Hair Growth Tips: ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚಿಸುವ ನೈಸರ್ಗಿಕ ಹೇರ್ ಮಾಸ್ಕ್​ಗಳಿವು

ಕೂದಲು ಸೊಂಪಾಗಿ ಬೆಳೆಯಬೇಕು, ದಪ್ಪವಾಗಿರಬೇಕೆಂದು ಜನರು ಏನೇನೋ ರಾಸಾಯನಿಕಗಳಿರುವ ಶಾಂಪೂ, ಹೇರ್ ಆಯಿಲ್​ಗಳನ್ನು ಬಳಸುತ್ತಾರೆ. ಇವುಗಳಿಂದ ಕೆಲವೊಮ್ಮೆ ಕೂದಲು ಉದುರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ಕೆಲವು ನೈಸರ್ಗಿಕ ಹೇರ್ ಮಾಸ್ಕ್​ಗಳ ಮಾಹಿತಿ ಇಲ್ಲಿದೆ. ಇವುಗಳಿಂದ ಕೂದಲಿಗೆ ಯಾವುದೇ ಅಡ್ಡಪರಿಣಾಮಗಳೂ ಆಗುವುದಿಲ್ಲ.

Hair Growth Tips: ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚಿಸುವ ನೈಸರ್ಗಿಕ ಹೇರ್ ಮಾಸ್ಕ್​ಗಳಿವು
ಕೂದಲಿನ ಬೆಳವಣಿಗೆ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 11, 2024 | 6:21 PM

ನಮ್ಮ ಕೂದಲು ಪ್ರತಿ ತಿಂಗಳಿಗೆ 0.6 ಸೆ.ಮೀನಿಂದ 3.36 ಸೆ.ಮೀ.ವರೆಗೂ ಬೆಳೆಯುತ್ತದೆ. ಕೂದಲಿನ ಬೆಳವಣಿಗೆಯ ದರವು ನಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ನಮಗೆ ವಯಸ್ಸಾದಂತೆ ಕೂದಲಿನ ಬೆಳವಣಿಗೆ ಕೂಡ ನಿಧಾನವಾಗುತ್ತದೆ. ಪುರುಷರಿಗಿಂತಲೂ ಮಹಿಳೆಯರ ತಲೆಕೂದಲು ಬೇಗ ಬೆಳೆಯುತ್ತದೆ. ಕೂದಲಿನ ಉತ್ತಮ ಬೆಳವಣಿಗೆಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರದ ಸೇವನೆ, ಬಯೋಟಿನ್, ಪ್ರೋಬಯಾಟಿಕ್‌ಗಳು ಮತ್ತು ಕಬ್ಬಿಣದಂತಹ ಪೂರಕಗಳ ಬಳಕೆ, ಕೂದಲು ಬಣ್ಣಗಳ ಬಳಕೆಯನ್ನು ಅವಾಯ್ಡ್ ಮಾಡುವುದು, ಅರೋಮಾಥೆರಪಿ, ಸ್ಟ್ರೈಟನರ್ ಬಳಕೆ ಕಡಿಮೆ ಮಾಡುವುದು ಅತ್ಯಗತ್ಯ.

ನೈಸರ್ಗಿಕವಾಗಿ ಕೂದಲು ಉದ್ದವಾಗಿ ಬೆಳೆಯಲು ಆರೋಗ್ಯಕರ ಆಹಾರವನ್ನು ಸೇವಿಸುವುದು, ಹೆಚ್ಚು ನೀರು ಕುಡಿಯುವುದು, ಸರಿಯಾದ ನೈಸರ್ಗಿಕ ಕೂದಲು ಬೆಳವಣಿಗೆ ಉತ್ಪನ್ನಗಳನ್ನು ಬಳಸುವುದು, ನಿಯಮಿತವಾಗಿ ಕೂದಲು ಟ್ರಿಮ್​ ಮಾಡಿಸಿಕೊಳ್ಳುವುದು, ನೆತ್ತಿಯ ಮಸಾಜ್ ಮಾಡಿಕೊಳ್ಳುವುದು ಬಹಳ ಮುಖ್ಯ.

ಇದನ್ನೂ ಓದಿ: Hairfall Control: ಕೂದಲು ಉದುರುವಿಕೆ ತಡೆಯಲು 8 ಮಾರ್ಗಗಳು ಇಲ್ಲಿವೆ

ಕೂದಲ ರಕ್ಷಣೆಯ ದಿನಚರಿಯನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ಕೂದಲಿನ ಆರೋಗ್ಯದಲ್ಲಿ ಬದಲಾವಣೆ ನೋಡಬಹುದು. ನಿಮ್ಮ ಕೂದಲನ್ನು ಕಾಳಜಿ ಮಾಡಲು ಮತ್ತು ಉದ್ದವಾದ, ಆರೋಗ್ಯಕರ ಕೂದಲು ಪಡೆಯಲು ನೀವು ಬಜೆಟ್ ಸ್ನೇಹಿ ಮತ್ತು ಸರಳ ವಿಧಾನವನ್ನು ಹುಡುಕುತ್ತಿದ್ದರೆ, ನೀವು ಪ್ರಯತ್ನಿಸಬಹುದಾದ ಹೇರ್ ಮಾಸ್ಕ್‌ಗಳು ಇಲ್ಲಿವೆ.

ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಾಸ್ಕ್:

ಎರಡು ಮೊಟ್ಟೆಗಳನ್ನು ಎರಡು ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಬೇರುಗಳ ಮೇಲೆ ಮಸಾಜ್ ಮಾಡಿ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ, ಆಲಿವ್ ಎಣ್ಣೆಯು ಪೋಷಣೆಯನ್ನು ನೀಡುತ್ತದೆ.

ಆವಕಾಡೊ ಮತ್ತು ಬಾಳೆಹಣ್ಣು ಮಾಸ್ಕ್:

ಮಾಗಿದ ಆವಕಾಡೊ ಮತ್ತು ಮಾಗಿದ ಬಾಳೆಹಣ್ಣನ್ನು ಒಟ್ಟಿಗೆ ಮ್ಯಾಶ್ ಮಾಡಿ. ನಂತರ ಅದನ್ನು ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿ. ಆವಕಾಡೊ ವಿಟಮಿನ್ ಇ ಮತ್ತು ಬಿ ಅನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಬಾಳೆಹಣ್ಣು ಕೂದಲಿನ ದಪ್ಪವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೆಂಗಿನ ಹಾಲು ಮತ್ತು ಜೇನುತುಪ್ಪದ ಮಾಸ್ಕ್:

ತೆಂಗಿನ ಹಾಲು ಮತ್ತು ಜೇನುತುಪ್ಪವನ್ನು ಸಮಾನ ಭಾಗಗಳಲ್ಲಿ ಮಿಕ್ಸ್ ಮಾಡಿಕೊಳ್ಳಿ. ನಂತರ ಆ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ. ತೆಂಗಿನ ಹಾಲು ನೆತ್ತಿಯನ್ನು ಪೋಷಿಸುತ್ತದೆ, ಜೇನುತುಪ್ಪವು ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

ಅಲೋವೆರಾ ಮತ್ತು ಹರಳೆಣ್ಣೆಯ ಮಾಸ್ಕ್:

ಎರಡು ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಅನ್ನು ಒಂದು ಚಮಚ ಹರಳೆಣ್ಣೆಯ ಜೊತೆ ಮಿಶ್ರಣ ಮಾಡಿ. ಅದನ್ನು ನಿಮ್ಮ ಕೂದಲು ಮತ್ತು ಬೇರುಗಳಿಗೆ ಹಚ್ಚಿಕೊಳ್ಳಿ. ಅಲೋವೆರಾ ಜೆಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹರಳೆಣ್ಣೆ ಕೂದಲ ಕಿರುಚೀಲಗಳನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ.

ಇದನ್ನೂ ಓದಿ: Pregnancy: ಗರ್ಭಿಣಿಯರು ಕೂದಲಿಗೆ ಕಲರಿಂಗ್ ಮಾಡಿಸಿದರೆ ಏನಾಗುತ್ತದೆ?

ಮೊಸರು ಮತ್ತು ಮೆಂತ್ಯ ಬೀಜದ ಮಾಸ್ಕ್:

ಮೆಂತ್ಯ ಬೀಜಗಳನ್ನು ಮೊಸರಿನಲ್ಲಿ ರಾತ್ರಿ ನೆನೆಸಿ. ನಂತರ ಅವುಗಳನ್ನು ಪೇಸ್ಟ್ ಆಗಿ ಮಿಶ್ರಣ ಮಾಡಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆ ಮತ್ತು ದಪ್ಪವನ್ನು ಉತ್ತೇಜಿಸುತ್ತದೆ.

ಆಪಲ್ ಸೈಡರ್ ವಿನೆಗರ್ ಮತ್ತು ರೋಸ್ಮರಿ ಆಯಿಲ್ ಮಾಸ್ಕ್:

ಆಪಲ್ ಸೈಡರ್ ವಿನೆಗರ್ ಅನ್ನು ನೀರಿನಿಂದ ದುರ್ಬಲಗೊಳಿಸಿ, ಅದಕ್ಕೆ ರೋಸ್ಮರಿ ಸಾರಭೂತ ತೈಲದ ಕೆಲವು ಹನಿಗಳನ್ನು ಸೇರಿಸಿ. ನೆತ್ತಿಯನ್ನು ಕ್ಲೀನ್ ಮಾಡಲು ಶಾಂಪೂ ಮಾಡಿದ ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ.

ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್:

ಒಂದು ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ. ಎರಡು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ಬಾಳೆಹಣ್ಣು ನೆತ್ತಿಯನ್ನು ಪೋಷಿಸುತ್ತದೆ, ಜೇನುತುಪ್ಪವು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಗ್ರೀನ್ ಟೀ ಮತ್ತು ನಿಂಬೆ ರಸದ ಮಾಸ್ಕ್:

1 ಕಪ್ ಗ್ರೀನ್ ಚಹಾವನ್ನು ಕುದಿಸಿ ಅದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಗ್ರೀನ್ ಟೀಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ನಿಂಬೆ ರಸವು ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು