Relationship: ನಿಮ್ಮವರ ಜತೆ ಮುದ್ದಾಡುವುದು ಆರೋಗ್ಯಕ್ಕೆ ಒಳ್ಳೆಯದು: ತಜ್ಞರು ಅಭಿಪ್ರಾಯ ಇಲ್ಲಿದೆ

|

Updated on: Feb 15, 2023 | 4:13 PM

ಆಕ್ಸಿಟೋಸಿನ್‌ನನ್ನು ಬಿಡುಗಡೆ ಮಾಡುವುದರಿಂದ ಹಿಡಿದು ನರಮಂಡಲವನ್ನು ಶಾಂತಗೊಳಿಸುವವರೆಗೆ, ಮುದ್ದಾಡುವುದು ಆರೋಗ್ಯಕ್ಕೆ ಒಳ್ಳೆಯದು. ಮುದ್ದಾಡುವಿಕೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿವೆ.

Relationship: ನಿಮ್ಮವರ ಜತೆ ಮುದ್ದಾಡುವುದು ಆರೋಗ್ಯಕ್ಕೆ ಒಳ್ಳೆಯದು: ತಜ್ಞರು ಅಭಿಪ್ರಾಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಆಕ್ಸಿಟೋಸಿನ್‌ನನ್ನು ಬಿಡುಗಡೆ ಮಾಡುವುದರಿಂದ ಹಿಡಿದು ನರಮಂಡಲವನ್ನು ಶಾಂತಗೊಳಿಸುವವರೆಗೆ, ಮುದ್ದಾಡುವುದು ಆರೋಗ್ಯಕ್ಕೆ ಒಳ್ಳೆಯದು. ಮುದ್ದಾಡುವಿಕೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿವೆ. ಪ್ರೇಮ ಸಂಬಂಧದಲ್ಲಿ ಭಾವನೆಗಳು ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಮೂಲಭೂತ ವಿಧಾನಗಳಲ್ಲಿ ಮುದ್ದಾಡುವಿಕೆಯೂ ಒಂದು. ಇಬ್ಬರು ವ್ಯಕ್ತಿಗಳು ಪ್ರೀತಿಯಲ್ಲಿ ಬಿದ್ದಾಗ ಮತ್ತು ಒಟ್ಟಿಗೆ ಇರಲು ನಿರ್ಧರಿಸಿದಾಗ, ಅವರು ಆಗಾಗ್ಗೆ ತಮ್ಮ ಪ್ರೀತಿಯ ಭಾವನೆಯನ್ನು ಪರಸ್ಪರ ಆಲಿಂಗನದ ಮೂಲಕ ವ್ಯಕ್ತಪಡಿಸುತ್ತಾರೆ. ಮನುಷ್ಯರು ಹತಾಶೆ ಮತ್ತು ಸಂತೋಷದ ಸಮಯದಲ್ಲಿ ತಮ್ಮ ಆತ್ಮೀಯರನ್ನು ಅಪ್ಪಿಕೊಳ್ಳುವುದರೊಂದಿಗೆ ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳುತ್ತಾರೆ. ನಾವು ಹುಟ್ಟಿದಾಗಿನಿಂದಲೂ ನಮ್ಮ ಪ್ರೀತಿಪಾತ್ರರ ಭೌತಿಕ ಉಪಸ್ಥಿತಿಯ ಜೊತೆ ಇರಲು ನಾವು ಬಯಸುತ್ತೇವೆ. ಹಾಗೂ ನಾವು ಬೆಳೆದು ಪ್ರೀತಿಯ ಸಂಬಂಧದಲ್ಲಿ ಬಿದ್ದಾಗ ನಮ್ಮ ಆಲಿಂಗನದ ಮೂಲಕ ಪ್ರೀತಿಯನ್ನು ತೋರುತ್ತೇವೆ.

ಇದನ್ನು ಉದ್ದೇಶಿಸಿ ಮನಶಾಸ್ರ್ತಜ್ಞೆ ನಿಕೋಲ್ ಲೆಪೆರಾ ಅವರು ತಮ್ಮ ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ನಮಗೂ ದೈಹಿಕ ಸ್ಪರ್ಶ ಮತ್ತು ಸಂಪರ್ಕದ ಅಗತ್ಯವಿದೆ. ಹಾಗೂ ಸ್ವಯಂ ಸ್ಪರ್ಶವೂ ಮುಖ್ಯವಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಹಾಗೂ ಮುದ್ದಾಡುವುದು ನಮಗೆ ಏಕೆ ಒಳ್ಳೆಯದು ಮತ್ತು ಅದು ನಮ್ಮ ನರಮಂಡಲದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಎಂಬುದನ್ನು ಕೂಡಾ ಅವರು ಹೇಳಿದರು.

ಇದನ್ನೂ ಓದಿ:ಉತ್ತಮ ಸಂಬಂಧವನ್ನು ಸೃಷ್ಟಿ ಮಾಡಿಕೊಳ್ಳುವುದು ಹೇಗೆ? ನಿಮ್ಮ ಸಂಗಾತಿಯನ್ನು ಹೀಗೆ ಅರ್ಥಮಾಡಿಕೊಳ್ಳಿ

ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ: ದೀರ್ಘಕಾಲದ ಒತ್ತಡವು ಹೆಚ್ಚಿನ ಕಾರ್ಟಿಸೋಲ್‌ನ್ನು ಸೃಷ್ಟಿಸುತ್ತದೆ. ಈ ಒತ್ತಡದ ಹಾರ್ಮೋನ್ ನಮ್ಮಲ್ಲಿ ಕೋಪದ ಭಾವನೆಯನ್ನು ಮೂಡಿಸುತ್ತದೆ. ಮುದ್ದಾಡುವಿಕೆಯು ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಕ್ಸಿಟೋಸಿಸ್ ಬಿಡುಗಡೆ ಮಾಡುತ್ತದೆ: ಮುದ್ದಾಡುವಿಕೆಯು ಆಕ್ಸಿಟೋಸಿನ್‌ನನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ ಎಂದು ಕರೆಯುತ್ತಾರೆ. ಇದು ಮನಸ್ಸು ಮತ್ತು ದೇಹದೊಳಗೆ ಹಿತವಾದ ಭಾವನೆಯನ್ನು ಉಂಟುಮಾಡುತ್ತದೆ. ಒತ್ತಡ ಮತ್ತು ಆತಂಕದ ಭಾವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನರಮಂಡಲವನ್ನು ಶಾಂತಗೊಳಿಸುತ್ತದೆ: ದೈಹಿಕ ಸ್ಪರ್ಶವು ದೇಹಕ್ಕೆ ಸುರಕ್ಷತೆ ಮತ್ತು ಭದ್ರತೆಯ ಸಂಕೇತಗಳನ್ನು ಕಳುಹಿಸಲು ಸಹಾಯ ಮಾಡುತ್ತದೆ. ಅದು ನರಮಂಡಲವನ್ನು ಶಾಂತಗೊಳಿಸುತ್ತದೆ.

ಸ್ವಯಂ ಸ್ಪರ್ಶ: ಮುದ್ದಾಡಲು ಯಾರು ಇಲ್ಲದಿದ್ದಾಗ, ಹಿತವಾದ ಸ್ವಯಂ ಸ್ಪರ್ಶವು ದೇಹ ಮತ್ತು ಮನಸ್ಸನ್ನು ಆರಾಮವಾಗಿಸಲು ಸಹಾಯ ಮಾಡುತ್ತದೆ.

Published On - 4:13 pm, Wed, 15 February 23