ರಾಮಮಂದಿರ ಉದ್ಘಾಟನೆಯಂದು ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ಹಲ್ವಾ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಿದ್ದು, ನಿನ್ನೆಯಿಂದಲೇ ಪ್ರಾಣಪ್ರತಿಷ್ಠೆಯ ಮುಂಚಿತವಾಗಿ ನಡೆಯಬೇಕಾದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದೆ. ಈ ನಡುವೆ ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿಯು ಹಬ್ಬದ ವಾತಾವರಣವು ಸೃಷ್ಟಿಯಾಗಿದ್ದು, ಜನವರಿ 22ರಂದು ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡಿ ಸವಿಯದೇ ಇದ್ದರೆ ಹೇಗೆ ಅಲ್ಲವೇ. ಮನೆಯಲ್ಲಿ ಗೋಧಿ ಹಿಟ್ಟು ಇದ್ದರೆ, ಹಲ್ವಾ ಮಾಡಿ ಮನೆಯ ಸದಸ್ಯರು ಸವಿಯಬಹುದಾಗಿದೆ. ಹಾಗಾದ್ರೆ ಈ ಸಿಂಪಲ್ ರೆಸಿಪಿ ಮಾಡುವುದು ಹೇಗೆ? ಇಲ್ಲಿದೆ ನೋಡಿ.

ರಾಮಮಂದಿರ ಉದ್ಘಾಟನೆಯಂದು ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ಹಲ್ವಾ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2024 | 4:34 PM

ಗೋಧಿ ಹಿಟ್ಟು ಎಂದ ತಕ್ಷಣ ಮೊದಲು ನೆನಪಾಗುವುದು ಚಪಾತಿ. ಆದರೆ ಈ ಗೋಧಿ ಹಿಟ್ಟಿನಿಂದ ವೈರಂಟಿ ವೈರಂಟಿ ಸಿಹಿ ತಿಂಡಿಗಳನ್ನು ಮಾಡಿ ಸವಿಸುವುದಕ್ಕೆ ಇದೊಂದು ಒಳ್ಳೆಯ ಸಮಯ. ಸುಲಭವಾಗಿ ಮಾಡಬಹುದಾದ ಸಿಹಿ ತಿಂಡಿಗಳಲ್ಲಿ ಈ ಗೋಧಿ ಹಿಟ್ಟಿನ ಹಲ್ವಾ ಅಥವಾ ಗುರ್ ಕಾ ಹಲ್ವಾ ಕೂಡ ಒಂದು. ಶ್ರೀರಾಮಮಂದಿರದ ಉದ್ಘಾಟನೆಯ ದಿನದಂದು ಮನೆಯಲ್ಲಿ ಸಿಹಿತಿಂಡಿಗಳನ್ನು ಮಾಡಬೇಕೆಂದುಕೊಂಡವರು ಸಿಂಪಲ್ ರೆಸಿಪಿಯಾಗಿರುವ ಗೋಧಿಹಿಟ್ಟಿನಿಂದ ಹಲ್ವಾ ಮಾಡಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು:

ಸಕ್ಕರೆ- 1 ಕಪ್, ಗೋಧಿ ಹಿಟ್ಟು- 2ಕಪ್, ತುಪ್ಪ- ಅರ್ಧ ಕಪ್ ಹಾಗೂ ಸ್ವಲ್ಪ ದ್ರಾಕ್ಷಿ, ಗೋಡಂಬಿ.

ಗೋಧಿ ಹಿಟ್ಟಿನ ಹಲ್ವಾ ಮಾಡುವ ವಿಧಾನ:

* ಒಂದು ಪಾತ್ರೆಯಲ್ಲಿ ಸಕ್ಕರೆ, ಅಳತೆಗೆ ತಕ್ಕಂತೆ ನೀರು ಹಾಕಿ ಕುದಿಸಿಕೊಂಡು ಸಕ್ಕರೆಯ ಮಿಶ್ರಣ ಮಾಡಿಕೊಳ್ಳಿ.

* ಬಾಣಲೆಗೆ ಸ್ವಲ್ಪ ಪ್ರಮಾಣದಲ್ಲಿ ತುಪ್ಪ, ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗಾಗಲೇ ಸಿದ್ಧವಿರುವ ಸಕ್ಕರೆ ನೀರಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಯಾಕೆ ಕುಡಿಯಬೇಕು?; ತಜ್ಞರ ಸಲಹೆ ಇಲ್ಲಿದೆ

* ಗೋಧಿ ಹಿಟ್ಟಿನ ಈ ಮಿಶ್ರಣಕ್ಕೆ ಆಗಾಗ ತುಪ್ಪ ಹಾಕುತ್ತಾ ಕೈಯಾಡಿಸುತ್ತ ಇರಿ. ತಳ ಬಿಡುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ.

* ಕೊನೆಗೆ ತುಪ್ಪ ಸವರಿದ ಬಟ್ಟಲಿಗೆ ಮಿಶ್ರಣವನ್ನು ಹಾಕಿದರೆ, ಗೋಧಿ ಹಿಟ್ಟಿನ ಹಲ್ವಾ ಸವಿಯಲು ಸಿದ್ಧವಾದಂತೆ.