ಆಹಾರ ಪದಾರ್ಥ ಸಂರಕ್ಷಣೆಗೆ ಸೇರಿಸುವ ರಾಸಾಯನಿಕಗಳು ನಮ್ಮ ದೇಹಕ್ಕೆ ಅಪಾಯಕಾರಿ ಹೇಗೆ? ಇಲ್ಲಿದೆ ಕರುಳು ಹಿಂಡುವ ಮಾಹಿತಿ

ಸಮಾಧಾನಕರ ಸಂಗತಿಯೆಂದರೆ westernised diet ಗೆ ಹೋಲಿಸಿದಲ್ಲಿ ಪ್ರಪಂಚದ ಇತರೆ ಭಾಗಗಳಲ್ಲಿನ ಜನರು ತಿನ್ನುವ ಜಂಕ್​ ಫುಡ್​ನಲ್ಲಿ ಇದು ಅಷ್ಟೊಂದು ಅಡ್ಡ ಪರಿಣಾಮ ಬೀರುವುದಿಲ್ಲವಂತೆ. ಇವರು ಕಡಿಮೆ ಪ್ರಮಾಣದಲ್ಲಿ ಈ ಸಂಸ್ಕರಿತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅಪಾಯಕ್ಕೆ ಸಿಲುಕುವುದಿಲ್ಲವೆನ್ನುತ್ತಾರೆ ಅಧ್ಯಯನಕಾರರು. ಆದ್ದರಿಂದ ಎಂದಿನಂತೆ ನಮ್ಮ ಜಾಗ್ರತೆಯಲ್ಲಿ ನಾವಿದ್ದು, ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಜಂಕ್ ಫುಡ್ ಬಳಸೋಣ, ಎಚ್ಚರವಿರಲಿ.

ಆಹಾರ ಪದಾರ್ಥ ಸಂರಕ್ಷಣೆಗೆ ಸೇರಿಸುವ ರಾಸಾಯನಿಕಗಳು ನಮ್ಮ ದೇಹಕ್ಕೆ ಅಪಾಯಕಾರಿ ಹೇಗೆ? ಇಲ್ಲಿದೆ ಕರುಳು ಹಿಂಡುವ ಮಾಹಿತಿ
ಆಹಾರ ಪದಾರ್ಥಗಳ ಸಂರಕ್ಷಣೆಗೆ ಸೇರಿಸುವ ರಾಸಾಯನಿಕಗಳು ನಮ್ಮ ದೇಹಕ್ಕೆ ಅಪಾಯಕಾರಿ ಹೇಗೆ? ಇಲ್ಲಿದೆ ಕರುಳು ಹಿಂಡುವ ಮಾಹಿತಿ
Follow us
| Edited By: ಸಾಧು ಶ್ರೀನಾಥ್​

Updated on: Apr 06, 2022 | 4:56 PM

ನಾವು ಸೇವಿಸುವ ದಿಢೀರ್ ಆಹಾರ ಪದಾರ್ಥಗಳಿಗೆ ಸೇರಿಸುವ ರಾಸಾಯನಿಕ ಸಂರಕ್ಷಣೆಗಳು ನಮ್ಮ ದೇಹಕ್ಕೆ ಅಪಾಯಕಾರಿ ಎಂಬ ಎಲ್ಲರಿಗೂ ತಿಳಿದಿರುವ ವಿಷಯವೇ. ಸುಮಾರು ಐದಾರು ದಶಕಗಳ ಹಿಂದೆ ಅವು ಬಳಕೆಗೆ ಬಂದಾಗಿನಿಂದಲೂ ಅವುಗಳ ವಿರುದ್ಧ ಬಹುತೇಕರು ಅಪಸ್ವರ ಎತ್ತಿರುವುದು ಸಾಮಾನ್ಯವಾಗಿದೆ. ಆದರೂ ಕೆವರಿಗೆ ಈ ದಿಢೀರ್, ಜಂಕ್​ ಆಹಾರ ಪದಾರ್ಥಗಳು ಹೆಚ್ಚು ಆಪ್ಯಾಯಮಾನ. ಅವು ಇಲ್ಲವೆಂದರೆ ಹೊಟ್ಟೆ ಖಾಲಿ ಮಾಡಿಕೊಂಡು ಬೊಂಬಡಾ ಹೊಡೆಯುವ ಮಂದಿಯೂ ಇದ್ದಾರೆ. ಆದರೆ ಕೆಲವರು ಜಾಣತನದಿಂದ ಅದನ್ನು ಅವಾಯ್ಡ್​ ಮಾಡಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಳ್ಳಲ್ಲ. ಹಾಗಾದರೆ… ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂದರೆ ಏನರ್ಥ, ಈ ಜಂಕ್​ ಫುಡ್​ಗಳು ನಮ್ಮ ದೇಹ ರಚನೆಗೆ ಒಗ್ಗುವುದಿಲ್ಲವೇ, ನಮ್ಮ ದೇಹ ರಚನೆ- ಆರೋಗ್ಯವನ್ನೇ ಛಿದ್ರಗೊಳಿಸುತ್ತಿದೆಯಾ ಎಂದು ಆತಂಕದಿಂದ ಕೇಳುವ ಮಂದಿಗೆ ಇಲ್ಲಿದೆ ಸವಿಸ್ತಾರ ತಾಜಾ ಅಧ್ಯಯನ ವರದಿ. ಹೌದು ತಡವಾಗಿಯಾದರೂ ಇತ್ತೀಚೆಗೆ ಜನ ಎಚ್ಚೆತ್ತುಕೊಂಡು, ಜಂಕ್​ ಫುಡ್​ (westernised diet) ಜನರ ಆರೋಗ್ಯಕ್ಕೆ ಅಪಾಯಕಾರಿ-ಮಾರಕ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಇಂತಹ ಅಧ್ಯಯನ ವರದಿಗಳು ಜನರ ಬದಲಾದ ದೃಷ್ಟಿಕೋನಕ್ಕೆ ಹೇತುವಾಗಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ (Food additives).

ಇಷ್ಟಕ್ಕೂ ಏನಿದು Food additives ಅಂದರೆ ಎಂಬುದನ್ನು ನೋಡಿದಾಗ ಆಹಾರ ಪದಾರ್ಥದ ರುಚಿ ಹೆಚ್ಚಿಸಲು, ಆಕರ್ಷಕ ರೂಪ ನೀಡಲು ಮತ್ತಿತರ ರಸ ಗುಣಗಳ್ನು ಹೆಚ್ಚಿಸಲು ಬಳಸುವ ಕೃತಕ, ರಾಸಾಯನಿಕ ಅಂಶಗಳು. ಇನ್ನು ಬೇಕರಿ ಪದಾರ್ಥಗಳು, ಐಸ್​ ಕ್ರೀಮ್​ ಮುಂತಾದ ರೆಡಿ ಮೇಡ್​ ಫುಡ್​ ಗಳಲ್ಲಿ ಬಳಸುವ ಈ Food additives ನೇರವಾಗಿ ಕರುಳಿಗೆ ತಲುಪಿ, ಅದರ ಸ್ವಾಸ್ತ್ಯವನ್ನೇ ಛಿದ್ರಗೊಳಿಸಿಬಿಡುತ್ತದೆ ಅನ್ನುತ್ತಿದೆ ಲಂಡನ್​ನ ತಾಜಾ ಅಧ್ಯಯನ ವರದಿಯೊಂದು. ಗಮನಾರ್ಹವೆಂದರೆ ಈ edible food additive ಒಂದು ಪ್ರಮಾಣದ ಮಟ್ಟಿಗೆ ಸ್ವೀಕಾರಾರ್ಹವೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಮಾನದಂಡಗಳನ್ನು ನಿಗದಿಪಡಿಸಿದೆ. ಇದರ ಹೊರತಾಗಿಯೂ ನಿರಂತರವಾಗಿ ಮತ್ತು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ Food additives ಹೊಟ್ಟೆಯೊಳಕ್ಕೆ ಇಳಿದರೆ.. ಅದರಿಂದ ಕರುಳಿನ ಸ್ವಾಸ್ಥ್ಯಕ್ಕೆ (human gut) ಅಪಾಯವೆಂಬುದು ಕಟ್ಟಿಟ್ಟ ಬುತ್ತಿ.

ಪಾಶ್ಚಿಮಾತ್ಯ ಆಹಾರ ಪದ್ಧತಿಯಾದ westernised diet ಮೂಲಕ ಅಧಿಕ ಪ್ರಮಾಣದಲ್ಲಿ ಹೊಟ್ಟೆ ಸೇರುವ ಈ food additives ಕರುಳಿಗೆ ತಲುಪುತ್ತಿದ್ದಂತೆ ಅಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು, ಸೂಕ್ಷ್ಮ ಜೀವಿಗಳ ಮೇಲೆ ಆಕ್ರಮಣ ಮಾಡಿ, ಅವುಗಳನ್ನು ನಿಸ್ತೇಜಗೊಳಿಸುತ್ತದೆ. ಅಲ್ಲಿಗೆ ಕರುಳಿನ ಸ್ವಾಸ್ಥ್ಯ ಕಾಪಾಡಬಲ್ಲ ಬ್ಯಾಕ್ಟೀರಿಯಾಗಳು ನಶಿಸುತ್ತಿದ್ದಂತೆ ಕರುಳಿನ ಕತೆ ಏನಾಗಬೇಡ, ಅಲ್ಲವಾ? ಇದನ್ನೆ ಈಗಿನ ಅಧ್ಯಯನ ವರದಿ ಹೇಳುತ್ತಿರುವುದು. ಆರಂಭದಲ್ಲಿ ಈ food additives ಗಳು ಮನುಷ್ಯನ ಸ್ವಾಸ್ಥ್ಯವನ್ನು ಹಾಳುಮಾಡುವುದಿಲ್ಲ ಎಂದೇ ಬಗೆಯಲಾಗಿತ್ತು. ಆದರೆ ಬರುಬರುತ್ತಾ ಅವುಗಳ ಬಳಕೆ ಪ್ರಮಾಣ ಮಿತಿ ಮೀರಿರುವುದರಿಂದ ಅವು ನೇರವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತಿವೆ ಎನ್ನುತ್ತಿದೆ ಈ ಅಧ್ಯಯನ ವರದಿ.

ಜೊತೆಗೆ ಆರಂಭದಲ್ಲಿ ಐದಾರು ದಶಕಗಳ ಹಿಂದೆ ಇದನ್ನು ಬಳಕೆಗೆ ಬಿಟ್ಟಾಗ xanthan gum ಎಂಬ food additives ಆಹಾರದ ಜೊತೆ ಹೊಟ್ಟೆಯೊಳಕ್ಕೆ ಹೋಗಿ, ದೇಹ ರಚನೆಗೆ ಯಾವುದೇ ಬಾಧಕವಾಗದೆ ನೇರವಾಗಿ ಹೊರಬರುತ್ತಿತ್ತುಎನ್ನಲಾಗಿದೆ. ಆದರೆ ಇತ್ತೀಚೆಗೆ ಇದೂ ಹಾದಿ ತಪ್ಪಿದ್ದು, ತನ್ನ ಹಾದಿಯಲ್ಲಿ ಬರುವ ದೇಹದ ಭಾಗಗಳನ್ನು ಅದರಲ್ಲೂ ಕರುಳನ್ನು ಹಾಳು ಮಾಡಿ ಹೊರಬರುತ್ತಿದೆ ಎನ್ನುತ್ತದೆ ಈ ಅಧ್ಯಯನ. ಸಮಾಧಾನಕರ ಸಂಗತಿಯೆಂದರೆ westernised diet ಗೆ ಹೋಲಿಸಿದಲ್ಲಿ ಪ್ರಪಂಚದ ಇತರೆ ಭಾಗಗಳಲ್ಲಿನ ಜನರು (indigenous people) ತಿನ್ನುವ ಜಂಕ್​ ಫುಡ್​ನಲ್ಲಿ ಇದು ಅಷ್ಟೊಂದು ಅಡ್ಡ ಪರಿಣಾಮ ಬೀರುವುದಿಲ್ಲವಂತೆ. ಇವರು ಕಡಿಮೆ ಪ್ರಮಾಣದಲ್ಲಿ ಈ ಸಂಸ್ಕರಿತ ಆಹಾರ ಪದಾರ್ಥಗಳನ್ನು (processed foods) ಸೇವಿಸುವುದರಿಂದ ಅಪಾಯಕ್ಕೆ ಸಿಲುಕುವುದಿಲ್ಲವೆನ್ನುತ್ತಾರೆ ಅಧ್ಯಯನಕಾರರು. ಆದ್ದರಿಂದ ಎಂದಿನಂತೆ ನಮ್ಮ ಜಾಗ್ರತೆಯಲ್ಲಿ ನಾವಿದ್ದು, ಆದಷ್ಟೂ ಕಡಿಮೆ ಪ್ರಮಾಣದಲ್ಲಿ ಜಂಕ್ ಫುಡ್ ಬಳಸೋಣ, ಎಚ್ಚರವಿರಲಿ.

ತಾಜಾ ಸುದ್ದಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ