ಮನೆಯಲ್ಲಿ ಸುಲಭವಾಗಿ ತಾವರೆ ಗಿಡವನ್ನು ಬೆಳೆಯಬಹುದು; ಅದಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ

ಕಮಲದ ಹೂವನ್ನು ಶುದ್ಧತೆ, ಶಾಂತಿ ಮತ್ತು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಪೂಜೆಗಳಲ್ಲೂ ಈ ಹೂವಿಗೆ ವಿಶೇಷ ಮಹತ್ವವಿದೆ. ಈ ಸುಂದರ ಪುಷ್ಪವನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು. ಕೆರೆ, ಕೊಳದಂತೆ ದೊಡ್ಡ ಸ್ಥಳಾವಕಾಶದ ಅವಶ್ಯಕತೆಯಿಲ್ಲ ಮನೆಯಂಗಳ ಮತ್ತು ಟೆರೇಸ್‌ನಲ್ಲಿರುವ ಸ್ವಲ್ಪ ಜಾಗದಲ್ಲಿಯೂ ಟಬ್‌ನಲ್ಲಿ ತಾವರೆ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಅದಕ್ಕಾಗಿ ಈ ಟಿಪ್ಸ್‌ ಪಾಲಿಸಿದರೆ ಸಾಕು.

ಮನೆಯಲ್ಲಿ ಸುಲಭವಾಗಿ ತಾವರೆ ಗಿಡವನ್ನು ಬೆಳೆಯಬಹುದು; ಅದಕ್ಕಾಗಿ ಈ ಟಿಪ್ಸ್‌ ಫಾಲೋ ಮಾಡಿ
ತಾವರೆ ಗಿಡ
Image Credit source: vecteezy

Updated on: Nov 23, 2026 | 6:15 PM

ಹೂವಿನ ಗಿಡಗಳು (Flower Plant) ಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ ಜೊತೆಗೆ ಸಕಾರಾತ್ಮಕತೆಯನ್ನೂ ಹರಡುತ್ತವೆ. ಅದಕ್ಕಾಗಿಯೇ ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಮಲ್ಲಿಗೆ, ಗುಲಾಬಿ, ದಾಸವಾಳ, ಪಾರಿಜಾತ ಸೇರಿದಂತೆ ಸಾಕಷ್ಟು ಬಗೆಯ ಹೂವಿನ ಗಿಡಗಳನ್ನು ನೆಡುತ್ತಾರೆ. ಆದರೆ ನೋಡಲು ತುಂಬಾನೇ ಸುಂದರವಾಗಿರುವ ಹಾಗೂ ಲಕ್ಷ್ಮಿ ದೇವಿಗೆ ಪ್ರಿಯವಾಗಿರುವ ತಾವರೆ ಹೂವನ್ನು ಬೆಳೆಯುವುದು ತುಂಬಾನೇ ಕಷ್ಟಕರ ಎಂದು ಭಾವಿಸುತ್ತಾರೆ. ಹೌದು ಹೆಚ್ಚಿನವರು ಇದಕ್ಕೆ ಕೊಳ, ಕೆರೆಯಂತೆ ಸಾಕಷ್ಟು ಸ್ಥಳಾವಾಕಾಶ ಬೇಕೆಂದು ಭಾವಿಸುತ್ತಾರೆ. ಇನ್ನೂ ಕೆಲವರು ತಾವರೆ ಗಿಡ ನೆಟ್ಟು ಎಷ್ಟು ಆರೈಕೆ ಮಾಡಿದರೂ ಗಿಡದಲ್ಲಿ ಹೂವೇ ಬೀಡೋದಿಲ್ಲ. ಹೀಗಿರುವಾಗ ಈ ಕೆಲವೊಂದು ಸರಳ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಮನೆಯಲ್ಲಿರುವ ಸ್ವಲ್ಪ ಜಾಗದಲ್ಲಿಯೇ ಕಮಲದ ಹೂವಿನ ಗಿಡವನ್ನು ಬೆಳೆಯಬಹುದು.

ತಾವರೆ ಗಿಡವನ್ನು ಬೆಳೆಯುವ ಸರಿಯಾದ ವಿಧಾನ:

ಮೊದಲು ಕಮಲದ ಗಡ್ಡೆಯನ್ನು ಖರೀದಿಸಿ:

ಕಮಲದ ಗಿಡವನ್ನು ನೆಡಲು, ಬೀಜಗಳ ಬದಲಿಗೆ ಗೆಡ್ಡೆಯನ್ನು ಬಳಸುವುದು ತುಂಬಾನೇ ಉತ್ತಮ. ಬೀಜಗಳಿಗಿಂತ  ಗೆಡ್ಡೆಯ ಮೂಲಕ ಗಿಡಗಳು ಬೇಗನೆ ಬೆಳೆಯುತ್ತವೆ. ಅದಕ್ಕಾಗಿ ಉತ್ತಮ ಸ್ಥಿತಿಯಲ್ಲಿರುವ ಕಮಲದ ಗೆಡ್ಡೆಯನ್ನು ಖರೀದಿಸಿ, ನೀವು ಆನ್‌ಲೈನ್‌ನಿಂದಲೂ ಇದನ್ನು ಖರೀದಿಸಬಹುದು. ನರ್ಸರಿಯಿಂದಲೂ ಖರೀದಿ ಮಾಡಬಹುದು.

Loading...

ದೊಡ್ಡ ಟಬ್ ಆಯ್ಕೆ ಮಾಡುವುದು ಉತ್ತಮ:

ಕಮಲದ ಗಿಡವನ್ನು ನೆಡಲು ಅಗಲವಾದ ಟಬ್ ಅಥವಾ ಕುಂಡವನ್ನು ಆರಿಸಿ ಅವುಗಳ ಕೆಳಭಾಗದಲ್ಲಿ ರಂಧ್ರಗಳಿರಂತೆ ನೋಡಿಕೊಳ್ಳಿ.  ಕಮಲದ ಬೇರುಗಳು ಹರಡಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ, ಆದ್ದರಿಂದ ತುಂಬಾ ಚಿಕ್ಕದಾದ ಟಬ್‌ಗಳನ್ನು ಬಳಸುವುದನ್ನು ತಪ್ಪಿಸಿ.

ಟಬ್‌ಗೆ ಜೇಡಿಮಣ್ಣನ್ನು ಸೇರಿಸಿ:

ಕಮಲದ ಗಿಡ ಸೊಂಪಾಗಿ ಬೆಳೆಯಲು ನೀರಿನಲ್ಲಿ ಸುಲಭವಾಗಿ ಕರಗದ ಮತ್ತು ಕೆಳಭಾಗದಲ್ಲಿ ಕುಳಿತುಕೊಳ್ಳುವ ಮಣ್ಣನ್ನು ಆರಿಸಿ. ಟಬ್ ಅನ್ನು ಸುಮಾರು 10 ರಿಂದ 15 ಸೆಂಟಿಮೀಟರ್ ಮಣ್ಣಿನಿಂದ ತುಂಬಿಸಿ. ನಂತರ, ಸ್ವಲ್ಪ ನೀರು ಸೇರಿಸಿ ಮತ್ತು ಮಣ್ಣು ಸ್ವಲ್ಪ ಸಮಯದವರೆಗೆ ನೆಲೆಗೊಳ್ಳಲು ಬಿಡಿ. ಮಣ್ಣಿಗೆ ಹೆಚ್ಚು ಗೊಬ್ಬರ ಅಥವಾ ಹಗುರವಾದ ಮಣ್ಣನ್ನು ಸೇರಿಸುವುದನ್ನು ತಪ್ಪಿಸಿ. ಏಕೆಂದರೆ ಇದು ನೀರನ್ನು ಕೆಸರುಮಯವಾಗಿಸುತ್ತದೆ ಮತ್ತು ಮಣ್ಣು ತೇಲುವಂತೆ ಮಾಡುತ್ತದೆ.

ಗೆಡ್ಡೆಯನ್ನು ಮಣ್ಣಿನಲ್ಲಿ ಇರಿಸುವ ವಿಧಾನ:

ಮಣ್ಣು ಸಿದ್ಧವಾದ ನಂತರ, ತಾವರೆ ಗೆಡ್ಡೆಯನ್ನು ಅಡ್ಡಲಾಗಿ ಟಬ್‌ನ ಮಣ್ಣಿನಲ್ಲಿ ನೆಡಿ. ಮಣ್ಣಿನಲ್ಲಿ 1 ಇಂಚು ಆಳದಲ್ಲಿ ಹೂಳಿದರೆ ಉತ್ತಮ. ನಂತರ  ಮಣ್ಣಿಗೆ ನಿಧಾನವಾಗಿ ನೀರು ಹಾಕಿ.

ನಿಧಾನವಾಗಿ ಟಬ್‌ಗೆ ನೀರು ತುಂಬಿಸಿ:

ಗೆಡ್ಡೆಯನ್ನು ನೆಟ್ಟ ನಂತರ, ಟಬ್‌ ಅನ್ನು ನೀರಿನಿಂದ ತುಂಬಿಸಿ. ಆರಂಭದಲ್ಲಿ, ಮಣ್ಣು ಮತ್ತು ಗೆಡ್ಡೆ ನೀರಿನಲ್ಲಿ ಮುಳುಗುವಷ್ಟು ನೀರನ್ನು ಹಾಕಿದರೆ ಸಾಕು. 7 ದಿನಗಳ ನಂತರ ಗೆಡ್ಡೆಯ ಮೇಲೆ ಎಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಎಲೆಗಳು ಕಾಣಿಸಿಕೊಂಡ ನಂತರ, ಟಬ್ ಅನ್ನು ಸಂಪೂರ್ಣವಾಗಿ ನೀರಿನಿಂದ ತುಂಬಿಸಿ.

ಇದನ್ನೂ ಓದಿ: ಹೂಕೋಸುಗಳಲ್ಲಿ ಅಡಗಿಡುವ ಹುಳಗಳನ್ನು ಈಸಿಯಾಗಿ ತೆಗೆದುಹಾಕಲು ಈ ಕ್ಲೀನಿಂಗ್‌ ಟಿಪ್ಸ್‌ ಅನುಸರಿಸಿ

ಕಮಲದ ಗಿಡವನ್ನು ಹೇಗೆ ಕಾಳಜಿ ವಹಿಸುವುದು?

  • ಟಬ್‌ನಲ್ಲಿರುವ ನೀರನ್ನು ಎಂದಿಗೂ ಸಂಪೂರ್ಣವಾಗಿ ಆವಿಯಾಗಲು ಬಿಡಬೇಡಿ.
  • ವಾರಕ್ಕೊಮ್ಮೆ ನೀರನ್ನು ಬದಲಾಯಿಸುವುದು ಪ್ರಯೋಜನಕಾರಿ. ಶುದ್ಧ ನೀರು ಸಸ್ಯವನ್ನು ಆರೋಗ್ಯಕರವಾಗಿಡುತ್ತದೆ.
  • ತಿಂಗಳಿಗೊಮ್ಮೆ ನೀರಿಗೆ ಸಾವಯವ ಗೊಬ್ಬರ ಹಾಕಿ.
  • ಕಾಲಕಾಲಕ್ಕೆ ಹಳದಿ ಅಥವಾ ಒಣಗಿದ ಎಲೆಗಳನ್ನು ಕತ್ತರಿಸುತ್ತಿರಿ. ಇದು  ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ನೀವು ಬಯಸಿದರೆ ನೀರಿಗೆ ಮೀನನ್ನು ಕೂಡ ಸೇರಿಸಬಹುದು.
  • ಕಮಲದ ಗಿಡಗಳು ಸೂರ್ಯನ ಬೆಳಕನ್ನು ಇಷ್ಟಪಡುತ್ತವೆ. ಪ್ರತಿದಿನ ಕನಿಷ್ಠ ಆರು ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಟಬ್‌  ಇರಿಸಿ. ಸಾಕಷ್ಟು ಸೂರ್ಯನ ಬೆಳಕು ಸರಿಯಾದ ಎಲೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಹೂಬಿಡುವಿಕೆಯನ್ನು ಉತ್ತೇಜಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us