AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ

ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ್ದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಅಲ್ಲದೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೆಲೋಡಿ ಚಾಕೊಲೇಟ್‌ ಭರ್ಜರಿಯಾಗಿ ಮಾರಾಟವಾಗಿತ್ತು. ಈ ಚಾಕೊಲೇಟ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಈ ಮೆಲೋಡಿ ಚಾಕೊಲೇಟ್‌ ರೆಸಿಪಿಯ ಪೂರ್ಣ ಮಾಹಿತಿ ಇಲ್ಲಿದೆ.

ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ
ಮೆಲೋಡಿ ಚಾಕೊಲೇಟ್‌ ರೆಸಿಪಿImage Credit source: Social Media
ಮಾಲಾಶ್ರೀ ಅಂಚನ್​
|

Updated on:May 23, 2026 | 5:38 PM

Share

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ರಾಜಧಾನಿ ರೋಮ್‌ಗೆ ಅಧಿಕೃತ ಭೇಟಿ ನೀಡಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ  ಮೆಲೋನಿಗೆ ಅವರಿಗೆ ಪಾರ್ಲೆ ಪ್ರಾಡಕ್ಟ್ಸ್‌ ಸಂಸ್ಥೆಯ ಮೆಲೋಡಿ (melody) ಚಾಕೊಲೇಟ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವಿಡಿಯೋವಂತೂ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಆ ಬಳಿಕ ಮೆಲೋಡಿ ಚಾಕೊಲೇಟ್‌ ಖರೀದಿಯು ಸಹ ಹೆಚ್ಚಾಗಿತ್ತು. ಈ ಟಾಫಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮೆಲೋಡಿ ಚಾಕೊಲೇಟ್‌ ರೆಸಿಪಿಯ ಪೂರ್ಣ ಮಾಹಿತಿ ಇಲ್ಲಿದೆ.

ಮೆಲೋಡಿ ಚಾಕೊಲೇಟ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

2 ರಿಂದ 3 ಟೇಬಲ್ ಸ್ಪೂನ್ ಕೋಕೋ ಪೌಡರ್, 1/2 ಕಪ್ ಕಂಡೆನ್ಸ್ಡ್ ಮಿಲ್ಕ್, 2 ಟೇಬಲ್ ಸ್ಪೂನ್ ಬೆಣ್ಣೆ, 1/4 ಕಪ್ ಹಾಲಿನ ಪುಡಿ,  ರಿಂದ 3 ಟೇಬಲ್ ಸ್ಪೂನ್ ಸಕ್ಕರೆ, ಸ್ಪಲ್ಪ ಕ್ರೀಮ್‌, ಸ್ವಲ್ಪ ವೆನಿಲ್ಲಾ ಎಸೆನ್ಸ್

ಇದನ್ನೂ ಓದಿ: ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?

ಮೆಲೋಡಿ ಚಾಕೊಲೇಟ್‌ ತಯಾರಿಸುವ ಸುಲಭ ವಿಧಾನ:

  • ಮೊದಲು, ಸಕ್ಕರೆಯನ್ನು ನಾನ್-ಸ್ಟಿಕ್ ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಕರಗಲು (ಕ್ಯಾರಮೆಲೈಸ್ ಆಗಲು) ಬಿಡಿ. ಸಕ್ಕರೆ ಕರಗಿ ತಿಳಿ ಚಿನ್ನದ ಬಣ್ಣಕ್ಕೆ ತಿರುಗಿದಾಗ, ಬೆಣ್ಣೆ ಮತ್ತು ಹಾಲು ಸೇರಿಸಿ. ಈ ಮಿಶ್ರಣವನ್ನು ಉಂಡೆಗಳು ರೂಪುಗೊಳ್ಳದಂತೆ ನಿರಂತರವಾಗಿ ಬೆರೆಸಿ.
  • ಇದೀಗ ಈ ಮಿಶ್ರಣಕ್ಕೆ ಕೋಕೋ ಪೌಡರ್ ಮತ್ತು ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ದಪ್ಪವಾಗಲು ಪ್ರಾರಂಭಿಸಿದಾಗ, ಕ್ರೀಮ್, ಕಂಡೆನ್ಸ್ಡ್ ಮಿಲ್ಕ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಮಿಶ್ರಣವು ತುಂಬಾ ದಪ್ಪವಾಗುವವರೆಗೆ ಮತ್ತು ಚಾಕೊಲೇಟ್‌ ಹದಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿ.
  • ನಂತರ ಒಂದು ಬಟ್ಟಲಿಗೆ ತುಪ್ಪವನ್ನು ಹರಡಿ, ಮೊದಲೇ ತಯಾರಿಸಿಟ್ಟ ಚಾಕೊಲೇಟ್‌ ಮಿಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಲು ಬಿಡಿ.
  • ನಂತರ ಅದನ್ನು ಒಂದು ಚಾಕುವಿನ ಸಹಾಯದಿಂದ ಸಣ್ಣ ಚೌಕ ಅಥವಾ ಆಯತಾಕಾರದ ಚಾಕೊಲೇಟ್‌ ಆಕಾರದಲ್ಲಿ ಕತ್ತರಿಸಿ. ನೀವು ಬಯಸಿದರೆ, ಚಾಕೊಲೇಟ್‌ ಮಧ್ಯದಲ್ಲಿ ಸ್ವಲ್ಪ ಚಾಕೊಲೇಟ್ ಸಿರಪ್ ಅನ್ನು ಸಹ ತುಂಬಿಸಬಹುದು.
  • ತಯಾರಾದ ಚಾಕೊಲೇಟ್‌ ಅನ್ನು ಬೆಣ್ಣೆ ಕಾಗದದ ಮೇಲೆ ಇರಿಸಿ ಮತ್ತು ರೆಫ್ರಿಜರೇಟರ್‌ನಲ್ಲಿ 1 ರಿಂದ 2 ಗಂಟೆಗಳ ಕಾಲ ಸೆಟ್‌ ಆಗಲು ಬಿಡಿ. ಅದು ಸಂಪೂರ್ಣವಾಗಿ ಗಟ್ಟಿಯಾದ ನಂತರ, ನೀವು ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Sat, 23 May 26

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ