AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2024: ಹೋಳಿದಂದು ನಿಮ್ಮ ಮನೆಯ ಅಲಂಕಾರ ಹೇಗಿರಬೇಕು? ಕಡಿಮೆ ಖರ್ಚಿನಲ್ಲಿ ಮಾಡುವುದು ಹೇಗೆ?

ಭಾರತದಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬದ ಆಚರಣೆಯು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದೆ. ಆದರೆ ಈ ಓಕುಳಿ ಹಬ್ಬ ಅಥವಾ ಹೋಳಿ ಹಬ್ಬವು ಬಣ್ಣಗಳಿಂದ ಕೂಡಿದ ಹಬ್ಬ. ಈ ಹಬ್ಬವೆಂದರೇನೇ ಹಾಗೆ ಸಂಭ್ರಮ ಸಡಗರದಿಂದ ತುಂಬಿರುತ್ತದೆ. ಮನೆಯ ತುಂಬಾ ಹಬ್ಬದ ಕಳೆ ಬರಬೇಕಾದರೆ ಮನೆಯ ಸಿಂಗಾರ, ಹಬ್ಬದಡುಗೆ ಬಣ್ಣಗಳ ಈ ಹೋಳಿ ಹಬ್ಬಕ್ಕೆ ಮನೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳಬಹುದು. ಹೋಳಿ ಹಬ್ಬಕ್ಕೆ ಮನೆಯ ಸಿಂಗರಿಸಲು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಬಹುದು.

Holi 2024: ಹೋಳಿದಂದು ನಿಮ್ಮ ಮನೆಯ ಅಲಂಕಾರ ಹೇಗಿರಬೇಕು? ಕಡಿಮೆ ಖರ್ಚಿನಲ್ಲಿ ಮಾಡುವುದು ಹೇಗೆ?
ಸಾಯಿನಂದಾ
| Edited By: |

Updated on: Mar 13, 2024 | 10:04 AM

Share

ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತೀಯರಿಗೆ ಬಣ್ಣಗಳ ಹಬ್ಬ ಹೋಳಿಯು ವಿಶೇಷವಾಗಿದೆ. ಈ ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡಿದ ಬಳಿಕ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಬಣ್ಣಗಳ ಎರಚಾಟವು ಜೋರಾಗಿಯೇ ಇರುತ್ತದೆ. ಮನೆಯಲ್ಲಿ ಹಬ್ಬದ ಸಂಭ್ರಮವು ಎದ್ದು ಕಾಣಬೇಕಾದರೆ ಮನೆಯನ್ನು ಅಲಂಕಾರ ಮಾಡುವುದು ಮುಖ್ಯವಾಗುತ್ತದೆ. ಹೀಗಾಗಿ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಹಬ್ಬದ ರಂಗನ್ನು ಹೆಚ್ಚಿಸಿಕೊಳ್ಳಿ.

  1. ವರ್ಣರಂಜಿತ ದೀಪಗಳು ಮತ್ತು ಪರದೆಗಳನ್ನು ಬಳಸಿ : ಬಣ್ಣ ಬಣ್ಣದ ದೀಪಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ತರುತ್ತದೆ. ಹೀಗಾಗಿ ಹೋಳಿ ಹಬ್ಬಕ್ಕೆ ಕಲರ್ ಫುಲ್ ಪರದೆಗಳ ಜೊತೆಗೆ ವರ್ಣರಂಜಿತ ಹ್ಯಾಂಗಿಂಗ್ ಲೈಟ್‌ಗಳನ್ನು ಬಳಸಿಕೊಂಡರೆ ಅದ್ಭುತವಾದ ಮನೆಯ ಅಲಂಕಾರವನ್ನು ಮಾಡಿದಂತೆಯಾಗುತ್ತದೆ. ಅದಲ್ಲದೇ, ವರ್ಣರಂಜಿತ ಬೆಡ್‌ಶೀಟ್‌ಗಳನ್ನು ಸೇರಿಸುವುದು ನಿಮ್ಮ ಮನೆಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
  2. ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳ ಬಳಕೆಯಿರಲಿ : ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡುವಲ್ಲಿ ಕಲಾತ್ಮಕ ವಸ್ತುಗಳು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕಲಾತ್ಮಕ ವಾಲ್ ಹ್ಯಾಂಗಿಂಗ್‌ಗಳನ್ನು ಬಳಸುವುದು ಹಬ್ಬದ ನೋಟವನ್ನು ದ್ವಿಗುಣ ಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ವರ್ಣರಂಜಿತ ವಾಲ್-ಹ್ಯಾಂಗಿಂಗ್‌ಗಳು, ಕಲಾತ್ಮಕ ವಸ್ತುಗಳು, ನೇಯ್ದ ಬುಟ್ಟಿಗಳಿಂದ ಗೋಡೆಯಲ್ಲಿ ಅಲಂಕರಿಸಿಕೊಳ್ಳಿ.
  3. ಬಾಗಿಲಿಗೆ ತೋರಣವಿರಲಿ : ಭಾರತೀಯರು ಹಬ್ಬಗಳಲ್ಲಿ ಮನೆ ಬಾಗಿಲಿಗೆ ತೋರಣವು ವಿಶೇಷವಾಗಿರುತ್ತದೆ. ಈ ತೋರಣಗಳು ಹಬ್ಬದ ರಂಗನ್ನು ಹೆಚ್ಚಿಸುತ್ತದೆ. ಹೀಗಾಗಿ ಮಾವಿನ ಎಲೆಯಿಂದ ಕೃತಕ ಹೂವಿನಿಂದ ತೋರಣ ತಯಾರಿಸಿ ಬಾಗಿಲಿಗೆ ಹಾಕುವ ಮೂಲಕ ಮನೆಯ ನೋಟವನ್ನು ಹೆಚ್ಚಿಸಬಹುದು.
  4. ಮನೆಯ ಪ್ರವೇಶದ್ವಾರವು ಅಲಂಕಾರದಿಂದ ತುಂಬಿರಲಿ : ಹಬ್ಬದ ದಿನ ಮನೆಗೆ ಅತಿಥಿಗಳು ಬಂದರೆ ಅವರ ಗಮನ ಸೆಳೆಯುವಂತೆ ಪ್ರವೇಶದ್ವಾರವನ್ನು ಸಿದ್ಧಗೊಳಿಸಿ. ಮನೆಯಲ್ಲಿರುವ ವೈನ್ ಬಾಟಲಿಗಳನ್ನು ಹೂದಾನಿಯಾಗಿ ಪರಿವರ್ತಿಸಬಹುದು. ಕೃತಕ ಹೂವುಗಳಿಂದ ಮನೆಯ ದ್ವಾರವನ್ನು ಸಿಂಗರಿಸಿಕೊಳ್ಳಿ. ಮನೆ ಪ್ರವೇಶದ್ವಾರದಲ್ಲಿ ಕೃತಕ ದೀಪಗಳು, ಬಜೆಟ್ ಸ್ನೇಹಿ ರಗ್ಗುಗಳು ಹಾಗೂ ಮೇಣದ ಬತ್ತಿಗಳಿಂದ ಸಿಂಗರಿಸಿದರೆ ಮನೆಯ ಅಂದವು ದುಪ್ಪಟ್ಟಾಗಬಹುದು.
  5. ಸಾಂಪ್ರದಾಯಿಕ ಶೈಲಿಯ ರಂಗೋಲಿವಿರಲಿ : ಮನೆಯಲ್ಲಿ ಹಬ್ಬದ ಕಳೆ ತರುವುದೇ ಈ ರಂಗೋಲಿ. ಹೀಗಾಗಿ ಬಣ್ಣ ಬಣ್ಣದ ರಂಗೋಲಿ ಪುಡಿ ಬಳಸಿ ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ತಾರವನ್ನು ಬಿಡಿಸಿ. ಈ ಚಿತ್ತಾರವು ಮನೆಯ ಮುಂಭಾಗವು ಸುಂದರವಾಗಿಸಿ ಧನಾತ್ಮಕ ಕಳೆಯನ್ನು ತರುತ್ತದೆ.
  6. ಕೈಯಿಂದ ಮಾಡಿದ ರಗ್ಗುಗಳಿಂದ ಮನೆಯ ಸೌಂದರ್ಯ ಹೆಚ್ಚಿಸಿ : ಮನೆಯು ತುಂಬಾ ವಿಸ್ತಾರವಾಗಿದ್ದರೆ ಹಬ್ಬದ ದಿನ ಖಾಲಿ ಖಾಲಿಯಿರುವ ಹಾಗೆ ಕಾಣಲು ಬಿಡಬೇಡಿ. ಹೋಳಿ ಹಬ್ಬದಂದು ಮನೆಯ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ರಗ್ಗುಗಳು, ಕೈಯಿಂದ ಮಾಡಿದ ಸೆಣಬಿನ ರಗ್ಗುಗಳು, ಬಿದಿರಿನ ರೇಷ್ಮೆ ರಗ್ಗುಗಳು ಹಾಗೂ ಹೂವಿನ ಚಿತ್ತಾರವಿರುವ ವೈವಿಧ್ಯಮಯ ಶೈಲಿಯ ರಗ್ಗುಗಳನ್ನು ಬಳಸಬಹುದು. ಈ ರಗ್ಗುಗಳನ್ನು ಪ್ರವೇಶದ್ವಾರಕ್ಕೂ ಹಾಕಿದರೆ ಮನೆಯು ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ