ಮನೆಯ ಕಪಾಟಿನಲ್ಲಿನ ಬಟ್ಟೆಗಳನ್ನು ಜೋಡಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಈಗಿನ ಕಾಲದಲ್ಲಿ ಎಷ್ಟು ಬಟ್ಟೆಗಳು ಖರೀದಿಸಿದರೂ ಕೂಡ ಸಾಲಲ್ಲ. ಮನೆಯ ಕಪಾಟಿನ ತುಂಬಾ ಬಟ್ಟೆಗಳದ್ದೇ ರಾಶಿ. ಕಪಾಟಿನ ಬಾಗಿಲು ತೆರೆಯುತ್ತಿದ್ದಂತೆ ಬಟ್ಟೆಗಳಲ್ಲೆವು ಕಳಗೆ ಬೀಳುವುದಿದೆ. ಹೀಗಾಗಿ ಬಟ್ಟೆಗಳನ್ನು ಜೋಡಿಸಿ ಇಡುವುದು ಕೂಡ ಕಷ್ಟದ ಕೆಲಸ. ಎಷ್ಟೇ ನೀಟಾಗಿ ಜೋಡಿಸಿಟ್ಟರೂ ಎರಡು ದಿನ ಬಿಟ್ಟು ನೋಡಿದರೆ ಮತ್ತೆ ಹಾಗೆಯೇ ಇರುತ್ತದೆ. ಹೀಗಾಗಿ ಕಪಾಟಿನಲ್ಲಿ ಬಟ್ಟೆಗಳನ್ನು ಜೋಡಿಸಿಡುವಾಗ ಈ ಕೆಲವು ಸಲಹೆಗಳನ್ನು ಅನುಸರಿಸುವುದು ಸೂಕ್ತವಾಗಿದ್ದು, ಆ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ
ಹೆಣ್ಣು ಮಕ್ಕಳಿಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದೇ ತಲೆ ನೋವಿನ ಕೆಲಸ. ಅದರಲ್ಲಿಯೂ ಮನೆಯ ಕಪಾಟು ಅಥವಾ ಕಬೋರ್ಡ್ ನಲ್ಲಿರುವ ಬಟ್ಟೆಗಳನ್ನು ಎಷ್ಟು ಜೋಡಿಸಿಟ್ಟರೂ ಸಾಲದು. ಕೆಲವೊಮ್ಮೆ ಕಪಾಟಿ ಬಾಗಿಲು ತೆರೆಯುತ್ತಿದ್ದಂತೆ ಬಟ್ಟೆಗಳೆಲ್ಲವೂ ಕೆಳಗೆ ಬೀಳುವುದಿದೆ. ಮಡಚಿ ಇಡಲು ಸಮಯವಿಲ್ಲದೇ ಅದನ್ನು ಹಾಗೆಯೇ ತುಂಬಿ ಇಡುವವವರೇ ಹೆಚ್ಚು. ಕೆಲವೊಮ್ಮೆ ಇದು ಮುಜುಗರಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯೊಂದಿಗೆ ಕಪಾಟನ್ನು ಕೂಡ ಅಷ್ಟೇ ನೀಟಾಗಿ ಜೋಡಿಸಿಡುವುದು ಅಗತ್ಯ. ನೀವೇನಾದ್ರು ಮನೆಯ ಕಬೋರ್ಡ್ ಸ್ವಚ್ಛವಾಗಿಟ್ಟುಕೊಳ್ಳಲು ಬಯಸಿದರೆ ಈ ಕೆಲವು ಟಿಪ್ಸ್ ಗಳು ನಿಮಗೆ ಉಪಯೋಗಕ್ಕೆ ಬರಬಹುದು.
- ಕಪಾಟು ಖರೀದಿ ಮಾಡುವಾಗ ನಿಮ್ಮ ಬಟ್ಟೆಗಳನ್ನು ಜೋಡಿಸಲು ಸಾಕಾಗುವಷ್ಟು ಸ್ಥಳವಕಾಶವಿದೆಯೇ ಎಂದು ಗಮನಿಸುವುದು ಬಹಳ ಮುಖ್ಯ. ದೊಡ್ಡ ಕಪಾಟು ಖರೀದಿ ಮಾಡಿದರೆ ನಿಮ್ಮ ಮನೆಯಲ್ಲಿ ಇಡಲು ಸ್ಥಳವಕಾಶವಿದೆಯೇ ಎಂದು ನೋಡಿ. ಈ ಎಲ್ಲ ಅಂಶಗಳನ್ನು ಗಮನಿಸಿ ಬಟ್ಟೆಗಳನ್ನು ಇಡಲು ಯೋಗ್ಯವಾದ ಕಬೋರ್ಡ್ ಗಳನ್ನು ಖರೀದಿ ಮಾಡಿ.
- ಕಪಾಟು ಸರಿಯಾಗಿದೆಯೇ ಇದೆಯೇ ಎನ್ನುವುದನ್ನು ಗಮನಿಸಿ, ಕೆಲವೊಮ್ಮೆ ಒಂದೇ ಬದಿಯಲ್ಲಿ ಹೆಚ್ಚಿನ ತೂಕವಿದ್ದರೆ ಬಟ್ಟೆಗಳನ್ನು ಜೋಡಿಸಿಟ್ಟರೂ ಬಾಗಿಲು ತೆರೆಯುತ್ತಿದ್ದಂತೆ ಕಳಗೆ ಬೀಳುತ್ತದೆ. ಈ ಬಗ್ಗೆ ಗಮನ ಹರಿಸಿ ಖರೀದಿ ಮಾಡುವುದು ಸೂಕ್ತ.
- ಕಪಾಟಿನಲ್ಲಿ ಬಟ್ಟೆಯ ಜೊತೆ ಜೊತೆಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಇಡಬೇಡಿ. ಇದರಿಂದ ಬೀರು ಹೆಚ್ಚು ತೂಕವನ್ನು ಹೊಂದುತ್ತದೆ. ಬಟ್ಟೆಗಳಿಂದ ಇತರ ವಸ್ತುಗಳೇ ತುಂಬಿಕೊಳ್ಳುವುದರಿಂದ ಭಾರ ಹೆಚ್ಚಾಗಿ ಬಾಗಿಲು ತೆರೆಯುತ್ತಿದ್ದಂತೆ ಬಟ್ಟಗಳು ಕೆಳಗೆ ಬೀಳುವ ಸಾಧ್ಯತೆಯೇ ಹೆಚ್ಚು.
- ಸರಿಯಾದ ಸ್ಥಳಗಳಲ್ಲಿ ಬೀರುವನ್ನು ಇರಿಸಿ. ಕಪಾಟಿನಲ್ಲಿ ಸ್ಥಳಾವಕಾಶ ಇರುವಷ್ಟೇ ಬಟ್ಟೆ ಹಾಗೂ ಇತರ ವಸ್ತುಗಳನ್ನು ಜೋಡಿಸಿಡಿ. ಅಗತ್ಯಕ್ಕಿಂತ ಹೆಚ್ಚು ಜೋಡಿಸುವುದರಿಂದ ನೀಟಾಗಿ ಕಾಣುವುದಿಲ್ಲ. ಅದಲ್ಲದೇ ಕಬೋರ್ಡಿನ ಕೆಳಭಾಗದಲ್ಲಿ
- ಕಪಾಟಿನಲ್ಲಿ ರ್ಯಾಕ್ ಗಳಿದ್ದರೆ ಒಳ್ಳೆಯದು. ಎಲ್ಲ ಬಟ್ಟೆಗಳನ್ನು ಒಂದೆಡೆ ಜೋಡಿಸಿಡುವ ಬದಲು, ಅಗತ್ಯವಿರುವ ಹಾಗೂ ಸಮಾರಂಭಗಳಿಗೆ ಧರಿಸುವ ಬಟ್ಟೆಗಳನ್ನು ಬೇರೆ ಬೇರೆ ಕಡೆ ಜೋಡಿಸಬಹುದು. ಹೀಗೆ ಜೋಡಿಸಿಟ್ಟರೆ ನಿಮಗೆ ಬೇಕಾದ ಬಟ್ಟೆಯೂ ಕೈ ಹಾಕಿದ ಕೂಡಲೇ ಸಿಗುತ್ತದೆ. ಅದಲ್ಲದೇ ಹ್ಯಾಂಗರ್ ಗಳನ್ನು ಬಳಸಿ, ಬಟ್ಟೆಯನ್ನು ತುಂಬಿಸಿಟ್ಟು ಬಲವಂತವಾಗಿ ಬಾಗಿಲನ್ನು ಮುಚ್ಚಬೇಡಿ. ಹೀಗೆ ಮಾಡಿದರೆ ಬಾಗಿಲು ತೆರೆಯುತ್ತಿದ್ದಂತೆ ಬಟ್ಟೆಗಳು ಕೆಳಗೆ ಬೀಳುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ