ಲವ್‌ ಮ್ಯಾರೇಜ್‌ಗೆ ಪೋಷಕರ ಒಪ್ಪಿಗೆ ಪಡೆಯುವುದು ಹೇಗೆ? ಇದಕ್ಕಾಗಿ ಈ ಸಲಹೆ ಪಾಲಿಸಿ

ಜಗತ್ತು ಎಷ್ಟೇ ಮುಂದುವರೆದಿದ್ದರೂ, ಇಂದಿಗೂ ಸಹ ನಮ್ಮ ಸಮಾಜದಲ್ಲಿ ಪ್ರೇಮ ವಿವಾಹಕ್ಕೆ ಸಾಕಷ್ಟು ವಿರೋಧಗಳಿವೆ. ಹೌದು ಅನೇಕ ಪ್ರೇಮಿಗಳಿಗೆ ಮದುವೆಗೆ ತಮ್ಮ ಪೋಷಕರನ್ನು ಒಪ್ಪಿಸುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಹೆಚ್ಚಿನ ಪೋಷಕರು ಜನ ಏನನ್ನುತ್ತಾರೋ, ಅಂತಸ್ತು ಸರಿ ಹೊಂದೋದಿಲ್ಲ, ಜಾತಿ ಬೇರೆ ಎಂಬ ಕಾರಣಕ್ಕೆ ಲವ್‌ ಮ್ಯಾರೇಜ್‌ಗೆ ಒಪ್ಪಿಗೆ ನೀಡೋದೇ ಇಲ್ಲ. ನಿಮ್ಮ ಮನೆಯಲ್ಲೂ ಸಹ ಪ್ರೇಮ ವಿವಾಹಕ್ಕೆ ಒಕೆ ಅಂತಿಲ್ವಾ, ಹಾಗಿದ್ರೆ ಪೋಷಕರಿಂದ ನಿಮ್ಮ ಪ್ರೀತಿಗೆ ಗ್ರೀನ್‌ ಸಿಗ್ನಲ್‌ ಪಡೆಯಲು ಈ ತಂತ್ರ ಅನುಸರಿಸಿ.

ಲವ್‌ ಮ್ಯಾರೇಜ್‌ಗೆ ಪೋಷಕರ ಒಪ್ಪಿಗೆ ಪಡೆಯುವುದು  ಹೇಗೆ? ಇದಕ್ಕಾಗಿ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 19, 2026 | 6:19 PM

ಮದುವೆಯ ವಿಷಯಕ್ಕೆ ಬಂದಾಗ, ಪೋಷಕರು (parents) ತುಂಬಾನೇ ಸ್ಟ್ರಿಕ್ಟ್‌ ಆಗಿರ್ತಾರೆ.  ತಮ್ಮ ಮಕ್ಕಳ ನಿರ್ಧಾರಕ್ಕೆ ಹೆಚ್ಚಾಗಿ ಒಕೆ ಹೇಳೋದಿಲ್ಲ, ಈ ಮನೆಗೆ ಯಾವ ರೀತಿಯ ಹುಡುಗಿ ಬೇಕು ಎಂಬುದನ್ನು ನಾವೇ ನಿರ್ಧಾರ ಮಾಡ್ತೇವೆ ಅಂತ ಹೇಳ್ತಾರೆ. ಅದರಲ್ಲೂ ಈ ಭಾರತೀಯ ಸಮಾಜದಲ್ಲಿ ಹೆಚ್ಚಿನ ಮನೆಗಳಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡೋದೇ ಇಲ್ಲ. ಹೌದು ಅಂತಸ್ತು, ಜಾತಿ ಹೀಗೆ ಏನಾದರೊಂದು ಕಾರಣ ಹೇಳಿ ಪ್ರೇಮ ವಿವಾಹಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಾರೆ. ಈ ರೀತಿ ಇದ್ದಾರ ಮಕ್ಕಳಿಗೆ ತಮ್ಮ ಲವ್‌ ಬಗ್ಗೆ ಮನೆಯಲ್ಲಿ ಹೇಳಿಕೊಳ್ಳಲು ಸಿಕ್ಕಾಪಟ್ಟೆ ಭಯ ಇರುತ್ತೆ. ಹೀಗಿರುವಾಗ ಈ ಕೆಲವೊಂದು ತಂತ್ರಗಳನ್ನು ಪಾಲಿಸುವ ಮೂಲಕ ಪೋಷಕರನ್ನು ನಿಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡುವಂತೆ ಮಾಡಬಹುದು.

ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಪಡೆಯುವುದು ಹೇಗೆ?

ಸರಿಯಾದ ಸಮಯದಲ್ಲಿ ಮಾತನಾಡಿ:

ಮನೆಯಲ್ಲಿ ಶಾಂತ ಮತ್ತು ಆಹ್ಲಾದಕರ ವಾತಾವರಣವಿರುವ ಸಮಯದಲ್ಲಿ ನಿಮ್ಮ ಪ್ರೀತಿ ಹಾಗೂ ನೀವು ಪ್ರೇಮ ವಿವಾಹವಾಗಲು ಬಯಸುತ್ತಿದ್ದೀರಿ ಎಂಬುದರ ಬಗ್ಗೆ ಹೇಳಿ.  ವಿಶೇಷವಾಗಿ ಕೋಪ ಅಥವಾ ವಾದಗಳು ನಡೆಯುವ ಸಮಯದಲ್ಲಿ ತಪ್ಪಿಯೂ ಪ್ರೀತಿಯ ವಿಷಯವನ್ನು ಚರ್ಚಿಸುವುದನ್ನು ತಪ್ಪಿಸಿ.

ಮೊದಲು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಿ:

ನಿಮ್ಮ ಹೆತ್ತವರಿಗೆ ಪ್ರೇಮ ವಿವಾಹದ ಬಗ್ಗೆ ಏನಾದರೂ ಆಕ್ಷೇಪಣೆಗಳಿವೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ಏಕೆಂದರೆ ಪ್ರತಿಯೊಬ್ಬ ಪೋಷಕರು ತಮ್ಮ ಮಗು ಒಳ್ಳೆಯ ಕುಟುಂಬದ ಹುಡುಗ/ಹುಡುಗಿಯನ್ನು ಮದುವೆಯಾಗಬೇಕೆಂದು ಬಯಸುತ್ತಾರೆ. ಅವರಿಗೆ ವಿಭಿನ್ನ ನಿರೀಕ್ಷೆಗಳಿರಬಹುದು. ಆದ್ದರಿಂದ, ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಿ. ನಂತರ ನೀವು ಪ್ರೀತಿಸಿದವರು ನಿಮ್ಮ ಪೋಷಕರ ಅಭಿರುಚಿಗೆ ತಕ್ಕಂತವರೇ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ,

ಮುಂಚಿತವಾಗಿ ಸುಳಿವುಗಳನ್ನು ನೀಡಿ:

ಒಂದೇ ಬಾರಿಗೆ ನೀವು ಪ್ರೀತಿಸುತ್ತಿದ್ದೀರಿ ಎಂದು ಹೇಳುವ ಬದಲು ನಿಮ್ಮ ಜೀವನ ಸಂಗಾತಿಯನ್ನು ನಿಮ್ಮ ಬೆಸ್ಟ್‌ ಫ್ರೆಂಡ್‌ ರೀತಿಯಲ್ಲಿ ಹೆತ್ತವರಿಗೆ ಪರಿಚರಿಸಿ, ಆಗ ಖಂಡಿತವಾಗಿಯೂ ಹೆತ್ತವರಿಗೆ ಅವರ ಬಗ್ಗೆ ಉತ್ತಮ ಅಭಿಪ್ರಾಯ ಬೆಳೆಯುತ್ತದೆ. ನಂತರ ನಿಮ್ಮಿಬ್ಬರ ಪ್ರೇತಿಯ ಬಗ್ಗೆ ಪ್ರಸ್ತಾಪಿಸಿ, ಆಗ ಖಂಡಿತವಾಗಿಯೂ ಪೋಷಕರು ನಿಮ್ಮ ಪ್ರೀತಿಗೆ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ.

ಭರವಸೆ ನೀಡಿ:

ಸಾಮಾನ್ಯವಾಗಿ ಲವ್‌ ಮ್ಯಾರೇಜ್‌ ಆದ್ರೆ ಮಕ್ಕಳ ಜೀವನ ಹಾಳಾದ್ರೆ ಎಂಬ ಭಯ ಪೋಷಕರಿಗೆ ಇರುತ್ತದೆ. ಆದ್ದರಿಂದ ನಿಮ್ಮ ಹೆತ್ತವರಿಗೆ ನಿಮ್ಮ  ಪ್ರೇಮ ಸಂಬಂಧದ ಬಗ್ಗೆ ಹೇಳುವಾಗ, ಮೊದಲು ನೀವು ಆಯ್ಕೆ ಮಾಡಿದ ಹುಡುಗ ಅಥವಾ ಹುಡುಗಿ ಎಷ್ಟೊಂದು ಒಳ್ಳೆಯವರು, ಒಳ್ಳೆಯ ಕುಟುಂಬ ಹಿನ್ನೆಲೆಯನ್ನು ಹೊಂದಿದವರು, ಅವರ ಜೊತೆ ನೀವು ಎಷ್ಟು ಸಂತೋಷದಿಂದ ಇರುತ್ತೀರಿ ಎಂಬುದನ್ನು ವಿವರಿಸಿ. ನಿಮ್ಮ ಆಯ್ಕೆ ಸರಿಯಾಗಿದೆ, ಅವರನ್ನು ಮದುವೆಯಾದರೆ ಜೀವನ ಪರ್ಯಂತ ಸಂತೋಷವಾಗಿರುತ್ತೇನೆ ಎಂದು ಭರವಸೆ ನೀಡಿ.

ಸಹೋದರ ಸಹೋದರಿಯರಿಂದ ಸಹಾಯ ಪಡೆಯಿರಿ:

ಪ್ರೀತಿಯ ಬಗ್ಗೆ ನಿಮ್ಮ ಹೆತ್ತವರ ಬಳಿ ಹೇಳಲು ಭಯವಾದರೆ ನೀವು ನಿಮ್ಮ ಒಡಹುಟ್ಟಿದವರ ಸಹಾಯವನ್ನು ಪಡೆದುಕೊಳ್ಳಬಹುದು. ಇಲ್ಲವೆ ನಿಮ್ಮ ಹೆತ್ತವರ ಜೊತೆ ತುಂಬಾನೇ ಕ್ಲೋಸ್‌ ಇರುವ ವ್ಯಕ್ತಿಯ ಸಹಾಯವನ್ನು ಪಡೆದುಕೊಂಡು ಅವರ ಮುಖಾಂತರ ನಿಮ್ಮ ಪ್ರೀತಿಯ ಬಗ್ಗೆ ಹೆತ್ತವರಿಗೆ ತಿಳಿಸಿ. ಅವರು ನಿಮ್ಮ ಪೋಷಕರನ್ನು ನಿಮ್ಮ ಆಯ್ಕೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸುತ್ತಾರೆ.

ಇದನ್ನೂ ಓದಿ: ಯುವಕರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನೇಕೆ ಜಾಸ್ತಿ ಇಷ್ಟಪಡೋದು?

ತಾಳ್ಮೆಯಿಂದಿರಿ:

ಪ್ರೇಮ ವಿವಾಹಕ್ಕೆ ಪೋಷಕರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ದುಡುಕಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ತಾಳ್ಮೆಯಿಂದಿರಿ. ನಿಮ್ಮ ಆಯ್ಕೆ ಮಾಡಿದ ಹುಡುಗ ಅಥವಾ ಹುಡುಗಿ ಎಷ್ಟು ಒಳ್ಳೆಯವರು ಎಂಬುದನ್ನು ವಿವರಿಸಿ, ಮನವೊಲಿಸಿ, ಹೀಗೆ ಮಾಡುವುದರಿಂದ ಪೋಷಕರು ನಿಧಾನಕ್ಕೆ ಮದುವೆಗೆ ಒಪ್ಪಿಗೆ ನೀಡುತ್ತಾರೆ.

ಇತರರ ಉದಾಹರಣೆಗಳನ್ನು ನೀಡಿ:

ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಸ್ನೇಹಿತರು ಯಾರಾದರೂ ಪ್ರೇಮ ವಿವಾಹವಾಗಿದ್ದರೆ, ವಿವಾಹದ ಬಳಿಕ ಅವರೆಷ್ಟು ಸುಂದರ ಜೀವನ ನಡೆಸುತ್ತಿದ್ದಾರೆ ಎಂಬ ಉದಾಹರಣೆಯನ್ನು ನೀಡಿ, ಪ್ರೇಮ ವಿವಾಹದ ಬಗ್ಗೆ ಇರುವ ನಕಾರಾತ್ಮಕ ಮನೋಭಾವವನ್ನು ಹೋಗಲಾಡಿಸಿ.

ನಿಮ್ಮ ಸಂಗಾತಿಯನ್ನು ಪರಿಚಯಿಸಿ:

ನಿಮ್ಮ ಸಂಗಾತಿಯನ್ನು ನಿಮ್ಮ ಹೆತ್ತವರಿಗೆ ಪರಿಚಯಿಸಲು ಪ್ರಯತ್ನಿಸಿ. ಇದು ಅವರಿಗೆ ನಿಮ್ಮ ಜೀವನ ಸಂಗಾತಿಯನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ನಿಮ್ಮ ಸಂಗಾತಿಯ ಉತ್ತಮ ನಡವಳಿಕೆ, ಗುಣ ನಡತೆ ಇಷ್ಟವಾದರೆ ಮದುವೆಗೆ ಪಕ್ಕಾ ಒಕೆ ಹೇಳ್ತಾರೆ.

ನಿಮ್ಮ ಪೋಷಕರಿಗೆ ಸಮಯ ನೀಡಿ:

ನಿಮ್ಮ ನಿರ್ಧಾರದ ಬಗ್ಗೆ ಯೋಚಿಸಲು ಮತ್ತು ಅದನ್ನು ಸ್ವೀಕರಿಸಲು ನಿಮ್ಮ ಪೋಷಕರಿಗೆ ಸಮಯ ನೀಡಿ. ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಬೇಡಿ; ತಾಳ್ಮೆಯಿಂದಿರಿ. ಕಾಲಾನಂತರದಲ್ಲಿ, ಅವರು ನಿಮ್ಮ ನಿರ್ಧಾರವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಮದುವೆಗೆ ಒಪ್ಪಿಗೆ ನೀಡುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 19 August 26

Loading...
Unable to load recommendations.
Follow Us