Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care Tips: ಪಾರ್ಲರ್​ಗೆ ಹೋಗದೆ ಮುಖದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈ ವಿಧಾನಗಳನ್ನು ಅನುಸರಿಸಿ

ಚರ್ಮದ  ಸುರಕ್ಷತೆಗೆ ಬೇಕಾದ ವಸ್ತುಗಳಿಗೆ ಮಾರುಕಟ್ಟೆಯ ಮೊರಹೋಗುವುದಕ್ಕಿಂತ ಸರಳ ವಿಧಾಗಳನ್ನು ಅನುಸರಿಸಿ ತ್ವಚೆಯ ಕಾಂತಿಯನ್ನು ರಕ್ಷಿಸಿಕೊಳ್ಳಿ.

Skin Care Tips: ಪಾರ್ಲರ್​ಗೆ ಹೋಗದೆ ಮುಖದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈ ವಿಧಾನಗಳನ್ನು ಅನುಸರಿಸಿ
ಸಂಗ್ರಹ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 23, 2021 | 1:18 PM

ಅಂದವಾದ ಚರ್ಮ ಎಲ್ಲರಿಗೂ ಬೇಕು. ಅದಕ್ಕಾಗಿ ಹಲವು ರೀತಿಯ ಪ್ರಯೋಗಗಳನ್ನು ಮಾಡುತ್ತೇವೆ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಕ್ರೀಮ್​, ಬಾಡಿಲೋಷನ್​ಗಳನ್ನು ಬಳಸುತ್ತೇವೆ. ಅದರಲ್ಲೂ ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತೀರಾ ಕಷ್ಟ. ಚಳಿಗೆ ಒಡೆದ ಚರ್ಮ, ಸುಕ್ಕುಗಟ್ಟಿದ ತ್ವಚೆ ಚರ್ಮದ ಕಾಂತಿಯನ್ನು ಹೋಗಲಾಡಿಸುತ್ತದೆ. ಅಲ್ಲದೇ ಹೊರಗಿನ ಧೂಳು, ಹೊಗೆ ತುಂಬಿ ಚರ್ಮ ಬಣ್ಣವನ್ನು ಕಳೆದುಕೊಳ್ಳುತ್ತದೆ. ಅದರ ಜತೆಗೆ ಕೆಲಸದ ಒತ್ತಡ, ನಿದ್ದೆಯ ಕೊರತೆ, ಅತಿಯಾಗಿ ಮೊಬೈಲ್ ಅಥವಾ ಕಂಪ್ಯೂಟರ್​ ನೋಡುವುದರಿಂದಲೂ ಚರ್ಮ ಸುಕ್ಕುಗಟ್ಟಿ ಕಾಂತಿಯನ್ನು ಕಳೆದುಕೊಳ್ಳುತ್ತದೆ.

ಆದ್ದರಿಂದ ಚರ್ಮದ  ಸುರಕ್ಷತೆಗೆ ಬೇಕಾದ ವಸ್ತುಗಳಿಗೆ ಮಾರುಕಟ್ಟೆಯ ಮೊರಹೋಗುವುದಕ್ಕಿಂತ ಸರಳ ವಿಧಾಗಳನ್ನು ಅನುಸರಿಸಿ ತ್ವಚೆಯ ಕಾಂತಿಯನ್ನು ರಕ್ಷಿಸಿಕೊಳ್ಳಿ.

ನಿಂಬೆ ಹಣ್ಣಿ ರಸದ ಬಳಕೆ ಪಾರ್ಲರ್​ಗಳಿಗೆ ಹೋಗಿ ಕಾಂತಿಕಳೆದುಕೊಂಡ ತ್ವಚೆಗೆ ಬ್ಲೀಚಿಂಗ್​ ಮಾಡಿಕೊಳ್ಳುವುದರ ಬದಲು ನಿಂಬೆ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸಿಕೊಳ್ಳಿ ಚರ್ಮದಲ್ಲಿರುವ ಕೊಳೆಯನ್ನೂ ಹೋಗಲಾಡಿಸುತ್ತದೆ.

ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಿ ಬಿಸಿಲಿನಲ್ಲಿ ಓಡಾಡುವ ಮುನ್ನ ನಿಮ್ಮ ಚರ್ಮದ ಬಗ್ಗೆ ಗಮನವಹಿಸಿ. ಸುಡುವ ಬಿಸಿಲಿಗೆ ನಿಮ್ಮ ಚರ್ಮ ಟ್ಯಾನ್​ ಆಗಿ ಕಳೆಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ಸ್ಕಾರ್ಪ್​ ಧರಿಸಿ. ಸನ್​ಸ್ಕ್ರೀನ್​ ಅನ್ನು ಮರೆಯದೇ ಬಳಸಿ. ಆದರೆ ನೆನಪಿಡಿ 25 ಮತ್ತು ಅದಕ್ಕಿಂತ ಹೆಚ್ಚಿನ SPF ಹೊಂದಿರುವ ಸನ್‌ಸ್ಕ್ರೀನ್ ಅನ್ನು ಆಯ್ಕೆಮಾಡಿ.

ಟೀ ಬ್ಯಾಗ್​ ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಯನ್ನು ಟೀ ಬ್ಯಾಗ್​ ಹೋಗಲಾಡಿಸುತ್ತದೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಸ್ವಲ್ಪ ಸಮಯದವರೆಗೆ ಪ್ರಿಡ್ಜ್​ನಲ್ಲಿರಿಸಿದ ಟೀ ಬ್ಯಾಗ್​ ಬಳಕೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಎಳ್ಳೆಣ್ಣೆ ಬಳಕೆ ಎಳ್ಳೆಣ್ಣೆ ನಿಮ್ಮ ಚರ್ಮದ ಕಾಂತಿಗೆ ಉತ್ತಮ ಪದಾರ್ಥವಾಗಿದೆ. ತ್ವಚೆ ಡ್ರೈ ಎನಿಸಿದರೆ ಸ್ವಲ್ಪ ಹಾಲಿಗೆ ಅರ್ಧ ಚಮಚ ಎಳ್ಳೆಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ, ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಎಳ್ಳೆಣ್ಣೆ ಸೂರ್ಯನ ಹಾನಿಗೆ ಅತ್ಯುತ್ತಮ ಪರಿಹಾರವಾಗಿದೆ. ಇದು ಕ್ರಮೇಣ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ತಣ್ಣನೆಯ ಹಾಲು ಹಾಲಿನಲ್ಲಿರುವ ಪೋಷಕಾಂಶ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಜತೆಗೆ ಕಪ್ಪು ವರ್ತುಲಗಳನ್ನು ಕೂಡ ತೆಗೆದುಹಾಕುತ್ತದೆ. ಹತ್ತಿಯಿಂದ ನಿಮ್ಮ ಮುಖಕ್ಕೆ ದಿನಕ್ಕೆರಡು ಬಾರಿ ಹಾಲನ್ನು ಹಚ್ಚಿರಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ರೆ ಕಪ್ಪು ಕಲೆ ಹೋಗಲಾಡಿಸಬಹುದು.

ಮೊಸರು ಮತ್ತು ಅರಿಶಿನ ಅರಿಶಿನ ಆ್ಯಂಟಿಬಯೋಟಿಕ್​ ಅಂಶಗಳನ್ನು ಹೊಂದಿದೆ. ಇದು ನಿಮ್ಮ ಮುಖದಲ್ಲಿ ಉಂಟಾದ ಸ್ಕ್ರಾಚ್​ಗಳನ್ನು ಕಡಿಮೆ ಮಾಡುತ್ತದೆ. ಮೊಸರಿನಲ್ಲಿ ಚಿಟಿಕೆ ಅರಿಶಿನವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ ತೊಳೆಯಿರಿ. ಆದಷ್ಟು ಪ್ರತಿದಿನ ಈ ಕ್ರಮವನ್ನು ಅನುಸರಿಸಿದರೆ ಕಪ್ಪು ಕಲೆಗಳು ತಿಳಿಗೊಂಡು ಚರ್ಮವು ಹೊಳೆಯುತ್ತದೆ.

ಇದನ್ನೂ ಓದಿ:

Beauty Tips: ಮಾಸ್ಕ್ ಧರಿಸಿದಾಗಲೂ ಲಿಪ್​ ಸ್ಟಿಕ್​ ಹೆಚ್ಚು ಕಾಲ ಉಳಿಯಲು ಹೀಗೆ ಮಾಡಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್