Kannada News Lifestyle Teachers Day 2024 :How to make teachers day card easy and simple? Kannada News
Teachers Day 2024 : ನಿಮ್ಮ ಕೈಯಾರೆ ಈ ಗ್ರೀಟಿಂಗ್ ಕಾರ್ಡ್ ಮಾಡಿ ಶಿಕ್ಷಕರಿಗೆ ಶುಭಾಶಯ ತಿಳಿಸಿ
ಶಿಕ್ಷಕ ಹಾಗೂ ತತ್ವಜ್ಞಾನಿಯಾಗಿರುವ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಜನ್ಮದಿನವನ್ನು ಶಿಕ್ಷಕರ ದಿನ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ನಿಮ್ಮ ನೆಚ್ಚಿನ ಶಿಕ್ಷಕರಿಗೆ ಗ್ರೀಟಿಂಗ್ ಕಾರ್ಡ್, ಹೂವುಗಳು ಹಾಗೂ ಉಡುಗೊರೆಯನ್ನು ನೀಡುವ ಮೂಲಕ ಗೌರವ, ಅಭಿನಂದನೆ ಹಾಗೂ ಶುಭಾಶಯಗಳನ್ನು ತಿಳಿಸುತ್ತಾರೆ. ಈ ಬಾರಿಯ ಶಿಕ್ಷಕರ ದಿನಕ್ಕೆ ಕೈಯಾರೆ ವಿವಿಧ ವಿನ್ಯಾಸದ ಕಾರ್ಡ್ ಗಳನ್ನು ತಯಾರಿಸಿ ನೀಡಬಹುದು.
Follow us on
ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆ ತಾಯಿಯಂತೆ ಶಿಕ್ಷಕರ ಪಾತ್ರವು ಅಗಾಧವಾದದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿ–ಬರೆಯಲು ಕಲಿಸಿದ್ದು ಮಾತ್ರವಲ್ಲದೇ ಜೀವನ ಮೌಲ್ಯಗಳನ್ನು ಹೇಳುತ್ತಾ ಉತ್ತಮ ಪ್ರಜೆಯನ್ನಾಗಿ ರೂಪಿಸಿದವರು ಈ ಶಿಕ್ಷಕರು. ಪ್ರತಿವರ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಅತ್ಯಂತ ವಿಜೃಂಭಣೆ ಮತ್ತು ಸಡಗರದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ತಮ್ಮ ಕೈಯಾರೆ ಮಾಡಿದ ಗ್ರೀಟಿಂಗ್ ಕಾರ್ಡ್ ಶಿಕ್ಷಕರಿಗೆ ನೀಡಿ ಅವರ ಮುಖದಲ್ಲಿ ನಗು ಮೂಡಿಸಬಹುದು.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಶುಭಾಶಯ ಕೋರಲು ಗ್ರೀಟಿಂಗ್ ಕಾರ್ಡ್ ನೀಡಲು ಬಯಸಿದ್ದರೆ ಬಿಳಿ ಡ್ರಾಯಿಂಗ್ ಹಾಳೆಯ ಮೇಲೆ ವಿವಿಧ ಸಾಲುಗಳನ್ನು ಬರೆದು ಆಕರ್ಷಕವಾಗಿ ಕಾಣಲು ಸ್ಕೆಚ್ ಪೆನ್ನುಗಳನ್ನು ಬಳಸಬಹುದು. ಈ ಗ್ರೀಟಿಂಗ್ ಕಾರ್ಡ್ ಮೂಲಕ ಶಿಕ್ಷಕರ ಬಗ್ಗೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಬಹುದು.
ಮಕ್ಕಳು ಪಾಪ್ ಅಪ್ ಕಾರ್ಡ್ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಈ ಕಾರ್ಡ್ ತಯಾರಿಕೆಯೂ ಸುಲಭವಾಗಿದ್ದು, ಕಾಗದದ ಮೇಲೆ ವಿವಿಧ ಆಕಾರಗಳನ್ನು ಕತ್ತರಿಸಿ ಹಾಳೆಯ ಮೇಲೆ ಅಂಟಿಸುವುದು. ಇಲ್ಲವಾದರೆ ಅಲಂಕಾರಿಕ ವಸ್ತುಗಳನ್ನು ಅಂಟಿಸಿ ಆಕರ್ಷಕವಾಗಿ ಗ್ರೀಟಿಂಗ್ ಕಾರ್ಡ್ ಕಾಣುವಂತೆ ಮಾಡಬಹುದು.
ಸೃಜನಶೀಲವಾಗಿ ಕಾರ್ಡ್ ವಿನ್ಯಾಸ ಮಾಡಬೇಕೆಂದು ಕೊಂಡಿರುವ ಮಕ್ಕಳಿಗೆ ಈ ಗ್ರೀಟಿಂಗ್ ಕಾರ್ಡ್ ವಿನ್ಯಾಸಗಳು ಉತ್ತಮ ಆಯ್ಕೆಯಾಗಿದೆ. ಶಿಕ್ಷಕರ ಕುರಿತಾದ ಕೆಲವು ಸಾಲುಗಳೊಂದಿಗೆ ಜೇನುನೊಣಗಳ ಚಿತ್ರವನ್ನು ಬಿಡಿಸಬಹುದು. ಹೆಬ್ಬೆರಳನ್ನು ಬಳಸಿಕೊಂಡು ಈ ರೇಖಾಚಿತ್ರ ವಿನ್ಯಾಸವನ್ನು ಬರೆಯಬಹುದಾಗಿದೆ.
ಕೆಲವು ಕಾಗದದ ಕಲಾಕೃತಿಗಳನ್ನು ತಯಾರಿಸಿ ಈ ಗ್ರೀಟಿಂಗ್ ಕಾರ್ಡ್ ತಯಾರಿಸಬಹುದು. ಶಿಕ್ಷಕರ ದಿನಾಚರಣೆಗಾಗಿ ಈ ವಿಶೇಷ ಕಾರ್ಡ್ ಮಾಡಲು ಡಿಸೈನರ್ ಟೇಪ್‌ಗಳ ಜೊತೆಗೆ ಹೂವಿನ ಡಿಸೈನ್ ಜೊತೆಗೆ ನಿಮ್ಮ ನೆಚ್ಚಿನ ಶಿಕ್ಷಕರ ಹೆಸರನ್ನು ಸೇರಿಸುವ ಮೂಲಕ ಈ ಕಾರ್ಡ್ ಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಈ ವಿಭಿನ್ನವಾದ ಕಾರ್ಡ್ ಗಳನ್ನು ಮಾಡಲು ಯುಟ್ಯೂಬ್ ಸಹಾಯವನ್ನು ಪಡೆದುಕೊಳ್ಳಬಹುದು.