ಹೇರ್ ಸ್ಟ್ರೈಟನಿಂಗ್, ಹೇರ್ ಕಲರಿಂಗ್ ಮತ್ತು ಹೇರ್ ಸ್ಮೂಥನಿಂಗ್ ಈ 3 ವಿಷಯಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ನಲ್ಲಿವೆ. ಎಲ್ಲರೂ ಇವುಗಳನ್ನು ಮಾಡಿಸಿಕೊಂಡು ತಮ್ಮ ಕೂದಲಿಗೆ ಹೊಸ ರೂಪ ನೀಡುತ್ತಿದ್ದಾರೆ. ಆದರೆ, FDA ಇತ್ತೀಚೆಗೆ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ಕೂದಲನ್ನು ಸ್ಮೂಥನಿಂಗ್ ಮಾಡುವ ಉತ್ಪನ್ನಗಳಲ್ಲಿ ಬಳಸಲಾಗುವ ಫಾರ್ಮಾಲ್ಡಿಹೈಡ್ ಮತ್ತು ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳನ್ನು ನಿಷೇಧಿಸಿದೆ. ಆದರೆ, ಈ ಕೂದಲಿನ ಉತ್ಪನ್ನಗಳು ಏಕೆ ಮತ್ತು ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಈ ಬಗ್ಗೆ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಹಿರಿಯ ಸಲಹೆಗಾರರಾದ ಡಾ. ರಜಿತ್ ಚನಾನ ಮಾಹಿತಿ ನೀಡಿದ್ದಾರೆ. ಕೂದಲನ್ನು ಸ್ಟ್ರೈಟನಿಂಗ್ ಮಾಡುವುದು, ಕಲರಿಂಗ್ ಮಾಡಿಸುವುದು ಕ್ಯಾನ್ಸರ್ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Lung Cancer: ಸಿಗರೇಟ್ ಸೇದದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರುತ್ತಾ?
ಎಫ್‌ಡಿಎಯು ಫಾರ್ಮಾಲ್ಡಿಹೈಡ್ ಮತ್ತು ಫಾರ್ಮಾಲ್ಡಿಹೈಡ್-ಬಿಡುಗಡೆ ಮಾಡುವ ರಾಸಾಯನಿಕಗಳ ಮೇಲೆ ನಿಷೇಧ ಹೇರಿದೆ. ಇದನ್ನು ಕೂದಲನ್ನು ರೇಷ್ಮೆಯಂತೆ ಸ್ಮೂತ್ ಮಾಡುವ ಮತ್ತು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಈ ರೀತಿಯ ಕೆಲವು ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳ ಬಳಕೆಯಿಂದ ಗಂಭೀರವಾದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಮಸ್ಯೆಗಳ ಸಾಧ್ಯತೆಯಿದೆ. ಈ ಉತ್ಪನ್ನಗಳು ಫಾರ್ಮಾಲ್ಡಿಹೈಡ್ ಅನ್ನು ಹೊಂದಿರುತ್ತವೆ. ಇದು ಹೊಗೆಯೊಂದಿಗೆ ಸಂಪರ್ಕಕ್ಕೆ ಬಂದಾಗ ಕಣ್ಣು, ಮೂಗು ಮತ್ತು ಗಂಟಲಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸಬಹುದು.
ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯ:
ಈ ಕೂದಲ ಉತ್ಪನ್ನಗಳು ಗರ್ಭಾಶಯದ ಅಥವಾ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇದಕ್ಕೆ ಸಂಬಂಧಿಸಿದಂತೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್ ರೆಕಾರ್ಡ್) 2022ರ ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ರಾಸಾಯನಿಕಗಳ ಹೊಗೆಯು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ. ಗರ್ಭಾಶಯದ ಒಳಪದರವಾಗಿರುವ ಎಂಡೊಮೆಟ್ರಿಯಂನ ಅಂಗಾಂಶಗಳಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಂಡಾಗ ಈ ಕ್ಯಾನ್ಸರ್ ಸಂಭವಿಸುತ್ತದೆ. ಫಾರ್ಮಾಲ್ಡಿಹೈಡ್ ಈ ಕ್ಯಾನ್ಸರ್ ಕೋಶಗಳನ್ನು ಪ್ರಚೋದಿಸುತ್ತದೆ.
ಹೇರ್ ಕಲರಿಂಗ್ನಿಂದ ಮೂತ್ರಕೋಶದ ಕ್ಯಾನ್ಸರ್ ಅಪಾಯ:
ಮತ್ತೊಂದು ಸಂಶೋಧನೆಯು ಹೇರ್ ಡೈ ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ. ಸುಮಾರು 80% ಹೇರ್ ಡೈ ಉತ್ಪನ್ನಗಳನ್ನು ಹೈಡ್ರೋಜನ್ ಪೆರಾಕ್ಸೈಡ್‌ನಿಂದ ತಯಾರಿಸಲಾಗುತ್ತದೆ. ಇದು ಗಾಳಿಗುಳ್ಳೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕಾರ್ಸಿನೋಜೆನಿಕ್ ಸೂತ್ರೀಕರಣವಾಗಿದೆ.
ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್ಗೂ ಕಾರಣವಾದೀತು ಎಚ್ಚರ!
ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ:
ಹೇರ್ ಡೈಗಳು, ಸ್ಟ್ರೈಟ್‌ನರ್‌ಗಳು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕಾರ್ಸಿನೋಜೆನಿಕ್ ಏಜೆಂಟ್‌ಗಳನ್ನು ಹೊಂದಿರುತ್ತವೆ. ಈ ಉತ್ಪನ್ನಗಳು ಕೂದಲು ಮತ್ತು ನೆತ್ತಿಯಿಂದ ಹೀರಲ್ಪಡುತ್ತವೆ ಮತ್ತು ದೇಹವನ್ನು ತಲುಪುತ್ತವೆ. ಫಾರ್ಮಾಲಿನ್, ಮೀಥೇನ್, ಮೆಥನೆಡಿಯೋಲ್, ಫಾರ್ಮಾಲ್ಡಿಹೈಡ್ ಮೊನೊಹೈಡ್ರೇಟ್ ಈ ಉತ್ಪನ್ನಗಳನ್ನು ಬಿಸಿ ಮಾಡಿದಾಗ ಫ್ಲಾಟ್-ಪ್ರೆಸ್ಸಿಂಗ್ ಅಥವಾ ಬ್ಲೋ-ಡ್ರೈಯಿಂಗ್ ಸಮಯದಲ್ಲಿ ಫಾರ್ಮಾಲ್ಡಿಹೈಡ್ ಬಿಡುಗಡೆಯಾಗುತ್ತದೆ. ಇದು ಕ್ಯಾನ್ಸರ್ ಅನ್ನು ಪ್ರಚೋದಿಸುತ್ತದೆ. ಇದಲ್ಲದೆ, ಇದು ಜೀವಕೋಶಗಳ ಆರೋಗ್ಯಕರ ಅನುಕ್ರಮದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಾರ್ಮೋನುಗಳ ಆರೋಗ್ಯ ಹಾಗೂ ಉತ್ತಮ ರಾಡಿಕಲ್ಗಳನ್ನು ಹೆಚ್ಚಿಸುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Thu, 4 January 24