ಹೋಳಿಹಬ್ಬವೆಂದರೆ ಮೊದಲು ನೆನಪಾಗುವುದೇ ಬಣ್ಣಗಳು. ಹೀಗಾಗಿ ಬಣ್ಣಗಳ ಹಬ್ಬವಂದೇ ಕರೆಯಲಾಗುತ್ತದೆ. ಈ ದಿನದಂದು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಗೆ ಯಾವುದೇ ವಯಸ್ಸಿನ ಭೇದಭಾವವಿಲ್ಲದೇ ಆಚರಿಸುವ ಹಬ್ಬವಿದಾಗಿದೆ. ವರ್ಣರಂಜಿತ ಬಣ್ಣ ಗಳ ಹಬ್ಬವಾದ ಕಾರಣ ಹೆಚ್ಚಿನವರು ಈ ಬಣ್ಣಗಳಲ್ಲೆ ಆಟವಾಡುತ್ತಾರೆ. ಹಬ್ಬದ ಸಂಭ್ರಮದ ನಡುವೆ ಪರಿಸರವನ್ನು ಹಾಳಾಗದಂತೆ ರಕ್ಷಿಸುವುದು ಮುಖ್ಯ. ಹೀಗಾಗಿ ಪರಿಸರ ಸ್ನೇಹಿ ಹಬ್ಬಗಳ ಆಚರಣೆಯತ್ತ ಗಮನ ಹರಿಸುವುದು ಒಳ್ಳೆಯದು.
* ಹೋಳಿ ಹಬ್ಬಕ್ಕೆ ಉಡುಪಿನ ಆಯ್ಕೆ : ಹಬ್ಬಗಳ ಆಚರಣೆಯ ನಡುವೆ ಯೋಗಕ್ಷೇಮಕ್ಕೆ ಗಮನ ಹರಿಸುವುದು ಬಹಳ ಮುಖ್ಯ. ಬಣ್ಣಗಳ ಎರಚಾಟದ ನಡುವೆ ಯಾವ ರೀತಿಯ ಉಡುಗೆ ಧರಿಸುತ್ತೀರ ಎನ್ನುವ ಬಗ್ಗೆ ಗಮನ ಕೊಡಬೇಕಾಗುತ್ತದೆ. ಹೋಳಿ ಹಬ್ಬದ ಹಿಂದಿನ ರಾತ್ರಿ ಮೈ ಹಾಗೂ ಕೂದಲಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ನಿಮ್ಮ ಚರ್ಮ ಮತ್ತು ಕೂದಲಿನ ಮೇಲೆ ಬಣ್ಣಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬಣ್ಣಗಳ ಎರಚಾಟದ ವೇಳೆ ಉದ್ದ ತೋಳಿನ ಬಟ್ಟೆ ಮತ್ತು ಉದ್ದದ ಪ್ಯಾಂಟ್ ಧರಿಸುವುದು ಉತ್ತಮ. ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ ನಿಮ್ಮ ಚರ್ಮವನ್ನು ತೇವಗೊಳಿಸುವುದರಿಂದ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.
* ಸಾವಯವ ಹೋಳಿ ಬಣ್ಣಗಳ ಆಯ್ಕೆ ಇರಲಿ : ಬಣ್ಣಗಳೊಂದಿಗೆ ಆಟವಾಡುವುದು ಹೋಳಿಯ ಹಬ್ಬದ ವಿಶೇಷ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳ ಬದಲಾಗಿ ಮನೆಯಲ್ಲೇ ತಯಾರಿಸುವುದು ಉತ್ತಮ. ಹೀಗಾಗಿ ಅಕ್ಕಿ ಹಿಟ್ಟು, ಅರಿಶಿನ, ಒಣಗಿದ ಹೂವಿನ ಪುಡಿ, ಶ್ರೀಗಂಧ ಹೀಗೆ ನೈಸರ್ಗಿಕ ಪದಾರ್ಥಗಳಿಂದ ಮಾಡಲ್ಪಟ್ಟ ಪರಿಸರ ಸ್ನೇಹಿ ಹೋಳಿ ಬಣ್ಣಗಳ ಆಯ್ಕೆ ಮಾಡಿಕೊಳ್ಳಿ. ಇದು ಚರ್ಮಕ್ಕೆ ಮತ್ತು ಕಣ್ಣುಗಳಿಗೆ ಮಾತ್ರವಲ್ಲದೆ ಪರಿಸರಕ್ಕೂ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ.
* ನೀರಿನ ಬಳಕೆ ಮಿತವಾಗಿರಲಿ : ಹೋಳಿ ಹಬ್ಬದಲ್ಲಿ ಬಣ್ಣಗಳಿಂದ ಕೂಡಿದ ನೀರನ್ನು ಬಳಸುತ್ತಾರೆ. ಹೀಗಾಗಿ ಪರಿಸರ ಸ್ನೇಹಿ ಆಚರಣೆಯಾಗಿರುವ ಕಾರಣ ನೀರು ಹೆಚ್ಚು ಪೋಲಾಗುವುದನ್ನು ತಪ್ಪಿಸಬಹುದು. ಬೇಸಿಗೆಯ ಸಮಯದಲ್ಲಿ ನೀರಿನ ಕೊರತೆಯಿರುವ ಕಾರಣ ಎಚ್ಚರ ವಹಿಸುವುದು ಒಳ್ಳೆಯದು. ಹೋಳಿ ಆಡುವ ಸಮಯದಲ್ಲಿ ನಿಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸ್ಯಗಳು ನೀರನ್ನು ಹೀರಿಕೊಳ್ಳುವ ಸಾಧ್ಯತೆಯಿರುತ್ತದೆ. ರಾಸಾಯನಿಕ ಬಣ್ಣಗಳ ನೀರು ಸಸ್ಯಗಳಿಗೆ ಹಾನಿಯನ್ನುಂಟು ಮಾಡುತ್ತದೆ. ನೀರಿನ ಮಿತ ಬಳಕೆಯೊಂದಿಗೆ ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಿ.
* ಬಲೂನ್ ಗಳು ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಿ : ನೀರಿನ ಬಲೂನ್‌ಗಳೊಂದಿಗೆ ಹೋಳಿ ಆಡುವುದು ಮಕ್ಕಳು ಮತ್ತು ವಯಸ್ಕರಿಗೆ ಹಾಗೂ ಪರಿಸರಕ್ಕೂ ಅಪಾಯಕಾರಿಯಾಗಿದೆ. ಯಾವುದೇ ರೀತಿಯ ಮಾಲಿನ್ಯವನ್ನು ಉಂಟುಮಾಡುವುದನ್ನು ತಪ್ಪಿಸಲು ಹೋಳಿ ಸಮಯದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೀರಿನ ಬಲೂನ್‌ಗಳನ್ನು ಬಳಸಬೇಕಾಗಿಲ್ಲ. ಆಸಕ್ತಿದಾಯಕ ಒಳಾಂಗಣ ಮತ್ತು ಹೊರಾಂಗಣ ಆಟಗಳತ್ತ ಗಮನ ಕೊಡಬಹುದು.
* ಅಲಂಕಾರಕ್ಕೆ ಹೂವುಗಳನ್ನು ಬಳಸಿ : ಹಬ್ಬದ ವಾತಾವರಣವು ಸೃಷ್ಟಿಯಾಗಬೇಕಾದರೆ ಮನೆಯ ಅಲಂಕಾರವು ಪ್ರಮುಖವಾಗಿರುತ್ತದೆ. ಮನೆಯ ಹೂದೋಟದಲ್ಲಿರುವ ಬಣ್ಣ ಬಣ್ಣದ ಹೂಗಳಿಂದ ಮನೆಯನ್ನು ವ್ಯವಸ್ಥಿತವಾಗಿ ಅಲಂಕರಿಸಿ. ಮನೆಯ ಮುಂಬಾಗಿಲಿಗೆ ಹೂವಿನ ಎಸಳಿಂದ ರಂಗೋಲಿ ಬಿಡಿಸಿ ಹೀಗೆ ಬಗೆ ಬಗೆಯಲ್ಲಿ ಮನೆಯನ್ನು ಆತ್ಯಾರ್ಕಷವಾಗಿ ಕಾಣುವಂತೆ ಮಾಡಬಹುದು.
ಇದನ್ನೂ ಓದಿ: ನಿಮ್ಮ ಮ್ಯಾರೇಜ್ ಫಿಕ್ಸ್ ಆಗಿದ್ಯಾ, ಹಾಗಾದ್ರೆ ಮಾನಸಿಕ ಸಿದ್ಧತೆ ಹೀಗಿರಲಿ
* ಸಿಹಿ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ : ಹೋಳಿ ಹಬ್ಬವೆಂದರೆ ಬಣ್ಣಗಳು ಮಾತ್ರವಲ್ಲ. ಮನೆಯಲ್ಲೇ ಹಬ್ಬದ ವಾತಾವರಣವನ್ನು ಸೃಷ್ಟಿಸಲು ಹಬ್ಬದಡುಗೆ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ಸಿಹಿ ತಿಂಡಿಗಳನ್ನು ತರುವ ಬದಲು ಮನೆಮಂದಿಯೆಲ್ಲಾ ಜೊತೆ ಸೇರಿ ವಿವಿಧ ಬಗೆಗೆ ಸ್ವೀಟ್ ಗಳನ್ನು ಮಾಡಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ.
* ಹೋಳಿ ದಹನಕ್ಕೆ ಪರಿಸರ ಸ್ನೇಹಿ ತ್ಯಾಜ್ಯಗಳ ಬಳಕೆಯಿರಲಿ : ಹೋಳಿ ದಹನಕ್ಕೆ ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ. ಪರಿಸರ ಸ್ನೇಹಿ ತ್ಯಾಜಗಳಾದ ಸಗಣಿ, ತೆಂಗಿನಕಾಯಿ ಸಿಪ್ಪೆ, ಒಣಗಿದ ಎಲೆಗಳು, ಕಟ್ಟಿಗೆಗಳನ್ನು ಸುಡುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಜೊತೆಗೆ ಆರೋಗ್ಯಕ್ಕೆ ತೊಂದರೆಯು ಇರುವುದಿಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ