Hair Care Tips: ಆರೋಗ್ಯಕರ ಮತ್ತು ಹೊಳೆಯುವ ಕೂದಲಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು!

ಪ್ರತಿಯೊಬ್ಬರೂ ರೇಷ್ಮೆಯಂತಹ, ಹೊಳೆಯುವ, ಉದ್ದವಾದ, ಸುಂದರವಾದ ಉದ್ದನೆಯ ಕೂದಲನ್ನು ಹೊಂದಲು ಆಸೆ ಪಡುತ್ತಾರೆ. ಮಹಿಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತದೆ.

Hair Care Tips: ಆರೋಗ್ಯಕರ ಮತ್ತು ಹೊಳೆಯುವ ಕೂದಲಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 26, 2022 | 10:17 PM

ಪ್ರತಿಯೊಬ್ಬರೂ ರೇಷ್ಮೆಯಂತಹ, ಹೊಳೆಯುವ, ಉದ್ದವಾದ, ಸುಂದರವಾದ ಉದ್ದನೆಯ ಕೂದಲನ್ನು (Hair) ಹೊಂದಲು ಆಸೆ ಪಡುತ್ತಾರೆ. ಮಹಿಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಉದ್ದನೆಯ ಕೂದಲನ್ನು ನೋಡಿ ಅದೆಷ್ಟೋ ಹುಡುಗರು ಮರಳಾಗಿದ್ದಾರೆ. ಮಹಿಳೆಯರು ಕೂಡ ತಮ್ಮ ಕೂದಲಿನ ಆರೈಕೆಗೆ ವಿಶೇಷ ಗಮನ ನೀಡುತ್ತಾರೆ. ನೀವು ಹೊಳೆಯುವ ಮತ್ತು ಮೃದುವಾದ ಕೂದಲನ್ನು ಹೊಂದಿದ್ದರೆ, ಹಲವಾರು ರೀತಿಯ ಕೇಶವಿನ್ಯಾಸವನ್ನು ಮಾಡಬಹುದು. ಅದಕ್ಕಾಗಿಯೇ ಮಹಿಳೆಯರು ವಿವಿಧ ಉತ್ಪನ್ನಗಳನ್ನು ಬಳಸಿ ತಮ್ಮ ಕೂದಲನ್ನು ರಕ್ಷಿಸಿಕೊಳ್ಳುತ್ತಾರೆ.  ಆದಾಗ್ಯೂ, ಇಂದಿನ ಹವಾಮಾನ ಮಾಲಿನ್ಯ ಮತ್ತು ಬಿಡುವಿಲ್ಲದ ಜೀವನದಲ್ಲಿ, ಅನೇಕ ಜನರು ಕೂದಲು ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂದಲು ತನ್ನ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಸರಳವಾದ ಮನೆಮದ್ದುಗಳನ್ನು ಉಪಯೋಗಿಸಿ ಹೊಳೆಯುವ ಮತ್ತು ಮೃದುವಾದ ಕೂದಲನ್ನು ಹೇಗೆ ಪಡೆಯುವುದು ಎಂದು ಈ ಲೇಖನದ ಮೂಲಕ ತಿಳಿಯಬಹುದು.

ಮೊಟ್ಟೆ: ಆರೋಗ್ಯಕರ, ಹೊಳೆಯುವ ಕೂದಲಿಗೆ ಮೊಟ್ಟೆಯನ್ನು ಬಳಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ಗಳು, ಕೊಬ್ಬಿನಾಮ್ಲಗಳು ಮತ್ತು ಲೆಕ್ಟಿನ್ಗಳು ಸಮೃದ್ಧವಾಗಿವೆ. ಇವು ಕೂದಲನ್ನು ಆರೋಗ್ಯಕರವಾಗಿಸುತ್ತದೆ. ಇದರಲ್ಲಿ ಆಲಿವ್ ಎಣ್ಣೆಯನ್ನು ಸೇರಿಸುವುದರೊಂದಿಗೆ ಪರಿಣಾಮವು ಹೆಚ್ಚು ವೇಗವಾಗಿ ಕಂಡುಬರುತ್ತದೆ.

ಬಿಯರ್: ನಿಮ್ಮ ಕೂದಲು ಹೊಳಪು ಕಳೆದುಕೊಂಡಿದ್ದರೆ ಮತ್ತು ಆ ಹೊಳಪನ್ನು ಮರಳಿ ಪಡೆಯಲು ನೀವು ಬಯಸುವುದಾದರೆ ‘ಬಿಯರ್’ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಕೂದಲ ರಕ್ಷಣೆಗೂ ಬಿಯರ್ ಬಳಸಬಹುದಾಗಿದೆ. ಬಿಯರ್ ಹಲವರಿಗೆ ಹೇರ್ ಟಾನಿಕ್​ನಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಪ್ರೊಟೀನ್‌ಗಳು ಕೂದಲನ್ನು ರಕ್ಷಿಸುತ್ತದೆ. ಇದು ಕೂದಲಿನ ಹೊಳಪನ್ನು ಮರುಕಳಿಸುತ್ತದೆ.

ತೆಂಗಿನ ಎಣ್ಣೆ: ಕೂದಲಿನ ಆರೈಕೆಗೆ ತೆಂಗಿನೆಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಮೃದು ಮತ್ತು ಹೊಳೆಯುತ್ತದೆ. ಕೂದಲಿಗೆ ಹೊಸ ಶಕ್ತಿ ನೀಡುತ್ತದೆ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಇದ್ದು, ಇದು ಕೂದಲನ್ನು ತೇವಗೊಳಿಸುತ್ತದೆ. ಶುಷ್ಕತೆಯನ್ನು ತಡೆಯುತ್ತದೆ.

ಜೇನು ತುಪ್ಪ: ಕೂದಲಿನ ಆರೈಕೆಗೂ ಜೇನುತುಪ್ಪವನ್ನು ಬಳಸಬಹುದು. ಜೇನುತುಪ್ಪವು ಕೂದಲನ್ನು ಮೃದುಗೊಳಿಸುವಲ್ಲಿ ಸಹಕರಿಸುತ್ತದೆ. ಇದನ್ನು ಮೊಸರಿನ ಜೊತೆಗೆ ಹಚ್ಚಿದರೆ ಹೆಚ್ಚಿನ ಲಾಭವಾಗುತ್ತದೆ ಎನ್ನುತ್ತಾರೆ ತಜ್ಞರು.

ಮತ್ತಷ್ಟು ಜೀವನಶೈಲಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ