಸುದ್ದಿ. ಏನು ಅಂತೀರಾ? ಸಾಮಾನ್ಯವಾಗಿ ಚಹಾ ಕೇವಲ ಪಾನೀಯ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚಿನ ಪ್ರಯೋಜನ ಹೊಂದಿದೆ. ಅದರ ಸಮೃದ್ಧ ರುಚಿ ಮತ್ತು ಪರಿಮಳ ನಿಮ್ಮ ದಿನಕ್ಕೆ ಹೊಸ ಹುರುಪು ನೀಡುವುದರ ಜೊತೆಗೆ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಸಾಲಾ ಚಹಾವು ಶುಂಠಿ ಮತ್ತು ಏಲಕ್ಕಿಯಂತಹ ಸುವಾಸನೆಯುಕ್ತ ಮಸಾಲೆಗಳೊಂದಿಗೆ ತಯಾರಾಗಿರುತ್ತದೆ ಇವು ದೇಹಕ್ಕೆ ಒಳ್ಳೆಯದು. ಜೊತೆಗೆ ಹೆಚ್ಚು ಸಕ್ಕರೆ ಅಥವಾ ಪೂರ್ಣ ಕೆನೆ ಹಾಲನ್ನು ಸೇರಿಸದೆಯೇ ಚಹಾ ಕುಡಿಯುವುದು ಒಳ್ಳೆಯದು. ಅದಲ್ಲದೆ ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ದೇಹಕ್ಕೂ ಒಳ್ಳೆಯದು. ಇನ್ನು ತೂಕ ನಷ್ಟದ ವಿಷಯಕ್ಕೆ ಬಂದಾಗ, ಜನರು ಚಹಾ ಸೇವನೆಯನ್ನು ಮಿತಿಗೊಳಿಸಲು ಅಥವಾ ನಿಲ್ಲಿಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ಇತ್ತೀಚೆಗೆ, ಪೌಷ್ಟಿಕತಜ್ಞರೊಬ್ಬರು ತೂಕ ಇಳಿಸಿಕೊಳ್ಳಲು, ನೀವು ಚಹಾವನ್ನು ತ್ಯಜಿಸುವ ಅಗತ್ಯವಿಲ್ಲ ಆದರೆ ಬದಲಿಗೆ ಕೆಲವು ಬದಲಾವಣೆಗಳನ್ನು ಮಾಡಿ ಎಂದು ಸಲಹೆಗಳನ್ನು ನೀಡಿದ್ದಾರೆ.
ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ, ಪೌಷ್ಟಿಕತಜ್ಞೆ ಲೀಮಾ ಮಹಾಜನ್ ಎಂಬವರು, ಚಹಾ ಜನರನ್ನು ಏಕೆ ದಪ್ಪವಾಗಿಸುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ ಮತ್ತು ಚಹಾ ಕುಡಿಯುವುದರಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳನ್ನು ಶಿಫಾರಸು ಮಾಡಿದ್ದಾರೆ.
ನಿಮ್ಮ ನಿಯಮಿತ ಚಹಾವು ನಿಮ್ಮನ್ನು ದಪ್ಪವಾಗಿಸುತ್ತದೆಯೇ?
ಚಹಾವು ಕಡಿಮೆ ಕ್ಯಾಲೊರಿ ಹೊಂದಿರುವ ಪಾನೀಯವಾಗಿರುವುದರಿಂದ, ಇದು ನೇರವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಆದರೆ ಚಹಾ ಸೇವನೆಗೆ ಸಂಬಂಧಿಸಿದ ಕೆಲವು ಅಂಶಗಳು ಅಥವಾ ಚಹಾಕ್ಕೆ ಸೇರಿಸಲಾದ ಪದಾರ್ಥಗಳು ಕೆಲವು ಸಂದರ್ಭಗಳಲ್ಲಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಚಹಾವು ನಿಮ್ಮ ತೂಕವನ್ನು ಹೆಚ್ಚಿಸಲು 3 ಕಾರಣಗಳು ಇಲ್ಲಿವೆ:
1. ಪೂರ್ಣ ಕೆನೆ ಹಾಲು:
ಮೊದಲನೆಯದಾಗಿ, ಚಹಾಕ್ಕೆ ಪೂರ್ಣ ಕೆನೆ ಹಾಲನ್ನು ಸೇರಿಸುವುದರಿಂದ ಅದರ ಕ್ಯಾಲೊರಿ ಅಂಶ ಹೆಚ್ಚಾಗುತ್ತದೆ. ಹಾಲಿನಲ್ಲಿ ಕೊಬ್ಬು ಹೆಚ್ಚಾಗಿ ಇರುವುದರಿಂದ ಅದನ್ನು ಅತಿಯಾಗಿ ಸೇವಿಸಿದಾಗ ತೂಕ ಹೆಚ್ಚಾಗುತ್ತದೆ. ಲೀಮಾ ಮಹಾಜನ್ ಹೇಳುವಂತೆ, “ಒಂದು ಕಪ್ ಚಹಾದಲ್ಲಿ 33-66 ಕ್ಯಾಲೊರಿಗಳಿವೆ, ಇದು ಹಾಲಿನ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಅವಲಂಬಿಸಿರುತ್ತದೆ. ಚಹಾದಲ್ಲಿ ನಿಮ್ಮ ದೈನಂದಿನ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು, ನೀವು ಪೂರ್ಣ ಕೆನೆಯ ಬದಲು ಸ್ಕಿಮ್ಡ್ ಹಾಲನ್ನು ಬಳಸಬಹುದು. ಇದರಿಂದ ತೂಕ ಕಡಿಮೆಯಾಗುತ್ತದೆ.
2. ಸಕ್ಕರೆ ಅಂಶ ಹೆಚ್ಚಾಗಿರುವುದು:
“1 ಟೀ ಸ್ಪೂನ್ ಸಕ್ಕರೆಯಲ್ಲಿ ಕೇವಲ 19 ಕ್ಯಾಲೊರಿಗಳಿದೆ ಮತ್ತು 1 ಸ್ಪೂನ್ ( ಸುಮಾರು 3 ಟೀ ಸ್ಪೂನ್) ನಲ್ಲಿ 48 ಕ್ಯಾಲೊರಿಗಳನ್ನು ಹೊಂದಿದೆ. ಪ್ರತಿ ಕಪ್ ಗೆ 20 ಕ್ಯಾಲೊರಿಗಳು ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲವಾದರೂ, ನೀವು ದಿನವಿಡೀ ಸಕ್ಕರೆ ಹಾಕಿದ ಚಹಾವನ್ನು ಅನೇಕ ಭಾರಿ ಕುಡಿಯುವವರಾಗಿದ್ದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬುದನ್ನು ನೆನಪಿನಲ್ಲಿಡಿ” ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಸಕ್ಕರೆ ಇಲ್ಲದೆ ಚಹಾ ಕುಡಿಯುವುದು ಹೇಹಕ್ಕೆ ಒಳ್ಳೆಯದು. ಆದರೆ ಕುಡಿಯಲು ಕಷ್ಟ ಎನಿಸಿದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ಸಕ್ಕರೆ ಸೇರಿಸಿಕೊಳ್ಳಿ.
3. ಅನಾರೋಗ್ಯಕರ ತಿಂಡಿಗಳು:
ಚಹಾದ ಜೊತೆಗೆ ಅನಾರೋಗ್ಯಕರ ತಿಂಡಿಗಳಾದ ಹೆಚ್ಚಿನ ಕ್ಯಾಲೊರಿ ಇರುವ ರಸ್ಕ್ಗಳು, ಬಿಸ್ಕತ್ತುಗಳು ಇದ್ದರೆ, ಅದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಇಂದೇ ಆರೋಗ್ಯಕರ ಉಪಾಹಾರದೊಂದಿಗೆ ಅವುಗಳನ್ನು ಬದಲಿಸಿ. ಹೀಗೆ ಮಾಡಿದಲ್ಲಿ ನಿಮ್ಮ ತೂಕ ಕಡಿಮೆ ಯಾಗುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: ಹಗಲಿನಲ್ಲಿ ಹಣ್ಣು, ರಾತ್ರಿ ರೊಟ್ಟಿ; ಇದು ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಅನುಸರಿಸುವ ಆಹಾರ ಕ್ರಮ
ಚಹಾ ಕುಡಿಯುವುದರೊಂದಿಗೆ ತೂಕ ಇಳಿಸಿಕೊಳ್ಳುವುದು ಹೇಗೆ?
ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ಚಹಾ ಕುಡಿಯುವುದು ಹೇಗೆ ಎಂಬುದರ ಕುರಿತು 7 ಸಲಹೆಗಳು ಇಲ್ಲಿವೆ:
1. ನಿಮ್ಮ ಚಹಾ ಸೇವನೆಯನ್ನು ದಿನಕ್ಕೆ 2 ಕಪ್ ಗಳಿಗೆ ಮಿತಿಗೊಳಿಸಿ:
ತೂಕ ನಷ್ಟದ ವಿಷಯಕ್ಕೆ ಬಂದಾಗ, ಚಹಾ ಸೇವನೆಯನ್ನು ಮಿತಗೊಳಿಸುವುದು ಮುಖ್ಯವಾಗುತ್ತದೆ. ಹೆಚ್ಚೆಚ್ಚು ಭಾರಿ ಚಹಾ ಸೇವನೆಯು ಅತಿಯಾದ ಕೆಫೀನ್ ಮತ್ತು ಇತರ ಸಂಯುಕ್ತಗಳ ಸೇವನೆಗೆ ಕಾರಣವಾಗಬಹುದು, ಅದು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಲೀಮಾ ಮಹಾಜನ್ ಹೇಳುವ ಪ್ರಕಾರ, “ನಿಮ್ಮ ಚಹಾ ಸೇವನೆಯನ್ನು ದಿನಕ್ಕೆ ಎರಡು ಕಪ್ ಗಳಿಗೆ ಸೀಮಿತಗೊಳಿಸುವುದರಿಂದ ಸಮತೋಲನ ಉಂಟಾಗುತ್ತದೆ, ಅದನ್ನು ಅತಿಯಾಗಿ ಸೇವಿಸದೆಯೇ ಸಿಗುವ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ.”
2. ಚಹಾ ಮತ್ತು ಊಟದ ಸಮಯದ ನಡುವೆ ಅಂತರವನ್ನು ಕಾಪಾಡಿಕೊಳ್ಳಿ:
ಊಟದ ಮೊದಲು ಅಥವಾ ನಂತರ ಚಹಾ ಕುಡಿಯುವುದರಿಂದ ಸರಿಯಾದ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗಬಹುದು. ನಿಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಉತ್ತಮಗೊಳಿಸಲು, ಚಹಾ ಸೇವನೆ ಮತ್ತು ನಿಮ್ಮ ಊಟದ ನಡುವೆ ಕನಿಷ್ಠ 30 ನಿಮಿಷಗಳ ಅಂತರವನ್ನು ಕಾಪಾಡಿಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಾರೆ. ಈ ಅಭ್ಯಾಸವು ನಿಮ್ಮ ಆಹಾರದಿಂದ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ನಿಮ್ಮ ದೇಹಕ್ಕೆ ಅನುವು ಮಾಡಿಕೊಡುತ್ತದೆ.
3. ಮಲಗುವ ಸಮಯಕ್ಕೆ ಕುಡಿಯುವ ಚಹಾವನ್ನು ತಪ್ಪಿಸಿ:
ಚಹಾವನ್ನು ಮಲಗುವ ಸಮಯಕ್ಕೆ ತುಂಬಾ ಹತ್ತಿರದಲ್ಲಿ ಸೇವಿಸಿದರೆ ನಿದ್ರೆಯ ಮಾದರಿಗಳು ಮತ್ತು ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ತೂಕ ನಿರ್ವಹಣೆಗೆ ಸಾಕಷ್ಟು ನಿದ್ರೆ ಅತ್ಯಗತ್ಯ ಏಕೆಂದರೆ ಇದು ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ರಾತ್ರಿ ವೇಳೆಯಲ್ಲಿ ಉತ್ತಮ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಹಾಗಾಗಿ ನೀವು ಮಲಗುವ ಸಮಯದ ಕೆಲವು ಗಂಟೆಗಳ ಒಳಗೆ ಚಹಾ ಕುಡಿಯುವುದನ್ನು ತಪ್ಪಿಸಿ.
4. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ:
ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಬಹುದು, ಇದು ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು. ನಿಮ್ಮ ಹೊಟ್ಟೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮವಾಗಲು ಬಿಡದಂತೆ ತಡೆಗಟ್ಟಲು ಲಘು ಊಟ ಅಥವಾ ಆರೋಗ್ಯಕರ ತಿಂಡಿಯ ನಂತರ ಚಹಾ ಸೇವಿಸುವುದು ಸೂಕ್ತ.
5. ಚಹಾಕ್ಕೆ 30 ನಿಮಿಷಗಳ ಮೊದಲು ಮತ್ತು ನಂತರ ನೀರು ಕುಡಿಯಿರಿ:
ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಜಲಸಂಚಯನ ಅತ್ಯಗತ್ಯ. ಹಾಗಾಗಿ “ಚಹಾದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು, ಅದನ್ನು ಸೇವಿಸುವ ಸುಮಾರು 30 ನಿಮಿಷಗಳ ಮೊದಲು ಮತ್ತು ನಂತರ ಒಂದು ಲೋಟ ನೀರನ್ನು ಕುಡಿಯಿರಿ” ಎಂದು ಲೀಮಾ ಮಹಾಜನ್ ಸೂಕ್ತ ಸಲಹೆ ನೀಡುತ್ತಾರೆ. ಈ ಅಭ್ಯಾಸವು ಸರಿಯಾದ ಆರ್ದ್ರತೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
6. ಸ್ಕಿಮ್ಡ್ ಹಾಲನ್ನು ಚಹಾದಲ್ಲಿ ಮಾತ್ರ ಬಳಸಿ:
ನಿಮ್ಮ ಚಹಾಕ್ಕೆ ಹಾಲನ್ನು ಸೇರಿಸಲು ನೀವು ಬಯಸಿದರೆ, ಸ್ಕಿಮ್ಡ್ ಹಾಲು ಅಥವಾ ಕಡಿಮೆ ಕೊಬ್ಬಿನ ಪರ್ಯಾಯಗಳನ್ನು ಆರಿಸಿ. ಪೂರ್ತಿ ಹಾಲು ಅಥವಾ ಕೆನೆಗೆ ಹೋಲಿಸಿದರೆ ಈ ಆಯ್ಕೆಗಳು ಕಡಿಮೆ ಕ್ಯಾಲೊರಿ ಮತ್ತು ಕೊಬ್ಬನ್ನು ಹೊಂದಿರುತ್ತವೆ. ಈ ಸರಳ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ನೀವು ಗಮನಾರ್ಹವಾಗಿ ಕಡಿಮೆ ಮಾಡಬಹುದು.
7. ಕಡಿಮೆ ಸಕ್ಕರೆ ಬಳಸಿ:
ಸಕ್ಕರೆ, ಚಹಾಕ್ಕೆ ಸೇರಿಸಲಾಗುವ ಸಾಮಾನ್ಯ ಘಟಕಾಂಶವಾಗಿದೆ, ಆದರೆ ಇದು ತೂಕ ಹೆಚ್ಚಳಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ತೂಕ ನಷ್ಟವನ್ನು ಉತ್ತೇಜಿಸಲು, ಯಾವುದೇ ಸಿಹಿಕಾರಕಗಳಿಲ್ಲದೆ ಅದನ್ನು ಆನಂದಿಸುವವರೆಗೆ ಒಳ್ಳೆಯದು. ಹಾಗಾಗಿ ಇನ್ನು ಮುಂದೆ ನಿಮ್ಮ ಚಹಾಕ್ಕೆ ಸೇರಿಸುವ ಸಕ್ಕರೆಯ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ. ಪರ್ಯಾಯವಾಗಿ, ನೀವು ಜೇನುತುಪ್ಪ ಅಥವಾ ದೇಸಿ ಖಾಂಡ್ ನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಮಿತವಾಗಿ ಬಳಸಬಹುದು. ಅಥವಾ ಬೆಲ್ಲವನ್ನೂ ಬಳಸಬಹುದು. ಆದ್ದರಿಂದ ಮಹಿಳೆಯರೇ, ಈ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತೂಕ ಇಳಿಸಿಕೊಳ್ಳಲು ಸಹಾಯ ಮಾಡಲು ನಿಮ್ಮ ಚಹಾವನ್ನು ಆರೋಗ್ಯಕರ ಪಾನೀಯವನ್ನಾಗಿ ಮಾಡಿಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: