ಮಕ್ಕಳು ಎಷ್ಟು ಹೊತ್ತು ಮೊಬೈಲ್ ಅಥವಾ ಟಿವಿ ವೀಕ್ಷಿಸಬಹುದು?
ಮಕ್ಕಳು ಇತ್ತೀಚೆಗೆ ಆಟ, ಪಾಠವನ್ನೆಲ್ಲಾ ಬಿಟ್ಟು ಸದಾ ಮೊಬೈಲ್, ಟಿವಿ ಪರದೆಗೆ ಅಂಟಿಕೊಂಡಿದ್ದಾರೆ. ಕೊರೊನಾ ಬಂದು ಶಾಲೆಗಳು ಬಂದಾಗಿದ್ದ ಸಮಯದಲ್ಲಂತೂ ಮೊಬೈಲ್ ಹಾಗೂ ಟಿವಿಗಳ ಬಳಕೆ ಹೇಳತೀರದು.
ಮಕ್ಕಳು ಇತ್ತೀಚೆಗೆ ಆಟ, ಪಾಠವನ್ನೆಲ್ಲಾ ಬಿಟ್ಟು ಸದಾ ಮೊಬೈಲ್, ಟಿವಿ ಪರದೆಗೆ ಅಂಟಿಕೊಂಡಿದ್ದಾರೆ. ಕೊರೊನಾ ಬಂದು ಶಾಲೆಗಳು ಬಂದಾಗಿದ್ದ ಸಮಯದಲ್ಲಂತೂ ಮೊಬೈಲ್ ಹಾಗೂ ಟಿವಿಗಳ ಬಳಕೆ ಹೇಳತೀರದು. ಮೊಬೈಲ್ ಅಥವಾ ಟಿವಿ ವೀಕ್ಷಣೆ ಅತಿಯಾದರೆ ಮಕ್ಕಳು ಮಾತ್ರವಲ್ಲ ದೊಡ್ಡವರ ಮೇಲೂ ಪರಿಣಾಮ ಬೀರುತ್ತದೆ. ಊಟ ಮಾಡುವ ಸಮಯದಲ್ಲಿ, ನಿದ್ದೆಗೂ ಮುನ್ನ ಅತಿಯಾಗಿ ಎಲೆಕ್ಟ್ರಾನಿಕ್ ಉಪಕರಣಗಳು ಬಳಕೆ ಮಾಡುವುದರಿಂದ ಮಕ್ಕಳು ಹಾಗೂ ಪೋಷಕರ ನಡುವೆ ಅಂತರ ಹೆಚ್ಚಾಗುತ್ತದೆ.
ಮಕ್ಕಳಿಗೆ ಸೋಶಿಯಲ್ ಮೀಡಿಯಾ, ಹೊಸ ಟೆಕ್ನಾಲಜಿ ಬಗ್ಗೆ ತಿಳಿಸಿಕೊಡುವ ಮೊದಲು ಅದರಿಂದಾಗುವ ಪ್ರಯೋಜನ ಹಾಗೂ ದುಷ್ಪರಿಣಾಮ ಎರಡರ ಬಗ್ಗೆಯೂ ಮಾಹಿತಿ ನೀಡಬೇಕು.
ಶೆಡ್ಯೂಲ್ ಕ್ರಿಯೇಟ್ ಮಾಡಿ: ಮಕ್ಕಳಿಗೆ ಈ ಸಮಯದಲ್ಲಿ ಓದಬೇಕು, ಈ ಸಮಯದಲ್ಲಿ ಆಟವಾಡಬೇಕು, ಈ ಸಮಯದಲ್ಲಿ ಊಟ ಮಾಡಬೇಕು ಹೀಗೆ ಈ ಸಮಯದಲ್ಲಿ ಮೊಬೈಲ್ ಅಥವಾ ಟಿವಿ ನೋಡಬೇಕು ಎನ್ನುವ ಶೆಡ್ಯೂಲ್ ಅನ್ನು ಸಿದ್ಧಪಡಿಸಿ. ಮಕ್ಕಳು ದಿನಕ್ಕೆ ಒಂದು ಗಂಟೆ ಟಿವಿ ನೋಡಿದರೆ ಸಾಕು.
ಮಕ್ಕಳ ಜತೆ ಸಮಯ ಕಳೆಯಿರಿ: ಮಕ್ಕಳ ಜತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ ಆದರೆ ಯಾವುದೇ ಸ್ಕ್ರೀನ್ ಬಳಕೆ ಮಾಡದೇ ಮನೆಯಲ್ಲಿಯೇ ಬೇರೆ ಬೇರೆ ಚಟುವಟಿಕೆಗಳನ್ನು ಮಾಡುವ ಮೂಲಕ ಮಕ್ಕಳನ್ನು ಸದಾ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ.
ಯೋಗಾಭ್ಯಾಸ: ಹೆಚ್ಚು ಸಮಯವನ್ನು ಯೋಗ, ಪ್ರಾಣಾಯಾಮ ಮಾಡುವುದರೊಂದಿಗೆ ಕಳೆಯಿರಿ, ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿಸಿ.
ಪೋಷಕರ ನಡುವೆ ಅಂತರ ಹೆಚ್ಚಲಿದೆ: ಮಕ್ಕಳು ಸದಾ ಅವರ ಪ್ರಪಂಚದಲ್ಲಿದ್ದು, ಪೋಷಕರು ಕೂಡ ಮಕ್ಕಳನ್ನು ಅವರಿಷ್ಟದಂತೆ ಬಿಟ್ಟರೆ ಪೋಷಕರು ಹಾಗೂ ಮಕ್ಕಳ ನಡುವೆ ಅಂತರ ಹೆಚ್ಚಲಿದೆ. ಮುಂದೊಂದು ದಿನ ಅವರು ನಿಮ್ಮ ಮಾತುಗಳನ್ನೇ ನಿರ್ಲಕ್ಷಿಸುವ ಸಾಧ್ಯತೆ ಇದೆ.
ಮಾನಸಿಕ ಸಮಸ್ಯೆ ಹೆಚ್ಚಬಹುದು: ಹೆಚ್ಚೆಚ್ಚು ಮೊಬೈಲ್ಗಳ ಬಳಕೆ ಮಾಡುತ್ತಿದ್ದರೆ ಸ್ನೇಹಿತರು, ಪೋಷಕರು, ಸಂಬಂಧಿಗಳ ಸಂಪರ್ಕವನ್ನೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಹಠ ಮನೋಭಾವ ಹೆಚ್ಚಾಗುತ್ತದೆ, ಮಾನಸಿಕ ಸಮಸ್ಯೆಗೂ ಕಾರಣವಾಗಬಹುದು.
ಈ ಮೇಲಿನ ಲೇಖನ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ